Subscribe to Gizbot

ಮತ್ತೆಂದು ಸಿಗದ ಆಫರ್: ಮೊಟೊ G5S ಸ್ಮಾರ್ಟ್‌ಫೋನ್ ಬೆಲೆಯಲ್ಲಿ ರೂ.5000 ಕಡಿತ..!

Written By:

ಲಿನೊವೊ ಒಡೆತನದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಮೊಟೊರೊಲಾ ಮಾರುಕಟ್ಟೆಗೆ ಕಳೆದ ವರ್ಷ ಲಾಂಚ್ ಮಾಡಿದ್ದ ಮೊಟೊ G5S ಸ್ಮಾರ್ಟ್‌ಫೋನ್, ಸಾಕಷ್ಟು ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಮೊಟೊ G5S ಮತ್ತು ಮೊಟೊ G5S ಪ್ಲಸ್ ಎಂಬ ಎರಡು ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದ ಈ ಸ್ಮಾರ್ಟ್‌ಫೋನ್, ಕ್ರಮವಾಗಿ ರೂ.14,999 ಹಾಗೂ ರೂ.15,999ಕ್ಕೆ ಮಾರಾಟವಾಗುತಿತ್ತು. ಸದ್ಯ ಮಾರುಕಟ್ಟೆಗೆ ಮೊಟೊ G6 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಮೊಟೊ ಪರಿಚಯಿಸುವ ಸನಿಹದಲ್ಲಿದ್ದು, ಈ ಹಿನ್ನಲೆಯಲ್ಲಿ ಮೊಟೊ G5S ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಕಡಿತವನ್ನು ಮಾಡಿದೆ.

ಮತ್ತೆಂದು ಸಿಗದ ಆಫರ್: ಮೊಟೊ G5S ಸ್ಮಾರ್ಟ್‌ಫೋನ್ ಬೆಲೆಯಲ್ಲಿ ರೂ.5000 ಕಡಿತ..!

ಮೊಟೊ G5S ಬೆಲೆಯಲ್ಲಿ ರೂ.5000 ಕಡಿಮೆ ಮಾಡಿರುವ ಮೊಟೊರೊಲಾ, ರೂ.9999ಕ್ಕೆ ಮಾರಾಟ ಮಾಡಲು ಮುಂದಾಗಿದ್ದು, ಆದರೆ ಈ ಸ್ಮಾರ್ಟ್‌ಫೋನ್ ಮೇಲಿನ ಆಫರ್ ಏಪ್ರಿಲ್ 11ರ ವರೆಗೆ ಮಾತ್ರವೇ ಲಭ್ಯವಿರಲಿದೆ ಎನ್ನಲಾಗಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ ಮಾತ್ರವೇ ಮಾರಾಟವಾಗಲಿದೆ. ಇಂದು, ನಾಳೆ ಮತ್ತು ನಾಡಿದ್ದು ಮಾತ್ರವೇ ಮೊಟೊ G5S ಸ್ಮಾರ್ಟ್‌ಫೋನ್ ಭರ್ಜರಿ ರಿಯಾಯಿತಿ ಬೆಲೆಯಲ್ಲಿ ದೊರೆಯಲಿದೆ.

5.2 ಇಂಚಿನ FHD ಡಿಸ್‌ಪ್ಲೇಯನ್ನು ಹೊಂದಿರುವ ಮೊಟೊ G5S ಸ್ಮಾರ್ಟ್‌ಫೋನಿನಲ್ಲಿ ಡಿಸ್‌ಪ್ಲೇ ಸುರಕ್ಷತೆಗಾಗಿ ಕಾರ್ನಿಂಗ್ ಗೊರಿಲ್ಲ ಗ್ಲಾಸ್ 3 ಅನ್ನು ಅಳವಡಿಸಲಾಗಿದ್ದು, 2800mAh ಬ್ಯಾಟರಿಯನ್ನು ನೀಡಲಾಗಿದೆ. 16:9 ಅನುಪಾತದ ಡಿಸ್‌ಪ್ಲೇ ಇದಾಗಿದ್ದು, ಮುಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ.

ಓದಿರಿ: ಏರ್‌ಟೆಲ್‌ನಿಂದ ಮತ್ತೊಂದು ಭರ್ಜರಿ IPL ಪ್ಲಾನ್: ಹೆಚ್ಚು ಡೇಟಾ, ಉಚಿತ IPL, ಮತ್ತಷ್ಟು..!

ಮೊಟೊ G5S ಸ್ಮಾರ್ಟ್‌ಫೋನಿನಲ್ಲಿ ಆಕ್ವಾ ಕೋರ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 430 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, 3GB RAM ಮತ್ತು 32GB ಇಂಟರ್ನಲ್ ಮೆಮೊರಿಯೊಂದಿಗೆ ಲಭ್ಯವಿರಲಿದೆ. ಇದರೊಂದಿಗೆ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

How To Link Aadhaar With EPF Account Without Login (KANNADA)

ಮೊಟೊ G5S ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ 16MP ಕ್ಯಾಮೆರಾವನ್ನು ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಎರಡು ಕಡೆಗಳಲ್ಲಿ LED ಫ್ಲಾಷ್ ಲೈಟ್ ಗಳನ್ನು ನೀಡಲಾಗಿದೆ. ಅಲ್ಲದೇ ಆಂಡ್ರಾಯ್ಡ್ 7.1ನ್ಯಾಗಾದಲ್ಲಿ ಈ ಸ್ಮಾರ್ಟ್‌ಫೋನ್‌ ಕಾರ್ಯಚರಣೆಯನ್ನು ನಡೆಸಲಿದೆ ಎನ್ನಲಾಗಿದೆ. ಸ್ಟಾಕ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬೇಕು ಎನ್ನುವವರಿಗೆ ಇದು ಉತ್ತಮವಾದ ಆಯ್ಕೆಯಾಗಲಿದೆ.

English summary
Moto G5S now Rs 5,000 cheaper but for a limited time. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot