Home
ಮೊಬೈಲ್

ನಿಮಗೆ ಮೊಟೊರೊಲಾದ ಈ ಫೋನ್‌ ಬೇಡವೇ ಬೇಡಾ ಅಂದ್ರೆ, ಈ ಬೇರೆ ಫೋನ್‌ಗಳು ಬೆಸ್ಟ್‌!

ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಒಂದೆನಿಸಿರುವ ಮೊಟೊರೊಲಾ (Motorola) ಸಂಸ್ಥೆಯ ಇತ್ತೀಚಿನ ಫೋನ್‌ಗಳಲ್ಲಿ ಮೊಟೊರೊಲಾ ಎಡ್ಜ್‌ 50 ಪ್ರೊ (Motorola Edge 50 Pro) ಫೋನ್‌ ಕೂಡಾ ಒಂದಾಗಿದೆ. ಈ ಮೊಬೈಲ್‌ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದು, ಕೆಲವು ಆಕರ್ಷಕ ಫೀಚರ್ಸ್‌ಗಳ ಮೂಲಕ ಮೊಬೈಲ್‌ ಪ್ರಿಯರನ್ನು ಸೆಳೆದಿದೆ. ಅದಾಗ್ಯೂ, ನಿಮಗೆ ಈ ಸ್ಟೈಲಿಶ್ ಮೊಟೊರೊಲಾ ಎಡ್ಜ್‌ 50 ಪ್ರೊ ಫೋನಿಗೆ ಸಮಾನವಾದ ಪರ್ಯಾಯ ಮೊಬೈಲ್‌ಗಳು ಖರೀದಿಗೆ ಲಭ್ಯ ಇವೆ.

ಹೌದು, ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಮೀಡ್‌ರೇಂಜ್‌ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಮೊಬೈಲ್‌ ತಯಾರಿಕಾ ಕಂಪನಿಗಳು ಸಹ ಈ ವಿಭಾಗದಲ್ಲಿ ಉತ್ತಮ ಮೊಬೈಲ್‌ಗಳನ್ನು ಪರಿಚಯಿಸುತ್ತ ಮುನ್ನಡೆದಿವೆ. ಆ ಸಾಲಿಗೆ ಮೊಟೊರೊಲಾ ಎಡ್ಜ್‌ 50 ಪ್ರೊ (Motorola Edge 50 Pro) ಸಹ ಸೇರ್ಪಡೆ ಆಗಿದೆ. ಅದಾಗ್ಯೂ ಈ ಫೋನಿಗೆ ನೇರ ಪೈಪೋಟಿ ನೀಡುವ ಇತರೆ ಪರ್ಯಾಯ ಮೊಬೈಲ್‌ಗಳ ಆಯ್ಕೆ ಸಹ ಗ್ರಾಹಕರಿಗೆ ಲಭ್ಯ ಇವೆ. ಹಾಗಾದರೇ ಮೊಟೊರೊಲಾ ಎಡ್ಜ್‌ 50 ಪ್ರೊ ಫೋನ್ ಪರ್ಯಾಯ ಮೊಬೈಲ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ನಿಮಗೆ ಮೊಟೊರೊಲಾದ ಈ ಫೋನ್‌ ಬೇಡವೇ ಬೇಡಾ ಅಂದ್ರೆ, ಈ ಬೇರೆ ಫೋನ್‌ಗಳು ಬೆಸ್ಟ್‌!

ಪೊಕೊ F6 ಮೊಬೈಲ್‌

ಪೊಕೊ F6 ಫೋನ್‌ 6.67 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದರ ಡಿಸ್‌ಪ್ಲೇಯು 2712 x 1220 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಒಳಗೊಂಡಿದೆ. ಹಾಗೆಯೇ ಈ ಡಿಸ್‌ಪ್ಲೇಯು 2400 nits ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿದ್ದು, ಇದರ ಜೊತೆಗೆ 120Hz ರಿಫ್ರೆಶ್‌ ರೇಟ್‌ ಬೆಂಬಲ ಸಹ ಇದೆ. ಅಲ್ಲದೇ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 OS ಸಪೋರ್ಟ್‌ ಸಹ ಇದೆ.

ಇದರೊಂದಿಗೆ ಈ ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 90W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್‌ ನೀಡಲಿದೆ.

ಶಿಯೋಮಿ 14 CIVI ಮೊಬೈಲ್‌

ಶಿಯೋಮಿ 14 CIVI ಫೋನ್‌ 6.55 ಇಂಚಿನ 1.5K ಕರ್ವ್ಡ್ AMOLED ಡಿಸ್‌ಪ್ಲೇ ಸೌಲಭ್ಯ ಹೊಂದಿದ್ದು, ಇದರ ಜೊತೆಗೆ 120Hz ರಿಫ್ರೆಶ್ ರೇಟ್ ಸೌಲಭ್ಯ ಸಹ ಇದೆ. ಹಾಗೆಯೇ ಇದು ಸ್ನಾಪ್‌ಡ್ರಾಗನ್ 8s ಜೆನ್‌ 3 SoC ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಜೊತೆಗೆ ಕಾರ್ಯ ನಿರ್ವಹಿಸಲಿದೆ.

ಹಾಗೆಯೇ ತ್ರಿವಳಿ ರಿಯರ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್‌ 4,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 67W ವೈರ್ಡ್ ಚಾರ್ಜಿಂಗ್‌ ಸೌಲಭ್ಯ ಪಡೆದುಕೊಂಡಿದೆ.

ರಿಯಲ್‌ಮಿ GT 6T ಮೊಬೈಲ್‌

ರಿಯಲ್‌ಮಿ GT 6T ಮೊಬೈಲ್‌ 6.78 ಇಂಚಿನ 3D LTPO AMOLED ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಅಲ್ಲದೇ ಇದು ಸ್ನ್ಯಾಪ್‌ಡ್ರಾಗನ್ 7+ ಜೆನ್‌ 3 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ. ಇದರ ಜೊತೆಗೆ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇದರೊಂದಿಗೆ 5,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದ್ದು, ಇದರ ಜೊತೆಗೆ 120W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ.

Best Mobiles in India

English summary
Motorola Edge 50 Pro Alternatives: Poco F6, Xiaomi 14 Civi and more. check out other mobiles list here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+