Subscribe to Gizbot

ದೀಪಾವಳಿ ಭರ್ಜರಿ ಆಫರ್: ಐಫೋನ್ 8 ಮೇಲೆ ರೂ.15,000 ಕ್ಯಾಷ್ ಬ್ಯಾಕ್

Written By:

ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಆನ್‌ಲೈನ್‌ ಶಾಪಿಂಗ್‌ ತಾಣಗಳು ಮೊಬೈಲ್ ಮಾರಾಟಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡುತ್ತಿದ್ದು, ಇದೇ ಮಾದರಲ್ಲಿ ನೂತನವಾಗಿ ಬಿಡುಗಡೆಗೊಂಡಿರುವ ಆಪಲ್ ಐಫೋನ್ 8 ಮೇಲೆ ಪೇಟಿಎಂ ಮಾಲ್ ಭರ್ಜರಿ ಕ್ಯಾಷ್ ಬ್ಯಾಕ್ ಆಫರ್ ನೀಡಿದೆ.

ದೀಪಾವಳಿ ಭರ್ಜರಿ ಆಫರ್: ಐಫೋನ್ 8 ಮೇಲೆ ರೂ.15,000 ಕ್ಯಾಷ್ ಬ್ಯಾಕ್

ಓದಿರಿ: ನಿಮ್ಮ ಹೊಸ ಆಂಡ್ರಾಯ್ಡ್ ಫೋನ್ ವಿಶೇಷತೆಗಳೇನು? ನೀವೇ ತಿಳಿಯುವುದು ಹೇಗೆ?

ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಐಪೋನ್ 8 ಮೇಲೆ ಜಿಯೋ ಹಾಗೂ ವಿವಿಧ ಟೆಲಿಕಾಂ ಕಂಪನಿಗಳು ಆಫರ್ ನೀಡುತ್ತಿರುವ ಮಾದರಿಯಲ್ಲಿ ಆನ್‌ಲೈನ್‌ ಶಾಪಿಂಗ್ ತಾಣ ಪೇಟಿಎಂ ಮಾಲ್ ಐಫೋನ್ 8 ಮೇಲೆ ರೂ. 15,000 ಕ್ಯಾಷ್ ಬ್ಯಾಕ್ ಘೋಷಣೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.15,000 ಕ್ಯಾಷ್ ಬ್ಯಾಕ್:

ರೂ.15,000 ಕ್ಯಾಷ್ ಬ್ಯಾಕ್:

ಪೇಟಿಎಂ ಮಾಲ್ ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಮೇಲೆ ಭರ್ಜರಿ ರೂ.15,000 ಕ್ಯಾಷ್ ಬ್ಯಾಕ್ ನೀಡಿದ್ದು, ಇದರಲ್ಲಿ ರೂ. 9000 ಕ್ಯಾಷ್ ಬ್ಯಾಕ್ 'YBSPECIAL' ಪ್ರೋಮೊ ಕೋಡ್ ಮೂಲಕ ಪಡೆಯಬಹುದಾಗಿದೆ. ಇದಲ್ಲದೇ ಯೆಎಸ್ ಬ್ಯಾಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ರೂ. 6,000 ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ.

ಪೇಟಿಎಂ ಮಾಲ್‌ನಲ್ಲಿ ಐಫೋನ್ 8 ಬೆಲೆ:

ಪೇಟಿಎಂ ಮಾಲ್‌ನಲ್ಲಿ ಐಫೋನ್ 8 ಬೆಲೆ:

ಐಫೋನ್ 8 64GB ಮತ್ತು 256GB ಆವೃತ್ತಿಯೂ ಪೇಟಿಎಂ ಮಾಲ್‌ನಲ್ಲಿ ಲಭ್ಯವಿದ್ದು, ಕ್ರಮವಾಗಿ ರೂ.46,950 ಮತ್ತು ರೂ.59,800ಕ್ಕೆ ಲಭ್ಯವಿದೆ. ಇದೇ ಮಾದರಿಯಲ್ಲಿ ಐಫೋನ್ 8 ಪ್ಲಸ್ ಸಹ 64GB ಮತ್ತು 256GB ಆವೃತ್ತಿಯಲ್ಲಿ ಲಭ್ಯವಿದ್ದು, ಕ್ರಮವಾಗಿ ರೂ. 58,000 ಮತ್ತು ರೂ.71,000ಕ್ಕೆ ದೊರೆಯುತ್ತಿದೆ.

ಐಫೋನ್ 8 ಮತ್ತು ಐಫೋನ್ 8 ಪ್ಲಸ್ ವಿಶೇಷತೆ:

ಐಫೋನ್ 8 ಮತ್ತು ಐಫೋನ್ 8 ಪ್ಲಸ್ ವಿಶೇಷತೆ:

ಐಫೋನ್ 8 ನಲ್ಲಿ 4.7 ಇಂಚಿನ ಮತ್ತು ಐಫೋನ್ 8 ಪ್ಲಸ್ ನಲ್ಲಿ 5.5 ಇಂಚಿನ ರೆಟೀನಾ HD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಈ ಪೋನ್‌ನಲ್ಲಿ A11 ಬಯೋನಿಕ್ ಚಿಪ್‌ಸೆಟ್ ಇದೆ. ಐಫೋನ್ 8ನಲ್ಲಿ 12MP ಕ್ಯಾಮೆರಾವನ್ನು ಹಿಂಭಾಗದಲ್ಲಿ ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ಐಫೋನ್ 8 ಪ್ಲಸ್ ಹಿಂಭಾಗದಲ್ಲಿ 12MP + 12MPಯ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Paytm Mall is offering a cashback of Rs 15,000 on the newly launched iPhone 8 and iPhone 8 Plus on its platform during the ongoing Maha Cashback Sale. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot