Subscribe to Gizbot

ಫ್ಲಿಪ್‌ಕಾರ್ಟ್‌ನಲ್ಲಿ ಹೊಸ ಮೋಟೋ ಎಕ್ಸ್ ರೂ 31,999 ಕ್ಕೆ

Written By:

ಕೊನೆಗೂ ಮೋಟೋರೋಲಾ ಹೊಸ ಮೋಟೋ ಎಕ್ಸ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಡಿವೈಸ್ ಅನ್ನು ಕಂಪೆನಿಯು ತನ್ನ ಆನ್‌ಲೈನ್ ರೀಟೈಲ್ ಪಾಲುದಾರನಾದ ಫ್ಲಿಪ್‌ಕಾರ್ಟ್ ಮೂಲಕ ರೂ 31,999 ಕ್ಕೆ ಲಾಂಚ್ ಮಾಡಿದೆ. ಹೊಸ ಮೋಟೋ ಎಕ್ಸ್ ಚರ್ಮ ಮತ್ತು ಬಿದಿರಿನ ಬಣ್ಣಗಳಲ್ಲಿ ಹೊರಬಂದಿದ್ದು ನಿಜಕ್ಕೂ ಇದು ಆಕರ್ಷಕವಾಗಿದೆ.

ಮುಂಚಿನ ಮೋಟೋ ಎಕ್ಸ್‌ ಸ್ಮಾರ್ಟ್‌ಫೋನ್‌ಗೆ ಹೋಲಿಸಿದಾಗ ಮೋಟೋರೋಲಾ ಮೋಟೋ ಎಕ್ಸ್ ((2014) ಆಕರ್ಷಕ ನವೀಕರಣವನ್ನು ಪಡೆದುಕೊಂಡು ಹುಟ್ಟಿ ಬಂದಿದೆ. ಇದು 4.7 ಇಂಚಿನ ಡಿಸ್‌ಪ್ಲೇಯೊಂದಿಗೆ ಪಾದಾಪರ್ಣೆ ಮಾಡಿದ್ದು ಸಿಂಗಲ್ ನ್ಯಾನೋ ಸಿಮ್ ಅನ್ನು ಪಡೆದುಕೊಂಡಿದೆ. ಇನ್ನು ಮರ ಮತ್ತು ಚರ್ಮದ ಬಣ್ಣಗಳ ಫೋನ್‌ ನಿಜಕ್ಕೂ ಅದ್ಭುತ ವಿನ್ಯಾಸವನ್ನು ಪಡೆದುಕೊಂಡಿದೆ.

ಹೊಸ ಮೋಟೋ ಎಕ್ಸ್ ಇದೀಗ ಆಕರ್ಷಕ ಮೂರು ಬಣ್ಣಗಳಲ್ಲಿ

ಮೋಟೋರೋಲಾ ಮೋಟೋ ಎಕ್ಸ್ (2104):
5.2 ಇಂಚಿನ (1920 x 1080 ಪಿಕ್ಸೆಲ್‌ಗಳ) AMOLED ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಸುರಕ್ಷತೆ ಇದರಲ್ಲಿದೆ ಹಾಗೂ 2.5 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 (MSM8974-AC) ಪ್ರೊಸೆಸರ್ ಜೊತೆಗೆ Adreno 330 GPU ಇದರಲ್ಲಿದೆ. ಬಹು ಕೆಲಸಗಳಿಗೆ ಇದು 2 ಜಿಬಿ RAM ಅನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಓಎಸ್ ಇದರಲ್ಲಿ ಚಾಲನೆಯಾಗುತ್ತಿದೆ.

ಇದನ್ನೂ ಓದಿ: ವಿವಾದದ ಹೊಸ ಸುಳಿಯಲ್ಲಿ ಐಫೋನ್ 6 ಪ್ಲಸ್

ಇನ್ನು ಡಿವೈಸ್‌ನ ಕ್ಯಾಮೆರಾದ ಕಡೆಗೆ ಗಮನ ಹರಿಸುವಾಗ 13 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಇದು ಪಡೆದುಕೊಂಡಿದೆ ಜೊತೆಗೆ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ f/2.25 ಅಪಾರ್ಚರ್, 4 ಕೆ ವೀಡಿಯೊ ಸೆರೆಹಿಡಿಯುವಿಕೆ ಸಾಮರ್ಥ್ಯ ಹೀಗೆ 2 ಎಮ್‌ಪಿ ಮುಂಭಾಗ ಕ್ಯಾಮೆರಾ ಇದರಲ್ಲಿದೆ. ಇನ್ನು ಡಿವೈಸ್‌ನ ಆಂತರಿಕ ಸಂಗ್ರಹಣೆ ಸಾಮರ್ಥ್ಯವು 16 ಜಿಬಿ ಮತ್ತು 32 ಜಿಬಿಯದಾಗಿದೆ. ಇನ್ನು ಅತ್ಯಂತ ಹೆಚ್ಚಿನ ಸಂಪರ್ಕ ಜಾಲವನ್ನು ಹೊಸ ಮೋಟೋ ಎಕ್ಸ್ ಪಡೆದುಕೊಂಡಿದ್ದು 3ಜಿ, ವೈಫೈ, 802.11a/g/b/n/ac (dual band), ಬ್ಲ್ಯೂಟೂತ್ 4.0 LE, GPS, GLONASS ಹಾಗೂ NFC ಈ ಮೋಟೋ ಎಕ್ಸ್‌ನಲ್ಲಿದೆ.

ಇನ್ನು ಫೋನ್‌ನ ಬ್ಯಾಟರಿ ಸಾಮರ್ಥ್ಯವು 2300 mAh ಆಗಿದ್ದು 9.97 mm ದಪ್ಪ ಹಾಗೂ 144 ಗ್ರಾಮ್‌ಗಳು ತೂಕವನ್ನು ಈ ಡಿವೈಸ್ ಹೊಂದಿದೆ. ಇನ್ನು ಡಿವೈಸ್‌ನ ಫೋನ್‌ಗಳು ಮೂರು ಬಣ್ಣಗಳಾದ ಬಿದಿರು ಬಿಳಿ (ರೂ 33,999), ಕಪ್ಪು ಚರ್ಮ (ರೂ 33,999) ಹಾಗೂ ಕಪ್ಪು ರೂ (31,999) ಕ್ಕೆ ದೊರೆಯುತ್ತಿದೆ.

ಇದನ್ನೂ ಓದಿ: ಅತ್ಯುತ್ತಮ ಎಚ್‌ಟಿಸಿ ಕ್ವಾಡ್ ಕೋರ್ ಫೋನ್‌ಗಳು

English summary
This article tells about Motorola Moto X (Gen 2) now available in three colour variants through Flipkart. New Moto X having attractive specks and it is one of the good handset which is launched in India..
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot