ರೆಡ್‌ಮಿ ನೋಟ್ 4 ಬೆಲೆಯಲ್ಲಿ ಭಾರೀ ಕಡಿತ: ಆಫರ್ ಮೂರು ದಿನ ಮಾತ್ರ..!
ಶಿಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ನಂಬರ್ 1 ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಶಿಯೋಮಿಯ ಹಲವು ಫೋನ್‌ಗಳು ಮಾರುಕಟ್ಟೆಯನ್ನು ಪ್ರವೇಶಿಸಿದರೂ ಸಹ ನೋಟ್ 4 ಬೇಡಿಕೆ ಇನ್ನು ಕಡಿಮೆಯಾಗಿಲ್ಲ. ಹೀಗಾಗಿ ನೋಟ್ 4 ಖರೀದಿದಾರರಿಗೆ ಹೊಸದೊಂದು ಅಫರ್ ಲಭ್ಯವಾಗಿದೆ.

ಓದಿರಿ: ಬಿಡುಗಡೆಗೂ ಮುನ್ನವೇ ವೈರಲ್ ಆಯ್ತು ಒನ್‌ಪ್ಲಸ್ 5T ಅನ್‌ಬಾಕ್ಸಿಂಗ್ ವಿಡಿಯೋ...!
ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಮೂರು ಆವೃತ್ತಿಯಲ್ಲಿ ದೊರೆಯುತ್ತಿದ್ದು, ಈ ಮೂರು ಆವೃತ್ತಿಗಳ ಬೆಲೆಯನ್ನು ಶಿಯೋಮಿ ಕಡಿತಗೊಳಿಸಿದ್ದು, ಫ್ಲಿಪ್‌ಕಾರ್ಟ್ ಮತ್ತು ಮಿ.ಕಾಮ್ ನಲ್ಲಿ ಮಾರಾಟ ಮಾಡುತ್ತಿದೆ. ಅಲ್ಲದೇ ಈ ಆಫರ್ ಸಿಮೀತ ಅವಧಿಗೆ ಮಾತ್ರವೇ ಲಭ್ಯವಿರಲಿದೆ ಎನ್ನಲಾಗಿದೆ.

ಬೆಲೆಗಳಲ್ಲಿ ಕಡಿತ:
2GB RAM ಮತ್ತು 32GB ಇರುವ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಬೆಲೆ ಸದ್ಯ ರೂ.8,999ಕ್ಕೆ ದೊರೆಯುತ್ತಿದೆ. ಇದೇ ಮಾದರಿಯಲ್ಲಿ 3GB RAM ಮತ್ತು 32GB ಇಂಟರ್ನಲ್ ಮೆಮೊರಿ ಹೊಂದಿರುವ ಫೋನ್ ರೂ. 9,999ಕ್ಕೆ ಲಭ್ಯವಿದೆ. ಅಲ್ಲದೇ 4GB RAM ಮತ್ತು 64 GB ಇಂಟರ್ನಲ್ ಮೆಮೊರಿ ಹೊಂದಿರುವ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ರೂ. 11,999ಕ್ಕೆ ಮಾರಾಟವಾಗುತ್ತಿದೆ.

ನವೆಂಬರ್ 13 ರಿಂದ 15ರ ವರೆಗೆ ಮಾತ್ರ:
ಈ ಆಫರ್ ಕೆಲವೇ ದಿನಗಳು ಮಾತ್ರವೇ ಲಭ್ಯವಿದೆ ಎನ್ನಲಾಗಿದೆ. ನವೆಂಬರ್ 13 ರಿಂದ 15ರ ವರೆಗೆ ಮಾತ್ರ ಈ ಸೇಲ್ ಕಾಣಬಹುದಾಗಿದ್ದು, ಫ್ಲಿಪ್‌ಕಾರ್ಟ್ ಮತ್ತು ಮಿ.ಕಾಮ್ ನಲ್ಲಿ ಮಾತ್ರವೇ ಈ ಫೋನ್ ದೊರೆಯಲಿದೆ.

ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ವಿಶೇಷತೆ:
ರೆಡ್‌ಮಿ ನೋಟ್ 4 ಪೋನ್ 5.5 ಇಂಚಿನ 1920 x 1080p Full HD ಡಿಸ್‌ಪ್ಲೇ ಹೊಂದಿದೆ. ಈ ಪೋನಿನಲ್ಲಿ ಡಿಕಾ ಕೊರ್ ಮಿಡಿಯಾ ಟೆಕ್ ಹೆಲಿಯೊ X20 ಪ್ರೋಸೆಸರ್ ಅಳವಡಿಸಲಾಗಿದ್ದು, ಇದು ಉತ್ತಮ ಗುಣಮಟ್ಟದ ವಿಡಿಯೋ ನೋಡಲು ಉತ್ತಮವಾಗಿದೆ

ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಕ್ಯಾಮೆರಾ:
ರೆಡ್‌ಮಿ ನೋಟ್ 4 ಪೋನಿನಲ್ಲಿ 13MP ಹಿಂಬದಿಯ ಕ್ಯಾಮೆರಾ ಜೊತೆ ಆಟೋ ಪೋಕಸ್, ಡುಯಲ್ ಫ್ಲಾಷ್ ಹೊಂದಿದ್ದು, ಮುಂಬದಿಯಲ್ಲಿ 5MP ಕ್ಯಾಮೆರಾ ಇದೆ. ರೆಡ್‌ಮಿ ನೋಟ್ 4 ಶಕ್ತಿಶಾಲಿ ಬ್ಯಾಟರಿ ಹೊಂದಿದ್ದು, 4100mAH ಸಾಮಾರ್ಥ್ಯದ ಬ್ಯಾಟರಿ ದೀರ್ಘಕಾಲದ ಬ್ಯಾಕಪ್ ನೀಡುತ್ತದೆ. ಬೆಲೆ ರೂ.12,999 ಗಳಾಗಿದೆ.

ಆಂಡ್ರಾಯ್ಡ್ 6.0:
ರೆಡ್‌ಮಿ ನೋಟ್ 4 ಪೋನ್ 4G VoLTE ಸಪೋರ್ಟ್ ಮಾಡಲಿದ್ದು, ಆಂಡ್ರಾಯ್ಡ್ 6.0ನಲ್ಲಿ ಕಾರ್ಯಚರಣೆ ನಡೆಸಲಿದೆ. ಇದರೊಂದಿಗೆ MIUI8 ಸಹ ಇರಲಿದೆ. ಮೆಟಾಲಿಕ್ ಬಾಡಿ ಹೊಂದಿರುವ ಫೋನಿನಲ್ಲಿ ಬ್ಲೂಟೂತ್, GPS, USB ಪೋರ್ಟ್ ಗಳಿದೆ.


Click it and Unblock the Notifications








