ಡ್ಯುಯಲ್ ಕ್ಯಾಮೆರಾ ಹೊಂದಿರುವ ಮೊಟೊ X4 ಲಾಂಚ್:ಬೆಲೆ, ವಿಶೇಷತೆ

Written By:

ಮೊಟೊರೊಲಾ ಮತ್ತೊಂದು ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯವನ್ನು ಮಾಡಿದೆ. ಮೊಟೊ X ಸರಣಿಯ ನಾಲ್ಕನೇ ತಲೆಮಾರಿನ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಲಿನೊವೊ ಒಡೆತನ್ ಮೊಟೊ ಮಾರುಕಟ್ಟೆಯಲ್ಲಿ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಗಳ ಸಾಲಿಗೆ ಈ ಮೂಲಕ ಸೇರ್ಪಡಗೊಳ್ಳಲು ಮುಂದಾಗಿದೆ.

ಮೊಟೊ X4 ಸ್ಮಾರ್ಟ್‌ಪೋನ್ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ದೊರೆಯಲಿದ್ದು, ಈ ಸ್ಮಾರ್ಟ್‌ ಫೋನ್ ಎರಡು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದು, ನೋಡಲು ವಿನ್ಯಾಸು ಉತ್ತಮವಾಗಿದೆ ಎನ್ನಲಾಗಿದೆ. ಇದೇ ನವೆಂಬರ್ 14 ರಿಂದ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಅಲ್ಲದೇ ಲಾಂಚಿಂಗ್ ಆಫರ್ ಸಹ ಲಭ್ಯವಿದೆ ಎನ್ನಲಾಗಿದೆ.

ಓದಿರಿ: ರೆಡ್‌ಮಿ ನೋಟ್ 4 ಬೆಲೆಯಲ್ಲಿ ಭಾರೀ ಕಡಿತ: ಆಫರ್ ಮೂರು ದಿನ ಮಾತ್ರ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎರಡು ಆವೃತ್ತಿಯಲ್ಲಿ ದೊರೆಯಲಿದೆ:

ಎರಡು ಆವೃತ್ತಿಯಲ್ಲಿ ದೊರೆಯಲಿದೆ:

ಮೊಟೊ X4 ಸ್ಮಾರ್ಟ್‌ಫೋನ್ 3GB RAM ಮತ್ತು 32GB ಇಂಟರ್ನಲ್ ಮೆಮೊರಿ ಯೊಂದಿಗೆ ದೊರೆಯಲಿದ್ದು, ರೂ. 20,999 ಆಗಿದೆ. ಇದೇ ಮಾದರಿಯಲ್ಲಿ 4G RAM ಮತ್ತು 64GB ಮೆಮೊರಿಯ ಆವೃತ್ತಿಯೂ ರೂ.22, 999ಕ್ಕೆ ಲಭ್ಯವಿದೆ ಎನ್ನಲಾಗಿದೆ. ಸೂಪರ್ ಬ್ಲಾಕ್ ಮತ್ತು ಬ್ಲೂ ಬಣ್ಣದಲ್ಲಿ ದೊರೆಯಲಿದೆ.

ಲಾಂಚಿಂಗ್ ಆಫರ್:

ಲಾಂಚಿಂಗ್ ಆಫರ್:

ಇದಲ್ಲದೇ ಮೊಟೊ X4 ಲಾಂಚ್ ಆಫರ್ ಆಗಿ HDFC ಕಾರ್ಡ್ ಬಳಕೆದಾರರಿಗೆ 10% ಡಿಸ್‌ಕೌಂಟ್ ದೊರೆಯಲಿದೆ. ಇದಲ್ಲದೇ 50% ಬೈ ಬ್ಯಾಕ್ ಆಫರ್ ಸಹ ದೊರೆಯಲಿದೆ. ಇದರೊಂದಿಗೆ ರೂ.2,500 ವರೆಗೆ ಎಕ್ಸ್‌ಚೇಂಜ್ ಆಫರ್ ಸಹ ಇದೆ ಎನ್ನಲಾಗಿದೆ.

ಮೊಟೊ X4 ವಿಶೇಷತೆಗಳು:

ಮೊಟೊ X4 ವಿಶೇಷತೆಗಳು:

ಮೊಟೊ X4 ಸ್ಮಾರ್ಟ್‌ಫೋನ್ ಡ್ಯುಯಲ್ ಸಿಮ್ ನಲ್ಲಿ ಕಾರ್ಯನಿರ್ವಹಿಸಲಿದೆ. ಆಂಡ್ರಾಯ್ಡ್‌ ನ್ಯಾಗದಲ್ಲಿ ನಡೆಯುವ ಈ ಸ್ಮಾರ್ಟ್‌ಫೋನ್ 5.2 ಇಂಚಿನ FHD ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೇ ಗೊರಿಲ್ಲಾ ಗ್ಲಾಸ್ ಸುರಕ್ಷತೆಯನ್ನು ಹಿಂಭಾಗ ಮತ್ತು ಮುಂಭಾಗದಲ್ಲಿ ಕಾಣಬಹುದಾಗಿದೆ. ಸ್ಮಾಪ್‌ಡ್ರಾಗನ್ 630 ಪ್ರೋಸೆಸರ್ ಸಹ ಕಾಣಬಹುದು.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಮೊಟೊ X4 ಸ್ಮಾರ್ಟ್‌ಫೋನಿನಲ್ಲಿ 12 MP + 8 MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದಲ್ಲದೇ ಮುಮಭಾಗದಲ್ಲಿ 16 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಹಿಂಭಾಗ ಮತ್ತು ಮುಂಭಾಗದಲ್ಲಿ LED ಫ್ಲಾಷ್ ಲೈಟ್ ಅನ್ನು ಅಳವಡಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Moto X4 With Dual Rear Cameras Launched in India, Price Starts at Rs. 20,999. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot