ಮೊಟೊ 'G7 ಪವರ್' ಸ್ಮಾರ್ಟ್‌ಫೋನಿನ ಸೇಲ್ ಆರಂಭ.!!

|

ಜನಪ್ರಿಯ ಮೊಟೊರೊಲಾ ಕಂಪನಿಯು ತನ್ನ 'G' ಸರಣಿಯ ಸ್ಮಾರ್ಟ್‌ಫೋನ್‌ಗಳು ಮಿಡ್‌ರೇಂಜ್‌ ದರದಲ್ಲಿ ಬರಲಿವೆ ಎಂದು ಹೇಳಿ ಭಾರತೀಯ ಗ್ರಾಹಕರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಇದೀಗ ಮತ್ತೆ ಕಂಪನಿಯು ಭಾರತೀಯ ಗ್ರಾಹಕರಿಗೆ ಖುಷಿ ಸಂಗತಿಯೊಂದನ್ನು ತಿಳಿಸಿದೆ. ಅದೆನೆಂದರೇ ಇಂದಿನಿಂದ ದೇಶಿಯ ಮಾರುಕಟ್ಟೆಯಲ್ಲಿ ತನ್ನ G ಸರಣಿಯ 'ಮೊಟೊ G7 ಪವರ್' ಸ್ಮಾರ್ಟ್‌ಫೋನ್‌ ಸೇಲ್ ಆರಂಭ.

ಮೊಟೊ 'G7 ಪವರ್' ಸ್ಮಾರ್ಟ್‌ಫೋನಿನ ಸೇಲ್ ಆರಂಭ.!!

ಹೌದು, ಜನಪ್ರಿಯ ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಜಾಲತಾಣದಲ್ಲಿ ಇಂದಿನಿಂದ 'ಮೊಟೊ G7 ಪವರ್' ಸ್ಮಾರ್ಟ್‌ಫೋನ್‌ ಸೇಲ್ ಆರಂಭವಾಗಿದ್ದು, ನಿರೀಕ್ಷೆಯಂತೆ ಇದೊಂದು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಆಗಿದೆ. ಮೊಟೊ G7 ಪವರ್ ಸ್ಮಾರ್ಟ್‌ಫೋನ್ 4GB RAM ಮತ್ತು 64 GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನಿನ ಬೆಲೆಯು ಫ್ಲಿಪ್‌ಕಾರ್ಟ್‌ನಲ್ಲಿ 13,999ರೂ.ಗಳು ಆಗಿವೆ.

ಮೊಟೊ 'G7 ಪವರ್' ಸ್ಮಾರ್ಟ್‌ಫೋನಿನ ಸೇಲ್ ಆರಂಭ.!!

ಮೊಟೊದ G ಸರಣಿಯ ಇನ್ನುಳಿದ ಮೊಟೊ G7, ಮೊಟೊ G7 ಪ್ಲಸ್, ಮೊಟೊ G7 ಪ್ಲೇ ಸ್ಮಾರ್ಟ್‌ಫೋನ್‌ಗಳು ಬೆಲೆಯು ಸಹ ಮಿಡ್‌ ರೇಂಜ್‌ನಲ್ಲಿಯೇ ಇರಲಿದ್ದು, ಅವುಗಳ ಬಗ್ಗೆ ಕಂಪನಿಯು ಅಧಿಕೃತ ಮಾಹಿತಿ ತಿಳಿಸಿಲ್ಲ. ಈ ಮೂಲಕ ಮೊಟೊರೊಲಾ ಕಂಪನಿಯು ಅಗ್ಗದ ದರದಲ್ಲಿ ತನ್ನ G ಸರಣಿಯನ್ನು ಪರಿಚಯಿಸುವುದರ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಗ್ರಾಹಕ ಬಳಗವನ್ನು ಹೊಂದುವ ಕಾತರದಲ್ಲಿದೆ. ಹಾಗಾದರೇ ಮೊಟೊ G7 ಪವರ್ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ನೋಡೋಣ ಬನ್ನಿರಿ.

ಡಿಸೈನ್

ಡಿಸೈನ್

ಮೊಟೊ ಜಿ7 ಪವರ್ ಸ್ಮಾರ್ಟ್‌ಫೋನ್ ಪವರ್‌ಫುಲ್ ಲುಕ್ ಅನ್ನು ಹೊಂದಿದ್ದು, ಸ್ಮಾರ್ಟ್‌ಫೋನಿನ ನಾಲ್ಕು ಮೂಲೆಗಳು ಅರ್ಧ ವೃತ್ತಾಕಾರದಲ್ಲಿದ್ದು, ಕಡಿಮೆ ಅಂಚನ್ನು ಹೊಂದಿದೆ. ಮುಂಬದಿಯಲ್ಲಿ ಡಿಸ್‌ಪ್ಲೇಯ ಕೆಳಗಡೆ ಕಂಪನಿಯ ಹೆಸರು ನಮೂದಿಸಲಾಗಿದ್ದು, ಡಿಸ್‌ಪ್ಲೇ ಮೇಲ್ಭಾಗದ ಮರ್ಧಯದಲ್ಲಿ ಸೆಲ್ಫೀ ಕ್ಯಾಮೆರಾ ನೀಡಿದ್ದಾರೆ. ಇನ್ನೂ ಹಿಂಬದಿಯಲ್ಲಿ ವೃತ್ತಾಕಾರದಲ್ಲಿ ಬ್ಯಾಕ್‌ಸೈಡ್‌ ಕ್ಯಾಮೆರಾ ನೀಡಲಾಗಿದ್ದು, ಇದರ ಕೆಳಗಡೆ ಮೊಟೊ ಲೋಗೊ ಇದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಮೊಟೊ ಜಿ7 ಪವರ್ ಸ್ಮಾರ್ಟ್‌ಫೋನ್ 19:9 ರಷ್ಟು ಡಿಸ್‌ಪ್ಲೇ ಅನುಪಾತದಲ್ಲಿ 720x1570 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.2 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇದರೊಂದಿಗೆ ಸ್ಕ್ರೀನ್ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌ನ್ನು ಅಳವಡಿಸಲಾಗಿದೆ. ಬಂದಿರುವ ನೋಟಿಫಿಕೇಶನ್‌ ಮೇಲೆ ಕ್ವಿಕ್ ಆಗಿ ಕಣ್ಣಾಡಿಸಲು ಡಿಸ್‌ಪ್ಲೇಯಲ್ಲಿ ಅನುಕೂಲ ಮಾಡಲಾಗಿದೆ.

ಪ್ರೊಸೆಸರ್

ಪ್ರೊಸೆಸರ್

ಈ ಸ್ಮಾರ್ಟ್‌ಫೋನ್ ಆಕ್ಟಾಕೋರ್ ಸ್ನ್ಯಾಪ್‌ಡ್ರಾಗನ್ 632 SoC ಪ್ರೊಸೆಸರ್ ಅನ್ನು ಹೊಂದಿದ್ದು, ಇದರೊಂದಿಗೆ 4GB ಸಾಮರ್ಥ್ಯ RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಎಸ್‌ಡಿ ಕಾರ್ಡ್‌ ಮೂಲಕ 512GB ಸಾಮರ್ಥ್ಯದವರೆಗೂ ಬಾಹ್ಯ ಸಂಗ್ರಹ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಮೊಟೊರೊಲಾದ ಜಿ7 ಪವರ್ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 12 ಮೆಗಾ ಪಿಕ್ಸಲ್ ಸಾಮರ್ಥ್ಯದ ಸ್ಪೋರ್ಟ್ಸಿ ಕ್ಯಾಮೆರಾವನ್ನು ಹೊಂದಿದ್ದು, f/1.8 ಅಪರ್ಚರ್ ನೀಡಲಾಗಿದೆ. ಇನ್ನೂ ಸೆಲ್ಫೀಗಾಗಿ 8 ಮೆಗಾಪಿಕ್ಸಲ್ ಕ್ಯಾಮೆರಾವನ್ನು ನೀಡಿದ್ದು, f/2.2 ಅಪರ್ಚರ್ ಹೊಂದಿದೆ. ಮೊಟೊ ಸಂಸ್ಥೆಯು ತನ್ನ ಕ್ಯಾಮೆರಾ ಗುಣಮಟ್ಟವು ಉತ್ತಮವಾಗಿರುವುದೆಂಬ ವಿಶ್ವಾಸವನ್ನು ಈಗಾಗಲೇ ಗ್ರಾಹಕರಲ್ಲಿ ಮೂಡಿಸಿದೆ.

ಬ್ಯಾಟರಿ ಬಲ

ಬ್ಯಾಟರಿ ಬಲ

ಮೊಟೊರೊಲಾ ಜಿ7 ಪವರ್ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದ್ದು, ಈ ಬ್ಯಾಟರಿಯು ಎರಡು ದಿನಗಳವರೆಗೂ ಬಾಳಕೆ ಬರುವ ಶಕ್ತಿಯುತ ಸಾಮರ್ಥ್ಯವನ್ನು ಹೊಂದಿರಲಿದೆ. ಇದರೊಂದಿಗೆ 15W ಸಾಮರ್ಥ್ಯದ ಟರ್ಬೊ ಚಾರ್ಜರ್ ಅನ್ನು ನೀಡಲಾಗುವುದು.

Best Mobiles in India

English summary
Moto G7 Power price in India has once again been leaked before its official India launch and while it will be launched alongside the Moto G7, Moto G7 Plus and Moto G7 Play. It is expected to launch with 4GB RAM

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X