ಮೋಟೋರೋಲಾ ಗ್ರಾಹಕ ಸೇವಾ ಕೇಂದ್ರ ಇನ್ನು ಬೆಂಗಳೂರಿನಲ್ಲೂ!!!

Written By:

ಮೋಟೋರೋಲಾ ಇಂದು ತನ್ನ ಪ್ರಥಮ 'ಮೋಟೋ ಕೇರ್' ಫ್ಲ್ಯಾಗ್‌ಶಿಪ್ ಕೇಂದ್ರವನ್ನು ಭಾರತದಲ್ಲಿ ತೆರೆದಿದೆ. ಕರ್ನಾಟಕದ ಸಿಲಿಕಾನ್ ಸಿಟಿ ಎಂದೇ ಖ್ಯಾತಿವೆತ್ತಿರುವ ಬೆಂಗಳೂರಿನ ಜಯನಗರದಲ್ಲಿ ಗ್ರಾಹಕ ಸೇವಾ ಕೇಂದ್ರ ಮತ್ತು ಬೆಂಬಲ ಸಂಸ್ಥೆಯನ್ನು ಕಂಪೆನಿ ತೆರೆದಿದ್ದು ಇದು 11 ನೇ ಮುಖ್ಯ ರಸ್ತೆ, 4 ನೇ ಬ್ಲಾಕ್ ಜಯನಗರದಲ್ಲಿದೆ.

[ಸುಡು ಬೇಸಿಗೆಯಲ್ಲೂ ಟೆಕ್ ಉತ್ಪನ್ನಗಳನ್ನು ತಣ್ಣಗಿರಿಸುವ ಗ್ಯಾಜೆಟ್ಸ್]

3000 ಚದರ ವಿಸ್ತೀರ್ಣದ ಈ ಸುಸಜ್ಜಿತ ಸೇವಾ ಕೇಂದ್ರ ಮೋಟೋರೋಲಾದ ಭವ್ಯತೆಗೆ ಸಾಕ್ಷಿಯಾಗಿದೆ. ಇನ್ನು ಸೇವಾ ಕೇಂದ್ರದ ಬಗ್ಗೆ ಹೇಳುವುದಾದರೆ ಇದು ಗ್ರಾಹಕರ ಎಲ್ಲಾ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸುವ ವ್ಯವಸ್ಥೆಯನ್ನು ಒಳಗೊಂಡಿದ್ದು ಸಾಫ್ಟ್‌ವೇರ್ ಅಪ್‌ಗ್ರೇಡ್ ಮತ್ತು ಡಿವೈಸ್ ಹಾರ್ಡ್‌ವೇರ್ ರಿಪೇರಿಯನ್ನು ಇದು ಹೊಂದಿದೆ.

ಮೋಟೋರೋಲಾ ಗ್ರಾಹಕ ಸೇವಾ ಕೇಂದ್ರ ಇನ್ನು ಬೆಂಗಳೂರಿನಲ್ಲೂ!!!

ಇನ್ನು ಮೋಟೋ ಎಕ್ಸ್, ಮೋಟೋ ಜಿ, ಮೋಟೋ ಇ, ಮೋಟೋ ಟರ್ಬೊ, ಮೋಟೋರೋಲಾ ನೆಕ್ಸಸ್ ಮತ್ತು ಮೋಟೋ 360 ಅನ್ನು ಗ್ರಾಹಕರು ಬಳಸಿ ಖರೀದಿಗೂ ಮುಂದಾಗಬಹುದಾಗಿದೆ. ಇನ್ನು ಫೋನ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವುದಾದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಸಂಸ್ಥೆ ಉತ್ಪನ್ನಗಳನ್ನು ಗ್ರಾಹಕರಿಗೆ ವಿತರಿಸುತ್ತದೆ.

English summary
Motorola India, today unveiled the first 'Moto Care' flaghip center in India. This customer support-cum-service center is now open at The High Street, 11th Main Rd, 4th Block, Jayanagar, Bengaluru.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot