ಮೊಟೊ ಫೋನ್‌ಗಳ ಬೆಲೆಯಲ್ಲಿ ರೂ.3000 ಕಡಿತ: ಜೊತೆಗೆ 100GB ಜಿಯೋ ಡೇಟಾ..!
ಅಕ್ಟೋಬರ್ 14 ರಿಂದ 21ರ ವೆರೆಗೆ ರಿಟೇಲ್ ಅಂಗಡಿಗಳಲ್ಲಿ ಮೊಟೊ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ಕಡಿತವನ್ನು ಮಾಡಲಾಗಿದ್ದು, 0% EMI ಹಾಗೂ ಉಚಿತ ಜಿಯೋ ಡೇಟಾದೊಂದಿಗೆ ಲಭ್ಯವಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಲಿನೊವೊ ಒಡೆತನಕ್ಕೆ ಸೇರಿರುವ ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸದ್ದು ಮಾಡುತ್ತಿದ್ದು, ಹೆಚ್ಚು ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಕೈ ಸೇರುತ್ತಿವೆ. ಈ ಹಿನ್ನಲೆಯಲ್ಲಿ ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಈ ಮೊಟೊ ಸ್ಮಾರ್ಟ್ ಫೋನ್‌ಗಳ ಮೇಲೆ ಭರ್ಜರಿ ದರ ಕಡಿತ ಮಾಡಲಾಗಿದೆ.

ಓದಿರಿ: ದೀಪಾವಳಿ ಭರ್ಜರಿ ಆಫರ್: ಐಫೋನ್ 8 ಮೇಲೆ ರೂ.15,000 ಕ್ಯಾಷ್ ಬ್ಯಾಕ್
ಅಕ್ಟೋಬರ್ 14 ರಿಂದ 21ರ ವೆರೆಗೆ ರಿಟೇಲ್ ಅಂಗಡಿಗಳಲ್ಲಿ ಮೊಟೊ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ಕಡಿತವನ್ನು ಮಾಡಲಾಗಿದ್ದು, 0% EMI ಹಾಗೂ ಉಚಿತ ಜಿಯೋ ಡೇಟಾದೊಂದಿಗೆ ಲಭ್ಯವಿದೆ. ಈ ಹಿನ್ನಲೆಯಲ್ಲಿ ಯಾವ ಯಾವ ಫೋನ್ ಮೇಲೆ ಎಷ್ಟು ಕಡಿತಗೊಂಡಿದೆ ಎಂಬುದನ್ನು ನೋಡುವ.

ಮೊಟೊ Z2 ಪ್ಲೇ ಸ್ಮಾರ್ಟ್‌ಫೋನ್:
ಸದ್ಯ ಮಾರುಕಟ್ಟೆಯಲ್ಲಿ ರೂ. 27,999ಕ್ಕೆ ದೊರೆಯುತ್ತಿದ್ದ ಮೊಟೊ Z2 ಪ್ಲೇ ಬೆಲೆಯಲ್ಲಿ ರೂ. 3000ದ ವರೆಗೂ ಕಡಿರವನ್ನು ಕಾಣಬಹುದಾಗಿದೆ. ರೂ. 24,999ಕ್ಕೆ ಲಭ್ಯವಿದೆ.

ಮೊಟೊ G5S ಸ್ಮಾರ್ಟ್‌ಫೋನ್:
ಹೊಸದಾಗಿ ಮಾರುಕಟ್ಟೆಯನ್ನು ಪ್ರವೇಶಿಸಿರುವ ಮೊಟೊ G5S ಸ್ಮಾರ್ಟ್‌ಫೋನ್ ಸ್ಮಾರ್ಟ್‌ಪೋನ್ ರೂ. 13,999ಕ್ಕೆ ಮಾರಾಟವಾಗುತ್ತಿತ್ತು. ಈ ಫೋನ್ ಬೆಲೆಯಲ್ಲಿ ರೂ. 1000 ಕಡಿತ ಕಾಣಬಹುದಾಗಿದ್ದು, ರೂ. 12,999ಕ್ಕೆ ದೊರೆಯುತ್ತಿದೆ.

ಮೊಟೊ M ಸ್ಮಾರ್ಟ್‌ಫೋನ್:
ಇದಲ್ಲದೇ ಮೊಟೊ M 4GB+64GB ಆವೃತ್ತಿಯ ಮೇಲೆಯೂ ಭರ್ಜರಿ ಆಫರ್ ಇದ್ದು, ರೂ. 3000ದ ಕಡಿತವನ್ನು ಕಾಣಬಹುದಾಗಿದೆ. ಇದು ಸದ್ಯ ರೂ.12,999ಕ್ಕೆ ದೊರೆಯುತ್ತಿದೆ.

ಮೊಟೊ G5:
ಮೊಟೊ G5 ಸ್ಮಾರ್ಟ್‌ಫೋನ್ ಬೆಲೆಯಲ್ಲಿಯೂ ಕಡಿತವನ್ನು ಕಾಣಬಹುದಾಗಿದ್ದು, ರೂ. 1000 ಕಡಿತವಾಗಿದ್ದು, ರೂ. 10,999ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಇನ್ನು ಇದೇ:
ಇದಲ್ಲದೇ ಮೊಟೊ ಬಿಡುಗಡೆ ಮಾಡಿರುವ ಎಲ್ಲಾ ಸ್ಮಾರ್ಟ್‌ಫೋನ್ ಗಳ ಮೇಲೆಯೂ ಆಫರ್ ಲಭ್ಯವಿದೆ ಎನ್ನಲಾಗಿದೆ. ಇದಲ್ಲದೇ ನೋ ಕಾಸ್ಟ್ EMI ಆಫರ್, ಬಜಾಜ್ ಫೈನಸ್ಸ್ ಮೇಲೆ ಜಿರೋ ಪ್ರೋಸೆಸಿಂಗ್ ಫೀ ಇದೆ. ಅಲ್ಲದೇ ಜೊತೆಗೆ 100GB ಜಿಯೋ ಡೇಟಾ ಸಹ ದೊರೆಯಲಿದೆ.


Click it and Unblock the Notifications








