ಮೊಟ್ಟ ಮೊದಲ 'ಫೋಲ್ಡೆಬಲ್' ಸ್ಮಾರ್ಟ್‌ಫೋನ್‌ ಪರಿಚಯಿಸಲಿದೆ ಮೊಟೊ!!

|

ಸ್ಮಾರ್ಟ್‌ಫೋನ್‌ಗಳಲ್ಲಿ ಹಲವು ಹೊಸತನಗಳನ್ನು ಪರಿಚಯಿಸಿರುವ ಜನಪ್ರಿಯ ಮೊಬೈಲ್ ಸಂಸ್ಥೆ ಮೊಟೊರೊಲಾ ಇದೀಗ ವಿಶೇಷ 'ಫೋಲ್ಡೆಬಲ್' ಸ್ಮಾರ್ಟ್‌ಫೋನ್‌ ಒಂದನ್ನು ಪರಿಚಯಿಸಲು ಮುಂದಾಗಿದೆ. ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಏನಾದರೊಂದು ಹೊಸತನವನ್ನು ನೀಡುತ್ತಲೆ ಸಾಗಿ ಬಂದಿರುವ ಮೊಟೊರೊಲಾ ಕಂಪೆನಿ ಈ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಬಗೆಯ ಪರಂಪರೆಗೆ ನಾಂದಿಹಾಕಲಿದೆ ಎನ್ನಲಾಗುತ್ತಿದೆ.

ಮೊಟ್ಟ ಮೊದಲ 'ಫೋಲ್ಡೆಬಲ್' ಸ್ಮಾರ್ಟ್‌ಫೋನ್‌ ಪರಿಚಯಿಸಲಿದೆ ಮೊಟೊ!!

ಹೌದು, ಮೊಟೊರೊಲಾ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಏನಾದರೊಂದು ಹೊಸತನವನ್ನು ನೀಡುತ್ತಲೆ ಸಾಗಿ ಬಂದಿದ್ದು, ಅದರ ಮುಂದುವರಿದ ಭಾಗವಾಗಿ ಮೊಟೊ ಇದೀಗ 'ರೆಜರ್' ಹೆಸರಿನ ಮೊದಲ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಕ್ಕೆ ತಯಾರಾಗಿದೆ. ಈ ಮೂಲಕ ಮೊಟೊ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಮೊದಲು ಫೋಲ್ಡೆಬಲ್ ಫೋನ್‌ ಅನ್ನು ಪರಿಚಯಿಸಿದ ಕೀರ್ತಿ ಪಡೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಮೊಟ್ಟ ಮೊದಲ 'ಫೋಲ್ಡೆಬಲ್' ಸ್ಮಾರ್ಟ್‌ಫೋನ್‌ ಪರಿಚಯಿಸಲಿದೆ ಮೊಟೊ!!

ಮೊಟೊರೊಲಾ ಸಂಸ್ಥೆಯು ತನ್ನ ಆರಂಭದಲ್ಲಿ ದಿನಗಳಲ್ಲಿಯೂ ಫೋಲ್ಡೆಬಲ್ ಮೊಬೈಲ್‌ಗಳನ್ನು ಪರಿಚಯಿಸಿತ್ತು. ಆದರೆ, ಈ ಬಾರಿ ಫೋಲ್ಡೆಬಲ್ ಮಾದರಿಯ ಸ್ಮಾರ್ಟ್‌ಫೋನ್‌ ಪರಿಚಯಿಸುತ್ತಿದ್ದು, ಈ ಫೋನ್ ಮುಂದಿನ ತಿಂಗಳಲ್ಲಿ ಮಾರುಕಟ್ಟೆಗೆ ಲಾಂಚ್ ಆಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿವೆ. ಹಾಗಾದರೆ, ಮೊಟೊರೊಲಾದ ಈ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಹೊಂದಿರಬಹುದಾದ ಇತರೆ ವಿಶೇಷ ಫೀಚರ್ಸ್‌ಗಳು ಏನಿರಬಹುದು ಎನ್ನುವುದನ್ನು ನೋಡೋಣ ಬನ್ನಿ.

ರಚನೆ ಮತ್ತು ಸ್ಕ್ರೀನ್ಸ್

ರಚನೆ ಮತ್ತು ಸ್ಕ್ರೀನ್ಸ್

ಮೊಟೊರೊಲಾ ಬಿಡುಗಡೆ ಮಾಡಲಿರುವ ಹೊಸ ಫೋನ್ ಫೋಲ್ಡೆಬಲ್ ಮಾದರಿಯಲ್ಲಿರಲಿದೆ. ಇದರಲ್ಲಿ ಎರಡು ಡಿಸ್‌ಪ್ಲೇ ಹೊಂದಿರಲಿದ್ದು, ಮೇಲ್ಬಾಗದಲ್ಲಿ ಚಿಕ್ಕ ಡಿಸ್‌ಪ್ಲೇ ಮತ್ತು ಒಳಗಡೆ OLED ಸ್ಕ್ರೀನ್ ಇರಲಿದೆ ಎಂದು ಹೇಳಲಾಗಿದೆ.. ಈ ಫೋನಿನ ಡಿಸೈನ್ ಔಟ್‌ಲೈನ್ ಆಕರ್ಷಕವಾಗಿದ್ದು, ಕೆಳಗಡೆ ರೌಂಡೆಡ್ ಆಕಾರದಲ್ಲಿರಲಿದೆ. ಮೊಟೊದ ರೆಜರ್ ಫೋನ್ ಸ್ಪೋರ್ಟಿ ಮಾದರಿ ಲುಕ್‌ ಹೊಂದಿದ್ದು, ಇದೊಂದು ರೆರ್ ಡಿಸೈನ್ ಮಾದರಿ ಫೋನ್ ಆಗಿದೆ ಎನ್ನಲಾಗಿದೆ.

ಕ್ಯಾಮೆರಾ ಹೇಗಿರಲಿದೆ.?

ಕ್ಯಾಮೆರಾ ಹೇಗಿರಲಿದೆ.?

ಮೊಟೊದ ಫೋಲ್ಡೆಬಲ್ ಮಾದರಿಯ ಸ್ಮಾರ್ಟ್‌ಫೋನ್‌ನಲ್ಲಿ ಎರಡು ರಿಯರ್ ಕ್ಯಾಮೆರಾಗಳು ಹಾಗೂ ಒಂದು ಸೆಲ್ಫೀ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಆದರೆ ಈ ಕ್ಯಾಮೆರಾಗಳು ಎಷ್ಟು ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರಲಿವೆ ಎಂದು ಮಾಹಿತಿ ಲಭ್ಯವಿಲ್ಲ. ಲೀಕ್ ಆಗಿರುವ ಮಾಹಿತಿ ಪ್ರಕಾರ, ಈ ಬಾರಿ ಹೆಚ್ಚು ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾಗಳನ್ನು ಮೊಟೊ ಪರಿಚಯಿಸುತ್ತಿದೆ ಎಂದು ಹೇಳಲಾಗಿದೆ.

ಇತರೆ ಫೀಚರ್ಸ್‌ಗಳು

ಇತರೆ ಫೀಚರ್ಸ್‌ಗಳು

ರೆಜರ್ ಫೋನ್ ಎರಡು ಡಿಸ್‌ಪ್ಲೇ ಹೊಂದಿರುವದರಿಂದ, ನೋಟಿಫಿಕೇಶನ್‌ಗಳನ್ನು ನೋಡಲು ಪ್ರತಿ ಬಾರಿ ಫೋನ್‌ ಫೋಲ್ಡಿಂಗ್ ತೆರೆಯುವ ಅಗತ್ಯ ಇಲ್ಲ. ಪೋನಿನ ಮೇಲ್ಭಾಗದಲ್ಲಿರುವ ಚಿಕ್ಕ ಡಿಸ್‌ಪ್ಲೇನಲ್ಲಿಯೇ ನೋಡಬಹುದಾಗಿದೆ. ಈ ಪೋನ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ನೊಂದಿಗೆ ಪವರ್‌ಫುಲ್ ಬ್ಯಾಟರಿ ಬಾಳಕೆಯನ್ನು ಸಹ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಬೆಲೆ ಎಷ್ಟೀರಲಿದೆ?

ಬೆಲೆ ಎಷ್ಟೀರಲಿದೆ?

ಮೊಟೊದ ಈ ಫೋಲ್ಡಿಂಗ್ ಫೋನ್ ಮೊದಲು ಯುಎಸ್ ನಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ, ಈ ವರ್ಷಾಂತ್ಯದೊಳಗೆ ಭಾರತಕ್ಕೂ ಕಾಲಿಡಲಿದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ರೆಜರ್ ಫೋಲ್ಡಿಂಗ್ ಫೋನ್ ಬೆಲೆ ಸುಮಾರು 1,06,100 ರೂಪಾಯಿಗಳು ಆಗಿರಲಿವೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
Motorola is not the only company that's working on a foldable smartphone, with Samsung and Huaweiboth confirming development of such a model.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X