ಮೊಟೊ G5 ಮತ್ತು ಮೊಟೊ G5 ಪ್ಲಸ್‌ ಸ್ಮಾರ್ಟ್‌ಪೋನ್: ಬೆಲೆ ಮತ್ತು ವಿಶೇಷತೆಗಳು

Written By:

ಲಿನೊವೊ ತಯಾರಿಸುತ್ತಿರುವ ಮೊಟೊ G5 ಸ್ಮಾರ್ಟ್ಟ್‌ಪೋನು ಫೆಬ್ರವರಿ 28 ರಂದು ಬಾರ್ಸಿಲೋನಿಯಾದಲ್ಲಿ ಲಾಂಚ್ ಆಗಲಿದ್ದು, ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಈ ಪೋನು ಬಿಡುಗಡೆಯಾಗಲಿದೆ. ಮೊಟೊ G5 ಮತ್ತು ಮೊಟೊ G5 ಪ್ಲಸ್ ಪೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ.

ಮೊಟೊ G5 ಮತ್ತು ಮೊಟೊ G5 ಪ್ಲಸ್‌ ಸ್ಮಾರ್ಟ್‌ಪೋನ್: ಬೆಲೆ ಮತ್ತು ವಿಶೇಷತೆಗಳು

ಓದಿರಿ: ಗ್ರಾಮೀಣ ಭಾಗಕ್ಕೆ ಗೂಗಲ್ ನಿಂದ ಬಲೂನ್ ಇಂಟರ್‌ನೆಟ್..!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೆಟಾಲಿಕ್ ಬಾಡಿ:

ಮೆಟಾಲಿಕ್ ಬಾಡಿ:

ಮೊಟೊ G5 ಮತ್ತು ಮೊಟೊ G5 ಪ್ಲಸ್‌ ಸ್ಮಾರ್ಟ್‌ಪೋನು ಮೆಟಾಲಿಕ್ ಬಾಡಿಯನ್ನು ಹೊಂದಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಮೊದಲ ಬಾರಿಗೆ ಪೋನಿನ ಮೇಲೆ ಲಿನೋವೊ ಲೋಗೊ ಹಾಕಲಾಗಿದೆ.

ಎರಡು ಮಾದರಿಯಲ್ಲಿ ಲಭ್ಯ:

ಎರಡು ಮಾದರಿಯಲ್ಲಿ ಲಭ್ಯ:

ಈ ಪೋನು ಸಹ ಎರಡು ಮಾದರಿಯಲ್ಲಿ ಲಭ್ಯವಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, 2GB RAM ಮತ್ತು 16BG ಇಂಟರ್ನಲ್ ಮೆಮೊರಿ ಹೊಂದಿರುವ ಪೋನು ಸುಮಾರು 13,500 ರೂಗಳಿಗೆ ಲಭ್ಯವಿರಲಿದ್ದು, 3GB RAM ಮತ್ತು 16GB ಇಂಟರ್ನಲ್ ಮೆಮೊರಿ ಪೋನು ಸುಮಾರು 15,000 ರೂ.ಗಳಿಗೆ ಲಭ್ಯವಿರಲಿದೆ ಎನ್ನುವ ಸುದ್ದಿ ಲಭ್ಯವಾಗಿದೆ.

ಮೊಟೊ G5 ಪೋನಿನ ವಿಶೇಷತೆಗಳು:

ಮೊಟೊ G5 ಪೋನಿನ ವಿಶೇಷತೆಗಳು:

ಮೊಟೊ G5 ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 430 ಪ್ರೋಸೆರ್ ಹೊಂದಿದ್ದು, 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಸಾಮಾರ್ಥ್ಯವನ್ನು ಈ ಪೋನು ಹೊಂದಿದೆ. 5 ಇಂಚಿನ FHD ಡಿಸ್‌ಪ್ಲೇ ಈ ಪೋನಿನಲ್ಲಿದೆ. 13MP ಕ್ಯಾಮೆರಾ ಹಿಂಭಾಗದಲ್ಲಿದ್ದು, ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ 2800mAh ಬ್ಯಾಟರಿಯನ್ನು ಈ ಪೋನಿನಲ್ಲಿ ಅಳವಡಿಸಲಾಗಿದೆ. ಮುಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಈ ಪೋನಿನಲ್ಲಿದೆ.

ಮೊಟೊ G5 ಪ್ಲಸ್‌ ಪೋನಿನ ವಿಷೇಶತೆಗಳು:

ಮೊಟೊ G5 ಪ್ಲಸ್‌ ಪೋನಿನ ವಿಷೇಶತೆಗಳು:

ಮೊಟೊ G5 ಪ್ಲಸ್‌ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 625 ಪ್ರೋಸೆರ್ ಹೊಂದಿದ್ದು, 5.2 ಇಂಚಿನ FHD ಡಿಸ್‌ಪ್ಲೇ ಈ ಪೋನಿನಲ್ಲಿದೆ. 2GB RAM ಮತ್ತು 4GB RAM ಮಾದರಿಯಲ್ಲಿ ಲಭ್ಯವಿದ್ದು, 64 GB ಇಂಟರ್ನಲ್ ಮೆಮೊರಿ ಈ ಪೋನಿನಲ್ಲಿದ್ದು, 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಸಾಮಾರ್ಥ್ಯವನ್ನು ಈ ಪೋನು ಹೊಂದಿದೆ. 12MP ಕ್ಯಾಮೆರಾ ಹಿಂಭಾಗದಲ್ಲಿದ್ದು, ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ 3000mAh ಬ್ಯಾಟರಿಯನ್ನು ಈ ಪೋನಿನಲ್ಲಿ ಅಳವಡಿಸಲಾಗಿದೆ. ಮುಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಈ ಪೋನಿನಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
It is no longer a secret that Motorola will launch Moto G5 and Moto G5 Plus at Mobile World Congress 2017 in Barcelona on February 26. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot