ಮೊಟೊ G 7 ಮತ್ತು G 7 ಪ್ಲಸ್ ಸ್ಮಾರ್ಟ್‌ಫೋನ್‌ಗಳ ರಿಲೀಸ್ ಡೇಟ್ ಲೀಕ್.!
ಬಹುನಿರೀಕ್ಷಿತ ಮೊಟೊರೊಲಾ ಕಂಪನಿಯ 'ಜಿ' ಸರಣಿಯ ಸ್ಮಾರ್ಟ್‌ಫೋನ್‌ಗಳಾದ 'ಮೊಟೊ ಜಿ 7' ಮತ್ತು 'ಜಿ 7 ಪ್ಲಸ್' ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ದಿನಾಂಕವನ್ನು ಬಹಳ ಕುತೂಹಲದಿಂದ ಕಾಯುತ್ತಿದ್ದ ಗ್ರಾಹಕರಿಗೆ ಸಿಹಿಸುದ್ದಿ ಒಂದಿದೆ. ಅದೆನೆಂದರೇ ಕಂಪನಿಯು ಇದೇ ಫೆಬ್ರವರಿ 7ನೇ ತಾರೀಖಿನಂದು 'ಮೊಟೊ ಜಿ 7' ಮತ್ತು 'ಜಿ 7 ಪ್ಲಸ್' ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದು ಎನ್ನುವ ಮಾಹಿತಿ ಲೀಕ್ ಆಗಿವೆ.

ಹೌದು, ಮೊಟೊರೊಲಾ ಕಂಪನಿಯು ತನ್ನ ಮೊಟೊ ಜಿ 7' ಮತ್ತು 'ಜಿ 7 ಪ್ಲಸ್' ಸ್ಮಾರ್ಟ್‌ಫೋನ್‌ಗಳ ಮೊದಲು ಯುರೋಪ್‌ನಲ್ಲಿ ಬಿಡುಗಡೆ ಮಾಡುವುದು ಎಂಬ ಸುದ್ದಿಯು ಲೀಕ್ ಆಗಿದ್ದು, ಈ ಎರಡು ಸ್ಮಾರ್ಟ್‌ಫೋನ್‌ಗಳು 6.2 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಮತ್ತು ಅತ್ಯುತ್ತಮ ಬ್ಯಾಟರಿ ಬಾಳಿಕೆ ಸಾಮರ್ಥ್ಯವನ್ನು ಹೊಂದಿರಲಿವೆ. ಇನ್ನೂಳಿದಂತೆ ಈ ಸ್ಮಾರ್ಟ್‌ಫೋನ್‌ಗಳ ಇತರೆ ಫೀಚರ್ಸ್‌ಗಳು ಆಕರ್ಷಕವಾಗಿದ್ದು, ಗ್ರಾಹಕರ ಕುತೂಹಲವನ್ನು ಹೆಚ್ಚಿಸಿದೆ. ಹಾಗಾದರೇ ಮೊಟೊ ಜಿ 7' ಮತ್ತು 'ಜಿ 7 ಪ್ಲಸ್' ಸ್ಮಾರ್ಟ್‌ಫೋನ್‌ಗಳ ವಿಶೇಷ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ರಚನೆ ಮತ್ತು ಸ್ಕ್ರೀನ್
ಮೊಟೊ ಜಿ 7' ಮತ್ತು 'ಜಿ 7 ಪ್ಲಸ್' ಸ್ಮಾರ್ಟ್‌ಫೋನ್‌ಗಳ ಒಂದಕ್ಕೊಂದು ಬಹಳ ಸಾಮ್ಯ ಹೊಂದಿವೆ, ಈ ಸ್ಮಾರ್ಟ್‌ಫೋನ್ 75.4 mm ಅಗಲ, 156.8 mm ಎತ್ತರ ಹೊಂದಿವೆ ಮತ್ತು 8mm ನಷ್ಟು ತಿಳುವಾಗಿವೆ. ಇದರೊಂದಿಗೆ 1080 x 2270 ರೆಸಲ್ಯೂಶನ್ ಸಾಮರ್ಥ್ಯ ಇರುವ 6.2 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ನೀಡಲಾಗಿದೆ. ಡಿಸ್‌ಪ್ಲೇ ಅನುಪಾತವು 19.5:9 ಆಗಿದೆ

ಪ್ರೊಸೆಸರ್
ಮೊಟೊ ಜಿ 7 ಸ್ಮಾರ್ಟ್‌ಫೋನ್ ಆಕ್ಟಾಕೋರ್ ಕ್ವಾಲಂ ಸ್ನಾಪ್‌ಡ್ರಾಗನ್ 632 SoC ಪ್ರೊಸೆಸರ್ ಹೊಂದಿದೆ ಇದರೊಂದಿಗೆ 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇದೇ ರೀತಿ ಮೊಟೊ ಜಿ 7 ಪ್ಲಸ್ ಸ್ಮಾರ್ಟ್‌ಫೋನ್ ಸಹ ಆಕ್ಟಾಕೋರ್ ಕ್ವಾಲಂ ಸ್ನಾಪ್‌ಡ್ರಾಗನ್ 636 SoC ಪ್ರೊಸೆಸರ್ ನೊಂದಿಗೆ 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ.

ಕ್ಯಾಮೆರಾ
ಮೊಟೊ ಜಿ 7 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳನ್ನು ಹೊಂದಿದ್ದು, 12+5 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿವೆ ಮತ್ತು ಸೆಲ್ಫೀಗಾಗಿ 8 ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿದ ಕ್ಯಾಮೆರಾ ನೀಡಲಾಗಿದೆ. ಇನ್ನು, ಮೊಟೊ ಜಿ 7 ಪ್ಲಸ್ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ 16+5 ಮೆಗಾಪಿಕ್ಸಲ್ ಸಾಮರ್ಥ್ಯದ ಎರಡು ಕ್ಯಾಮೆರಾ ಹೊಂದಿದ್ದು, ಇದರೊಂದಿಗೆ ಮುಂಬದಿಯಲ್ಲಿ 12 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ನೀಡಿದ್ದಾರೆ.

ಲಭ್ಯತೆ ಮತ್ತು ಬೆಲೆ
ಮೊಟೊ ಕಂಪನಿಯು ತನ್ನ ಬಹುನಿರೀಕ್ಷಿತ 'ಮೊಟೊ ಜಿ 7' ಮತ್ತು 'ಜಿ 7 ಪ್ಲಸ್' ಸ್ಮಾರ್ಟ್‌ಫೋನ್‌ಗಳನ್ನು ಇದೇ ಫೆಬ್ರವರಿ 7ನೇ ತಾರೀಖಿನಂದು ಯುರೋಪ್‌ದಲ್ಲಿ ಬಿಡುಗಡೆ ಮಾಡಲಿದೆ. ಹಾಗೇ ಶೀಘ್ರದಲ್ಲಿ ಭಾರತದ ಮಾರುಕಟ್ಟೆಗೂ ಲಾಂಚ್ ಮಾಡುವುದು ಎಂದು ಹೇಳಲಾಗುತ್ತಿದೆ. ಇನ್ನೂ ಮೊಟೊ ಜಿ 7' ಸ್ಮಾರ್ಟ್‌ಫೋನ್ ಬೆಲೆಯು 24,000ರೂ.ಗಳು ಮತ್ತು ಜಿ 7 ಪ್ಲಸ್' ಸ್ಮಾರ್ಟ್‌ಫೋನಿನ ಬೆಲೆಯು 29,000ರೂ.ಗಳು ಇರಲಿವೆ ಎಂದು ಅಂದಾಜಿಸಲಾಗಿದೆ.


Click it and Unblock the Notifications








