ಮೊಟೊದ ಎರಡು ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್!. ಗಮನಸೆಳೆವ ಬೆಲೆ ಮತ್ತು ಫೀಚರ್ಸ್!
ಜಿ ಸರಣಿಯಲ್ಲಿ ನಾಲ್ಕು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಭಾರೀ ಸದ್ದು ಮಾಡಿದ್ದ ಮೊಟೊ ಸಂಸ್ಥೆಯು ಇದೀಗ ದೇಶಿಯ ಗ್ರಾಹಕರಿಗೆ ಸಂತಸದ ಸುದ್ದಿಯನ್ನು ನೀಡಿದೆ. ಕಂಪನಿಯ ಬಹುನಿರೀಕ್ಷಿತ ಮೊಟೊ ಜಿ7 ಸ್ಮಾರ್ಟ್‌ಫೋನ್ ಜೊತೆಗೆ ಮೊಟೊ ಒನ್ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ರಿಲೀಸ್ ಮಾಡಿದ್ದು, ಗ್ರಾಹಕರಿಗೆ ಭಾರೀ ಅಚ್ಚರಿ ಮೂಡಿಸಿದೆ.

ಹೌದು, ಮೊಟೊರೊಲಾ ಸಂಸ್ಥೆಯು ತನ್ನ 'ಮೊಟೊ ಜಿ7' ಮತ್ತು 'ಮೊಟೊ ಒನ್' ಹೆಸರಿನ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಈ ಎರಡು ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ RAM ಮತ್ತು ಪ್ರೊಸೆಸರ್‌ನೊಂದಿಗೆ ನೂತನ ಫೀಚರ್ಸ್‌ಗಳನ್ನು ಹೊಂದಿವೆ. ಹಾಗಾದರೇ 'ಮೊಟೊ ಜಿ7' ಮತ್ತು 'ಮೊಟೊ ಒನ್' ಸ್ಮಾರ್ಟ್‌ಫೋನ್‌ಗಳು ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಮೊಟೊ ಜಿ7 ಡಿಸ್‌ಪ್ಲೇ
ಮೊಟೊ ಜಿ 7 ಸ್ಮಾರ್ಟ್‌ಫೋನ್ 1080 x 2270 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ಇರುವ 6.2 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇ ಮತ್ತು ಫೋನಿನ ಬಾಹ್ಯ ಬಾಡಿಯ ನಡುವಿನ ಅನುಪಾತವು 19.5:9 ಆಗಿದೆ. ಡಿಸ್‌ಪ್ಲೇಯ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 3 ಯನ್ನು ಒದಗಿಸಲಾಗಿದ್ದು, ಡಿಸ್‌ಪ್ಲೇಯು ಟಿಯರ್‌ಡ್ರಾಪ್ ನಾಚ್ ಹೊಂದಿದೆ.

ಮೊಟೊ ಜಿ7 ಪ್ರೊಸೆಸರ್
ಮೊಟೊ ಜಿ 7 ಸ್ಮಾರ್ಟ್‌ಫೋನ್ ಆಕ್ಟಾಕೋರ್ ಕ್ವಾಲಂ ಸ್ನ್ಯಾಪ್‌ಡ್ರಾಗನ್ 632 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ ಪೈ ಆಪರೇಟಿಂಗ್ ಸಿಸ್ಟಮ್ ವೇಗದ ಕೆಲಸ ನಿರ್ವಹಿಸಲಿದೆ. ಇದರೊಂದಿಗೆ 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹವನ್ನು 512GBವರೆಗೂ ಹೆಚ್ಚಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಮೊಟೊ ಜಿ7 ಕ್ಯಾಮೆರಾ
ಮೊಟೊ ಜಿ 7 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳನ್ನು ಹೊಂದಿದ್ದು, ಮೊದಲ ಕ್ಯಾಮೆರಾ f/1.8 ಅಪರ್ಚರ್ ನೊಂದಿಗೆ 12 ಮೆಗಾಪಿಕ್ಸಲ್ ಮತ್ತು ಎರಡನೇ ಕ್ಯಾಮೆರಾ f/2.2 ಅಪರ್ಚರ್ ನೊಂದಿಗೆ 5 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿವೆ ಮತ್ತು ಸೆಲ್ಫಿ ಕ್ಯಾಮೆರಾವು f/2.2 ಅಪರ್ಚರ್ ಹೊಂದಿದ್ದು, 8 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಒದಗಿಸಲಾಗಿದೆ.

ಮೊಟೊ ಜಿ7 ಬ್ಯಾಟರಿ
ಮೊಟೊ ಜಿ 7 ಸ್ಮಾರ್ಟ್‌ಫೋನ್ 3,000mAh ಸಾಮರ್ಥ್ಯವನ್ನು ಹೊಂದಿದ್ದು. ಒಂದು ದಿನ ಬ್ಯಾಟರಿ ಬಾಳಿಕೆ ಶಕ್ತಿಯನ್ನು ಹೊಂದಿದೆ. ಇದರೊಂದಿಗೆ 15W ಟರ್ಬೊ ಪವರ್ ಫಾಸ್ಟ್ ಚಾರ್ಜರ್ ಸೌಲಭ್ಯವನ್ನು ಒದಗಿಸಲಾಗಿದ್ದು, ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜ್ ಪಡೆದುಕೊಳ್ಳಲಿದೆ.

ಮೊಟೊ ಒನ್ ಡಿಸ್‌ಪ್ಲೇ
ಮೊಟೊ ಒನ್ ಸ್ಮಾರ್ಟ್‌ಫೋನ್ 720×1520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ಇರುವ 5.9 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ರಚನೆಯ ಅನುಪಾತವು 19:9 ಆಗಿದೆ. ಡಿಸ್‌ಪ್ಲೇಯ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್2.5D ಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯು ವೈಲ್ಡ್ ನಾಚ್ ಹೊಂದಿದೆ.

ಮೊಟೊ ಒನ್ ಪ್ರೊಸೆಸರ್
ಮೊಟೊ ಒನ್ ಸ್ಮಾರ್ಟ್‌ಫೋನ್ ಆಕ್ಟಾಕೋರ್ ಕ್ವಾಲಂ ಸ್ನ್ಯಾಪ್‌ಡ್ರಾಗನ್ 625 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ ಓರೊಯೊ ಆಪರೇಟಿಂಗ್ ಸಿಸ್ಟಮ್ ವೇಗದ ಕೆಲಸ ನಿರ್ವಹಿಸಲಿದೆ. ಇದರೊಂದಿಗೆ 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹವನ್ನು 256GBವರೆಗೂ ಹೆಚ್ಚಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಮೊಟೊ ಒನ್ ಕ್ಯಾಮೆರಾ
ಮೊಟೊ ಒನ್ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾ f/2.0 ಅಪರ್ಚರ್ ನೊಂದಿಗೆ 13 ಮೆಗಾಪಿಕ್ಸಲ್ ಮತ್ತು ಸೆಕೆಂಡರಿ ಕ್ಯಾಮೆರಾ f/2.4 ಅಪರ್ಚರ್ ನೊಂದಿಗೆ 2 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿವೆ ಮತ್ತು ಸೆಲ್ಫಿ ಕ್ಯಾಮೆರಾವು f/2.2 ಅಪರ್ಚರ್ ಹೊಂದಿದ್ದು, 8 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಒದಗಿಸಲಾಗಿದೆ.

ಮೊಟೊ ಒನ್ ಬ್ಯಾಟರಿ
ಮೊಟೊ ಒನ್ ಸ್ಮಾರ್ಟ್‌ಫೋನ್ 3,000mAh ಸಾಮರ್ಥ್ಯವನ್ನು ಹೊಂದಿದ್ದು. ಒಂದು ದಿನ ಬ್ಯಾಟರಿ ಬಾಳಿಕೆ ಶಕ್ತಿಯನ್ನು ಹೊಂದಿದೆ. ಇದರೊಂದಿಗೆ ಟರ್ಬೊ ಪವರ್ ಫಾಸ್ಟ್ ಚಾರ್ಜರ್ ಸೌಲಭ್ಯವನ್ನು ಒದಗಿಸಲಾಗಿದ್ದು, ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜ್ ಪಡೆದುಕೊಳ್ಳಲಿದೆ.

ಬೆಲೆ ಮತ್ತು ಲಭ್ಯತೆ
ಮೊಟೊ ಕಂಪನಿಯ 'ಮೊಟೊ ಜಿ 7' ಸ್ಮಾರ್ಟ್‌ಫೋನ್ ಬೆಲೆಯು 16,999 ರೂ.ಗಳ ಆಗಿದ್ದು, ಹಾಗೇ 'ಮೊಟೊ ಒನ್' ಸ್ಮಾರ್ಟ್‌ಫೋನ್ ದರವು 13,999ರೂ.ಗಳು ಆಗಿದೆ. ಪ್ರಮುಖ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಮತ್ತು ಮೊಟೊ ಹಬ್ ಸ್ಟೋರ್‌ಗಳಲ್ಲಿ ಈ ಎರಡು ಸ್ಮಾರ್ಟ್‌ಫೋನ್‌ಗಳು ದೊರೆಯಲಿವೆ.


Click it and Unblock the Notifications








