Just In
- 31 min ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- 52 min ago
ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್ ಲಾಂಚ್!
- 3 hrs ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 3 hrs ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
Don't Miss
- Finance
ಫೆಬ್ರವರಿ 1ರಿಂದ ಟಾಟಾ ಮೋಟರ್ಸ್ ಕಾರು ದುಬಾರಿ, ಯಾಕೆ, ಇಲ್ಲಿದೆ ಕಾರಣ?
- Movies
ಅತಿಹೆಚ್ಚು ಟಿವಿಆರ್ ಗಳಿಸಿದ ಕನ್ನಡದ 14 ಚಿತ್ರಗಳಿವು; ಆರನೇ ಸ್ಥಾನಕ್ಕೇರಿದ ಕಾಂತಾರ!
- News
ಹಾಸನ ಟಿಕೆಟ್ ಬಗ್ಗೆ ಮಾತನಾಡಲು ರೇವಣ್ಣ ಬಿಟ್ಟರೆ ಯಾರಿಗೂ ಅವಕಾಶವಿಲ್ಲ; HDKಗೆ ಸೂರಜ್ ಟಾಂಗ್
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಮೊಟೊ ಒನ್ ಆಕ್ಷನ್' ಮತ್ತು ಎಚ್‌ಟಿಸಿ 'ವೈಲ್ಡ್‌ಫೈರ್ ಎಕ್ಸ್' : ಯಾವುದು ಬೆಸ್ಟ್?
ಪ್ರಸ್ತುತ ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಹಲವು ನೂತನ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡುತ್ತಲೇ ಇವೆ. ಅವುಗಳಲ್ಲಿ ಬಹುತೇಕ ಫೋನ್‌ಗಳು ಬಜೆಟ್ ಪ್ರೈಸ್‌ಟ್ಯಾಗ್ ಮತ್ತು ಕ್ಯಾಮೆರಾ ಫೀಚರ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿಲು ಮುಂದಾಗುತ್ತಿವೆ. ಈ ನಿಟ್ಟಿನಲ್ಲಿ ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ 'ಎಚ್‌ಟಿಸಿ ವೈಲ್ಡ್‌ಫೈರ್ ಎಕ್ಸ್' ಮತ್ತು 'ಮೊಟೊರೊಲಾ ಒನ್ ಆಕ್ಷನ್' ಸ್ಮಾರ್ಟ್‌ಫೋನ್‌ಗಳು ಟ್ರೆಂಡಿಂಗ್‌ನಲ್ಲಿವೆ.

ಬಹಳ ಗ್ಯಾಪ್ ನಂತರ ಎಚ್‌ಟಿಸಿ ಸಂಸ್ಥೆಯು 'ವೈಲ್ಡ್‌ಫೈರ್ ಎಕ್ಸ್' ಮೂಲಕ ಮತ್ತೆ ಸ್ಮಾರ್ಟ್‌ಫೋನ್ ಫೀಲ್ಡ್‌ಗೆ ಎಂಟ್ರಿ ಕೊಟ್ಟಿದೆ. ಹಾಗೆಯೇ ಮೊಟೊರೊಲಾ ಸಹ 'ಒನ್ ಆಕ್ಷನ್' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ಬಜೆಟ್ ಸ್ಮಾರ್ಟ್‌ಫೋನ್ ಪ್ರಿಯರ್ ಗಮನ ಸೆಳೆದಿವೆ. ಇವೆರಡರ 4GB RAM ವೇರಿಯಂಟ್ ಫೋನ್ ನಡುವೆ ಬಹುತೇಕ ಸಾಮ್ಯತೆ ಕಂಡುಬಂದಿದ್ದರು, ಹಲವು ಭಿನ್ನತೆ ಫೀಚರ್ಸ್‌ಗಳನ್ನು ಸಹ ಕಾಣಬಹುದಾಗಿದೆ. ಹಾಗಾದರೇ ಮೊಟೊರೊಲಾ ಒನ್ ಆಕ್ಷನ್ ಮತ್ತು ಎಚ್‌ಟಿಸಿ ವೈಲ್ಡ್‌ಫೈರ್ ಎಕ್ಸ್ ಸ್ಮಾರ್ಟ್‌ಫೋನ್‌ಗಳ ನಡುವಿನ ವ್ಯತ್ಯಾಸಗಳೇನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಹೈಲೈಟ್ಸ್ ಪಾಯಿಂಟ್ಸ್
ಮೊಟೊರೊಲಾ ಒನ್ ಆಕ್ಷನ್ ಸ್ಮಾರ್ಟ್‌ಫೋನ್ 2520 x 1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಸಿನಿಮಾ ವಿಶನ್ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 21:9 ಆಗಿದೆ. ಎಚ್‌ಟಿಸಿ 'ವೈಲ್ಡ್‌ಫೈರ್ ಎಕ್ಸ್' ಸ್ಮಾರ್ಟ್‌ಫೋನ್ 720×1,520 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.22 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಎಚ್‌ಟಿಸಿ 'ವೈಲ್ಡ್‌ಫೈರ್ ಎಕ್ಸ್' ಹೋಲಿಸಿದರೇ, ಮೊಟೊ ಒನ್ ಆಕ್ಷನ್ ಹೆಚ್ಚಿನ ಪಿಕ್ಸಲ್ ರೆಸಲ್ಯೂಶನ್ ಒಳಗೊಂಡಿದೆ.

ಪ್ರೊಸೆಸರ್ ಬಲಾಬಲ
ಮೊಟೊರೊಲಾ ಒನ್ ಆಕ್ಷನ್ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ Exynos 9609 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ ಪೈ ಓಎಸ್‌ನ ಬೆಂಬಲ ಸಹ ಪಡೆದಿದೆ. ಇದಕ್ಕೆ ಪೂರಕವಾಗಿ 4GB RAM ಮತ್ತು 128GB ಆಂತರಿಕ ಸ್ಟೋರೇಜ್ ಸ್ಥಳಾವಕಾಶವನ್ನು ಹೊಂದಿದೆ. ಹಾಗೆಯೇ ಎಚ್‌ಟಿಸಿ 'ವೈಲ್ಡ್‌ಫೈರ್ ಎಕ್ಸ್' ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ P22 ಪ್ರೊಸೆಸರ್ ಶಕ್ತಿ ಹೊಂದಿದೆ. 4GB RAM ಮತ್ತು 128GB ಸ್ಟೋರೇಜ್ ಆಯ್ಕೆ ಇದೆ.

ತ್ರಿವಳಿ ಕ್ಯಾಮೆರಾ ವಿಶೇಷತೆ
ಮೊಟೊರೊಲಾ ಒನ್ ಆಕ್ಷನ್ ಮತ್ತು ಎಚ್‌ಟಿಸಿ 'ವೈಲ್ಡ್‌ಫೈರ್ ಎಕ್ಸ್' ಸ್ಮಾರ್ಟ್‌ಫೋನ್ಗಳೆರಡು ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಫೀಚರ್ ಅನ್ನು ಹೊಂದಿವೆ. ಮೊಟೊರೊಲಾ ಒನ್ ಆಕ್ಷನ್ ಸ್ಮಾರ್ಟ್‌ಫೋನ್ 12ಎಂಪಿ ಸೆನ್ಸಾರ್+ 5ಎಂಪಿ ಸೆನ್ಸಾರ್ +16ಎಂಪಿ ಸೆನ್ಸಾರ್ ಜೊತೆ 12ಎಂಪಿ ಸೆಲ್ಫಿ ಕ್ಯಾಮೆರಾ ಸಾಮರ್ಥ್ಯ ಪಡೆದಿದೆ. ಹಾಗೆಯೇ ಎಚ್‌ಟಿಸಿ 'ವೈಲ್ಡ್‌ಫೈರ್ ಎಕ್ಸ್' ಸ್ಮಾರ್ಟ್‌ಫೋನ್ ಸಹ ಮೂರು ಕ್ಯಾಮೆರಾ ಸೆಟ್‌ಅಪ್ ಇದ್ದು, ಅವುಗಳು ಕ್ರಮವಾಗಿ 12ಎಂಪಿ ಸೆನ್ಸಾರ್ + 8ಎಂಪಿ ಸೆನ್ಸಾರ್ + 5ಎಂಪಿ ಸೆನ್ಸಾರ್ ಜೊತೆ 8ಎಂಪಿ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.

ಬ್ಯಾಟರಿ ಮತ್ತು ಓಎಸ್ ಹೇಗಿವೆ
ಮೊಟೊರೊಲಾ ಒನ್ ಆಕ್ಷನ್ ಸ್ಮಾರ್ಟ್‌ಫೋನ್ 3,500mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದಿದ್ದು, ಯುಎಸ್‌ಬಿ ಟೈಪ್ ಸಿ ಫೋರ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಆಂಡ್ರಾಯ್ಡ್ 9 ಓಎಸ್ ಒಳಗೊಂಡಿದ್ದು, ಮುಂದೆ ಆಂಡ್ರಾಯ್ಡ್ 10 ಮತ್ತು ಆಂಡ್ರಾಯ್ಡ್ 11 ಓಎಸ್‌ಗಳಿಗೆ ಅಪ್‌ಗ್ರೇಡ್‌ಗೆ ಬೆಂಬಲಿಸಲಿದೆ. ಎಚ್‌ಟಿಸಿ 'ವೈಲ್ಡ್‌ಫೈರ್ ಎಕ್ಸ್' ಸ್ಮಾರ್ಟ್‌ಫೋನ್ 3,300mAh ಬ್ಯಾಟರಿ ಪವರ್ ಹೊಂದಿದ್ದು, ಆಂಡ್ರಾಯ್ಡ್ 9 ಪೈ ಓಎಸ್ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಮೊಟೊರೊಲಾ ಒನ್ ಆಕ್ಷನ್ ಮತ್ತು ಎಚ್‌ಟಿಸಿ 'ವೈಲ್ಡ್‌ಫೈರ್ ಎಕ್ಸ್' ಸ್ಮಾರ್ಟ್‌ಫೋನ್‌ಗಳೆರಡು ಬೆಲೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಹೊಂದಿಲ್ಲ. ಮೊಟೊರೊಲಾ ಒನ್ ಆಕ್ಷನ್ ಸ್ಮಾರ್ಟ್‌ಫೋನ್ 4GB RAM ಮತ್ತು 128GB ಒಂದೇ ವೇರಿಯಂಟ್ ಆಯ್ಕೆ ಹೊಂದಿದ್ದು, 13,999ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ ಎಚ್‌ಟಿಸಿ 'ವೈಲ್ಡ್‌ಫೈರ್ ಎಕ್ಸ್' ಸ್ಮಾರ್ಟ್‌ಫೋನ್ 4GB RAM ಮತ್ತು 128GB ವೇರಿಯಂಟ್ ಸಹ 13,999ರೂ.ಗಳಿಗೆ ದೊರೆಯಲಿದೆ.

ಕೊನೆಯ ಮಾತು
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 13,999ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಸದ್ಯ ಮೊಟೊರೊಲಾ ಒನ್ ಆಕ್ಷನ್ ಮತ್ತು ಎಚ್‌ಟಿಸಿ 'ವೈಲ್ಡ್‌ಫೈರ್ ಎಕ್ಸ್' ಸ್ಮಾರ್ಟ್‌ಫೋನ್‌ಗಳೆರಡು ಗಮನ ಸೆಳೆದಿವೆ. 4GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಬೆಲೆ ಒಂದೇ ಆದರೂ ಫೀಚರ್ಸ್‌ಗಳು ಭಿನ್ನ ಆಗಿವೆ. ಬ್ಯಾಟರಿ ಮತ್ತು ಡಿಸ್‌ಪ್ಲೇ ರೆಸಲ್ಯೂಶನ್ ಅಂಶಗಳಲ್ಲಿ ಕೆಲವು ವ್ಯತ್ಯಾಸಗಳು ಕಂಡಿದ್ದರೂ ತಮ್ಮದೇ ಆದ ಬ್ರ್ಯಾಂಡ್ ಹೊಂದಿವೆ. ಫೀಚರ್ಸ್‌ಗಳ ವ್ಯತ್ಯಾಸದ ತಕ್ಕಡಿಯಲ್ಲಿ ಮೊಟೊರೊಲಾ ಒನ್ ಆಕ್ಷನ್ ಫೋನ್ ತೂಕವೆ ಹೆಚ್ಚೆನಿಸುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470