Home
ಮೊಬೈಲ್

ಮೊಟೊ G8 ಪ್ಲಸ್‌ ವಿಮರ್ಶೆ : ಅಗ್ಗದ ಬೆಲೆಗೆ ಕಂಫರ್ಟ್‌ ಸ್ಮಾರ್ಟ್‌ಫೋನ್!

ಮೊಟೊರೊಲಾ ಸಂಸ್ಥೆಯು ಇತ್ತೀಚಿಗೆ G ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಬಹುತೇಕ ಫೋನ್‌ಗಳು ಬಜೆಟ್‌ ಬೆಲೆಯಲ್ಲಿ ಗುರುತಿಸಿಕೊಂಡಿವೆ. ಅದರ ಮುಂದುವರಿದ ಭಾಗವಾಗಿ G ಸರಣಿಯಲ್ಲಿ ಸಂಸ್ಥೆಯು ಮೊಟೊ G8 ಪ್ಲಸ್‌ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದ್ದು, ಕ್ಯಾಮೆರಾ, ಡಿಸೈನ್, ಪ್ರೊಸೆಸರ್‌ ಮತ್ತು ಪ್ರೈಸ್‌ಟ್ಯಾಗ್‌ನಿಂದಾಗಿ ಈ ಸ್ಮಾರ್ಟ್‌ಫೋನ್ ಸೆಂಟರ್‌ ಆಫ್ ಅಟ್ರ್ಯಾಕ್ಷನ್ ಆಗಿದೆ.

ಮೊಟೊ G8

ದೇಶದ ಮಾರುಕಟ್ಟೆಯಲ್ಲಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಇರುವುದನ್ನು ಅರ್ಥೈಸಿಕೊಂಡಿರುವ ಮೊಟೊ ಸಂಸ್ಥೆಯು ಸದ್ಯದ ಅಗತ್ಯ ಫೀಚರ್ಸ್‌ಗಳನ್ನು 'ಮೊಟೊ G8 ಪ್ಲಸ್' ಫೋನಿನಲ್ಲಿ ತುಂಬಿದೆ. ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 48ಎಂಪಿ ಸೆನ್ಸಾರ್‌ನಲ್ಲಿದ್ದು, ಜೊತೆಗೆ 4,000mAh ಬ್ಯಾಟರಿ ಲೈಫ್‌ ಪ್ರಮುಖ ಹೈಲೈಟ್ಸ್‌ಗಳಾಗಿವೆ. ಹಾಗಾದರೇ ಮೊಟೊ G8 ಪ್ಲಸ್‌ ಖರೀದಿಗೆ ಯೋಗ್ಯವೇ?.ಮತ್ತು ಪ್ರಮುಖ ಫೀಚರ್ಸ್‌ಗಳ ಕಾರ್ಯವೈಖರಿ ಹೇಗಿವೆ ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

ಮೊಟೊ G8 ಪ್ಲಸ್‌ ಸ್ಮಾರ್ಟ್‌ಫೋನ್‌ 1080x2280 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ LCD ಮಾದರಿಯ ಮ್ಯಾಕ್ಸ್‌ ವಿಷನ್‌ ಡಿಸ್‌ಪ್ಲೇಯನ್ನು ಹೊಂದಿದ್ದು, U ಶೇಪ್ಡ್ ನಾಚ್‌ ಅನ್ನು ಪಡೆದುಕೊಂಡಿದೆ. ಡಿಸ್‌ಪ್ಲೇಯ ಅನುಪಾತವು 19:9 ಆಗಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 400ppi ಆಗಿದೆ. ದೃಶ್ಯಗಳು ಹೆಚ್ಚು ಪ್ರಖರವಾಗಿ ಕಾಣಿಸುತ್ತವೆ. ಈ ಫೋನ್ ಗ್ಲಾಸಿ ಲುಕ್‌ ಪಡೆದಿದ್ದು, ಸುತ್ತಲಿನ ಕಡಿಮೆ ಅಂಚು ಡಿಸ್‌ಪ್ಲೇಯ ಅಂದ ಹೆಚ್ಚಿಸಿದೆ.

ಪ್ರೊಸೆಸರ್‌ ಸಾಮರ್ಥ್ಯ ಹೇಗಿದೆ

ಪ್ರೊಸೆಸರ್‌ ಸಾಮರ್ಥ್ಯ ಹೇಗಿದೆ

ಮೊಟೊ G8 ಪ್ಲಸ್‌ ಸ್ಮಾರ್ಟ್‌ಫೋನ್‌ 2.0GHz ವೇಗದ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 9 ಪೈ ಓಎಸ್‌ ಪ್ರೊಸೆಸರ್‌ಗೆ ಹೆಚ್ಚಿನ ಬೆಂಬಲವನ್ನು ಒದಗಿಸಲಿದೆ. ಇದರೊಂದಿಗೆ ಅಡ್ರೆನೊ 610 GPU ಸಹ ಇದ್ದು, ಗೇಮಿಂಗ್‌ಗೂ ಉತ್ತಮ ಅನಿಸಲಿದೆ. ಈ ಫೋನ್ 4GB RAM + 64GB ಸ್ಟೋರೇಜ್ ವೇರಿಯಂಟ್‌ನ ಸಿಂಗಲ್‌ ವೇರಿಯಂಟ್‌ ಹೊಂದಿದೆ. ಹಾಗೆಯೇ ಆಂಡ್ರಾಯ್ಡ್‌ 10 ಓಎಸ್‌ ಅಪ್‌ಡೇಟ್‌ ಸಾಧ್ಯತೆಗಳನ್ನು ಪಡೆದಿದೆ.

ಕ್ಯಾಮೆರಾ ಕ್ವಾಲಿಟಿ

ಕ್ಯಾಮೆರಾ ಕ್ವಾಲಿಟಿ

ಮೊಟೊ G8 ಪ್ಲಸ್‌ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ (ಸ್ಯಾಮ್‌ಸಂಗ್‌ನ ISOCELL GM1) ಸಾಮರ್ಥ್ಯ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ ಹೊಂದಿದ್ದು, ತೃತೀಯ ಕ್ಯಾಮೆರಾವು 5ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 25ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ನೈಟ್‌ ಮೋಡ್ ಆಯ್ಕೆ ಪರಿಣಾಮಕಾರಿಯಾಗಿದ್ದು, ಫೋಟೊಗಳ ಪಿಕ್ಸಲ್ ರೆಸಲ್ಯೂಶನ್ ಸಹ ಉತ್ತಮವಾಗಿದೆ. ಜೊತೆಗೆ ಸ್ಪಾಟ್‌ ಕಲರ್‌ ಮತ್ತು ಸ್ಲೋ ಮೋಷನ್‌ ಆಯ್ಕೆಗಳು ಇವೆ.

ಬ್ಯಾಟರಿ ಲೈಫ್‌

ಬ್ಯಾಟರಿ ಲೈಫ್‌

ಮೊಟೊ G8 ಪ್ಲಸ್‌ ಸ್ಮಾರ್ಟ್‌ಫೋನ್‌ 4,000mAh ಸಾಮರ್ಥ್ಯದ ಬ್ಯಾಟರಿ ಲೈಫ್‌ ಅನ್ನು ಹೊಂದಿದ್ದು, ಜೊತೆಗೆ 15W ಸಾಮರ್ಥ್ಯದ ಟರ್ಬೋ ಪವರ್‌ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಒಂದು ದಿನ ಮಟ್ಟಿಗೆ ಉತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸಲಿದ್ದು, ಗೇಮಿಂಗ್‌ಗೂ ಬೆಸ್ಟ್‌ ಬ್ಯಾಟರಿ ಬಾಳಿಕೆ ನೀಡುತ್ತದೆ. ಹಾಗೆಯೇ ಫಿಂಗರ್‌ಪ್ರಿಂಟ್ ಸೆನ್ಸಾರ್‌, ವೈಫೈ, ಬ್ಲೂಟೂತ್, GPS, NFC, FM ರೇಡಿಯೊ, 3.5mm ಆಡಿಯೊ ಜಾಕ್‌, ಸೇರಿದಂತೆ ಅಗತ್ಯ ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ದೇಶಿಯ ಮಾರುಕಟ್ಟೆಗೆ ಎಂಟ್ರಿಯಾಗಿರುವ 'ಮೊಟೊ G8 ಪ್ಲಸ್‌' ಸ್ಮಾರ್ಟ್‌ಫೋನ್‌ ಒಂದೇ ವೇರಿಯಂಟ್‌ ಆಯ್ಕೆಯನ್ನು ಹೊಂದಿದೆ. ಅದುವೇ 4GB RAM + 64GB ವೇರಿಯಂಟ್‌ ಆಗಿದ್ದು, ಇದರ ಬೆಲೆಯು 13,999ರೂ.ಗಳಾಗಿದೆ. ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯ.

ಕೊನೆಯ ಮಾತು

ಕೊನೆಯ ಮಾತು

ಮೊಟೊ G8 ಪ್ಲಸ್‌ ಸ್ಮಾರ್ಟ್‌ಫೋನ್ ಅಗ್ಗದ ಪ್ರೈಸ್‌ಟ್ಯಾಗ್‌ ಹೊಂದಿದೆ. ಆದರೆ ಪ್ರಸ್ತುತ ಟ್ರೆಂಡಿಂಗ್‌ನಲ್ಲಿರುವ 48ಎಂಪಿ ಕ್ಯಾಮೆರಾ, ಬಿಗ್ ಬ್ಯಾಟರಿ, ಆಕರ್ಷಕ್ ಡಿಸೈನ್ ಮತ್ತು ಪವರ್‌ಫುಲ್ ಪ್ರೊಸೆಸರ್‌ ಫೀಚರ್ಸ್‌ಗಳ ಒದಗಿಸುವಲ್ಲಿ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ತನ್ನ ವರ್ಗದಲ್ಲಿ ಉತ್ತಮ ಎನಿಸಿಕೊಂಡಿದೆ.

Best Mobiles in India

English summary
The Moto G8 Plus is powered by a Snapdragon 665 chipset that's tamed by stock Android 9 Pie. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+