ಮೊಟೊ 'ರೇಜರ್' ಫೋಲ್ಡೆಬಲ್ ಸ್ಮಾರ್ಟ್‌ಫೋನಿನ ಬೆಲೆ ಅಚ್ಚರಿ ಮೂಡಿಸಿದೆ.!!
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇದೀಗ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳು ಹೊಸ ಟ್ರೆಂಡ್ ಹುಟ್ಟುಹಾಕಿವೆ. ಪ್ರಮುಖ ಮೊಬೈಲ್ ಕಂಪನಿಗಳು ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಪರಿಚಯಿಸುವುದಾಗಿ ಹೇಳಿವೆ. ಆ ಪೈಕಿ ಲೆನೊವೊ ಕಂಪನಿ ಒಡೆತನದ ಮೊಟೊರೊಲಾ ಸಹ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡುತ್ತಿರುವ ಸುದ್ದಿ ಇದೀಗ ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಆದರೆ ಈ ಹೊಸ ಸುದ್ದಿ ನಿಮಗೆ ಅಚ್ಚರಿ ಎನಿಸಲಿದೆ.

ಸ್ಯಾಮ್‌ಸಂಗ್ ಕಂಪನಿಯ 'ಫೋಲ್ಡ್' ಹೆಸರಿನ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಘೋಷಿಸಿದ್ದು, ಗ್ರಾಹಕರ ಕೈ ಸೇರುವುದಷ್ಟೆ ಬಾಕಿ ಇದ್ದು, ಹಾಗೇ ಹುವಾಯಿ ಮೇಟ್ X ಫೋಲ್ಡೆಬಲ್ ಸ್ಮಾರ್ಟ್‌ಫೋನ್, ಶಿಯೋಮಿಯ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಮತ್ತು ಮೊಟೊರೊಲಾ ರೇಜರ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಸಹ ಈ ವರ್ಷದ ಅಂತ್ಯದೊಳಗೆ ಎಂಟ್ರಿ ಕೊಡುವ ಸಾಧ್ಯತೆಗಳಿವೆ. ಆದರೆ ಮೊಟೊದ ರೇಜರ್ ಫೋಲ್ಡೆಬಲ್ ಫೋನ್ ನಿಮ್ಮ ಗಮನ ಸೆಳೆಯಲಿದೆ.

ಹೌದು, ಮೊಟೊರೊಲಾ ಸಂಸ್ಥೆ ಬಿಡುಗಡೆ ಮಾಡುತ್ತಿರುವ 'ರೇಜರ್ ಫೋಲ್ಡೆಬಲ್' ಸ್ಮಾರ್ಟ್‌ಫೋನ್, ಇತರೆ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳ ಬೆಲೆಗಿಂತ ಕಡಿಮೆ ಬೆಲೆಯನ್ನು ಹೊಂದಿರಲಿದೆ ಎನ್ನಲಾಗುತ್ತಿರುವ ಲೀಕ್ ಸುದ್ದಿಯು ಅಚ್ಚರಿಗೆ ಕಾರಣವಾಗಿದೆ. ಹಾಗಾದರೇ ಲೀಕ್ ಮಾಹಿತಿಯಂತೆ ಮೊಟೊರೊಲಾ ರೇಜರ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ
ಮೊಟೊ ರೇಜರ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ 876 × 2142 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.2 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದ್ದು, ಫೋನನ್ನು ಮಡುಚಿದಾಗ ಮೇಲ್ಭಾಗದಲ್ಲಿ 800x600 ಪಿಕ್ಸಲ್ ರೆಸಲ್ಯೂಶನ್‌ನೊಂದಿಗೆ ಚಿಕ್ಕ ಡಿಸ್‌ಪ್ಲೇ ಇರಲಿದ್ದು, ನೋಟಿಫಿಕೇಶನ್‌ಗಳನ್ನು ಡಿಸ್‌ಪ್ಲೇ ಮಾಡಲಿದೆ.

ಪ್ರೊಸೆಸರ್
ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 710 ಶಕ್ತಿಯ ಪ್ರೊಸೆಸರ್ ಅನ್ನು ಹೊಂದಿರಲಿದೆ ಎನ್ನಲಾಗುತ್ತಿರುವ ಮೊಟೊ ರೇಜರ್ ಫೋಲ್ಡೆಬಲ್ ಫೋನ್ 4GB RAM ಮತ್ತು 64GB ಸಂಗ್ರಹ ಸಾಮರ್ಥ್ಯ ಹಾಗೂ 6GB RAM ಮತ್ತು 128GB ಸಂಗ್ರಹ ಸಾಮರ್ಥ್ಯದ ಎರಡು ವೇರಿಯಂಟ್‌ಗಳಲ್ಲಿ ಬರಲಿದೆ.

ಬ್ಯಾಟರಿ ಮತ್ತು ಲಭ್ಯತೆಯ ಬಣ್ಣಗಳು
2730mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದ್ದು, ಇದೊಂದಿಗೆ 27W ಟರ್ಬೋ ಪವರ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿರಲಿದೆ ಎನ್ನಲಾಗುತ್ತಿದ್ದು, ವೈಟ್, ಬ್ಲ್ಯಾಕ್ ಮತ್ತು ಗೋಲ್ಡ್ ಬಣ್ಣಗಳ ಆಯ್ಕೆಗಳಲ್ಲಿ ಸಹ ಹೊಂದಿರಲಿದೆ. ಈಗಾಗಲೇ ಮೊಟೊರೊಲಾ ತನ್ನ ಹಲವು ಸ್ಮಾರ್ಟ್‌ಫೋನ್‌ಗಳಿಗೆ ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಿದೆ.

ಬೆಲೆ?
ಮೊಟೊರೊಲಾ ರೇಜರ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ $1,500 ಬೆಲೆಯನ್ನು ಹೊಂದಿರಲಿದ್ದು. ಭಾರತದಲ್ಲಿ ಇದರ ಬೆಲೆ 1,04,500ರೂ.ಗಳು ಇರಲಿದೆ ಎಂದು ಅಂದಾಜಿಸಲಾಗುತ್ತಿದೆ. ಆದರೆ ಕಂಪನಿಯು ಬೆಲೆಯ ಬಗ್ಗೆ ಯಾವುದೇ ಅಧಿಕೃತವಾಗಿ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.


Click it and Unblock the Notifications








