2 GB RAM, 8 MP ಸೆಲ್ಫಿ ಕ್ಯಾಮೆರಾ ಇರುವ ನೋಕಿಯಾ 3 ಸ್ಮಾರ್ಟ್‌ಪೋನ್‌ ಬೆಲೆ 9,800 ಮಾತ್ರ..!!

Written By:

ಫೆಬ್ರವರಿ 26 ರಂದು ಬಾರ್ಸಿಲೋನಾದಲ್ಲಿ ನಡೆದ ವರ್ಲ್ಡ್ ಮೊಬೈಲ್ ಕಾಂಗ್ರೆಸ್‌ ನೋಕಿಯಾ ಮೂರು ಸ್ಮಾರ್ಟ್‌ಪೋನುಗಳನ್ನು ಬಿಡುಗಡೆ ಮಾಡಿದ್ದು, ನೋಕಿಯಾ 6 ಮಧ್ಯಮ ಬೆಲೆಯ ಪೋನಾಗಿದ್ದು, ನೋಕಿಯಾ 5 ಬಜೆಟ್ ಶ್ರೇಣಿಗಿಂತ ಕೊಂಚ ಬೆಲೆ ಹೆಚ್ಚಾಗಿದ್ದು, ನೋಕಿಯಾ 3 ಬಜೆಟ್ ಪೋನಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ.

2 GB RAM, 8 MP ಸೆಲ್ಫಿ ಕ್ಯಾಮೆರಾ ಇರುವ ನೋಕಿಯಾ 3 ಸ್ಮಾರ್ಟ್‌ಪೋನ್‌

ಓದಿರಿ: ನೋಕಿಯಾ 5 ಸ್ಮಾರ್ಟ್‌ಪೋನು: 13 MP ಕ್ಯಾಮೆರಾ, ಆಂಡ್ರಾಯ್ಡ್ ನ್ಯಾಗಾ..!

ನೋಕಿಯಾ 3 ಬಜೆಟ್ ಸ್ಮಾರ್ಟ್‌ಪೋನಿನ ಕುರಿತು ಹೇಳುವುದಾದರೆ, ಈ ಪೋನಿ 10,000ಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗಲಿದ್ದು, EUR 139 ಮುಖಬೆಲೆಯನ್ನು ಹೊಂದಿದೆ. ಭಾರತೀಯ ರೂಪಾಯಿಯಲ್ಲಿ 9,800 ರೂಗಳಾಗಲಿದೆ. ಈ ಪೋನಿನ ವಿಶೇಷತೆಗಳ ಕುರಿತ ಮಾಹಿತಿ ಮುಂದಿನಂತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5 ಇಂಚಿನ HD ಡಿಸ್‌ಪ್ಲೇ:

5 ಇಂಚಿನ HD ಡಿಸ್‌ಪ್ಲೇ:

ನೋಕಿಯಾ 3 ಸ್ಮಾರ್ಟ್‌ಪೋನು 5 ಇಂಚಿನ HD ಡಿಸ್‌ಪ್ಲೇ ಹೊಂದಿದ್ದು, 720x1280p ರೆಸಲ್ಯೂಷನ್ ಗುಣಮಟ್ಟದ IPS ಡಿಸ್‌ಪ್ಲೇ ಇದಾಗಿದೆ. ದೀರ್ಘಕಾಲದ ವಿಡಿಯೋ ವೀಕ್ಷಣೆಗೆ ಉತ್ತಮವಾಗಿದೆ ಎನ್ನಲಾಗಿದೆ. ಪರದೆಯ ರಕ್ಷಣೆಗಾಗಿ ಗೋರಿಲ್ಲ ಗ್ಲಾಸ್ ಅಳವಡಿಸಲಾಗಿದೆ.

ವೇಗದ ಕಾರ್ಯಚರಣೆಗೆ 1.3GHz ಪ್ರೋಸೆಸರ್:

ವೇಗದ ಕಾರ್ಯಚರಣೆಗೆ 1.3GHz ಪ್ರೋಸೆಸರ್:

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿರುವ ನೋಕಿಯಾ 3 ವೇಗದ ಕಾರ್ಯಚರಣೆಗೆ ಮೀಡಿಯಾ ಟೆಕ್ ಕ್ವಾಡ್‌ಕೋರ್ 1.3GHz ಪ್ರೋಸೆಸರ್ ಹೊಂದಿದ್ದು, ನೂತನ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಸಲಿದೆ.

2GB RAM, 16 GB ROM:

2GB RAM, 16 GB ROM:

ವೇಗದ ಕಾರ್ಯನಿರ್ವಹಣೆಗಾಗಿ ನೋಕಿಯಾ 3 ಸ್ಮಾರ್ಟ್‌ಪೋನಿನಲ್ಲಿ 2 GB RAM ಅಳವಡಿಸಲಾಗಿದ್ದು, 16 GB ಆಂತರಿಕ ಮೆಮೊರಿಯನ್ನು ಇದರಲ್ಲಿದೆ. 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

ಹಿಂದೆ ಮತ್ತು ಮುಂದೆ 8 MP ಕ್ಯಾಮೆರಾ:

ಹಿಂದೆ ಮತ್ತು ಮುಂದೆ 8 MP ಕ್ಯಾಮೆರಾ:

ನೋಕಿಯಾ 3 ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಉತ್ತಮ ಗುಣಮಟ್ಟದ ಪೋಟೋ, ಸೆಲ್ಫಿ ಮತ್ತು ವಿಡಿಯೋ ಸೆರೆಹಿಡಿಯಲು ಉತ್ತಮವಾಗಿದೆ.

2650 mAh ಬ್ಯಾಟರಿ:

2650 mAh ಬ್ಯಾಟರಿ:

ನೋಕಿಯಾ 3 ಸ್ಮಾರ್ಟ್‌ಪೋನಿನಲ್ಲಿ 2650mAh ಬ್ಯಾಟರಿ ಅಳವಡಿಸಲಾಗಿದ್ದು, 4G ಸಪೋರ್ಟ್ ಮಾಡಲಿದೆ. 143.4x71.4x8.4mm ಸುತ್ತಳತೆ ಹೊಂದಿರುವ ಈ ಪೋನು ಹಲವು ಹೊಸತನಗಳು ಈ ಪೋನಿನಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
The Nokia 3 will sport a polycarbonate body, machined aluminium frame, and will come with Corning Gorilla Glass lamination on top. to know more visit kannada.gizbot.com
Please Wait while comments are loading...
Opinion Poll

Social Counting