ಸುಡು ಬೇಸಿಗೆಯಲ್ಲೂ ಟೆಕ್ ಉತ್ಪನ್ನಗಳನ್ನು ಸಂರಕ್ಷಿಸಬೇಕೇ?

By Shwetha
|

ಸುಡು ಸುಡು ಬೇಸಿಗೆಯಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದೇ ದುಸ್ತರ ಎಂದಾದಲ್ಲಿ ಇಲೆಕ್ಟ್ರಾನಿಕ್ ಉಪಕರಣಗಳ ಕಾಳಜಿಯನ್ನು ನಾವು ಮಾಡುವುದು ಹೇಗೆ ಎಂಬುದನ್ನು ಮನಗಂಡಿದ್ದೀರಾ? [ಭಾರತಕ್ಕೆ ಕಾಲಿರಿಸಲಿರುವ ಅತ್ಯುನ್ನತ ಗ್ಯಾಜೆಟ್‌ಗಳು]

ಹೌದು ಬೇಸಿಗೆಯಲ್ಲಿ ನಾವು ಸುಡುವ ಸೂರ್ಯನಿಂದ ತಪ್ಪಿಸಿಕೊಳ್ಳಲು ಸನ್ ಲೋಶನ್, ಛತ್ರಿಯ ಬಳಕೆ, ಸುಗಂಧ ದ್ರವ್ಯಗಳನ್ನು ಉಪಯೋಗಿಸುತ್ತೇವೆ. ಆದರೆ ದುಬಾರಿ ಗ್ಯಾಜೆಟ್‌ಗಳನ್ನು ಬೇಸಿಗೆಯಲ್ಲಿ ಸಂರಕ್ಷಿಸಿಕೊಳ್ಳುವುದು ಅತೀ ಮುಖ್ಯವಾಗಿದೆ. ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ನಿಮ್ಮ ಗ್ಯಾಜೆಟ್‌ಗಳನ್ನು ಸಂರಕ್ಷಿಸುವ ಉತ್ಪನ್ನಗಳೊಂದಿಗೆ ನಾವು ಬಂದಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ಈ ರಕ್ಷಣೆ ಹೇಗೆ ಎಂಬುದನ್ನು ಅರಿತುಕೊಳ್ಳಿ.

ಫೇಕ್ ಟಿವಿ

ಫೇಕ್ ಟಿವಿ

ಟಿವಿ ಪರದೆಯ ಬೆಳಕು ಮತ್ತು ಬಣ್ಣವನ್ನು ನಿಯಂತ್ರಿಸುವ ಫೇಕ್ ಟಿವಿ ಮನೆಯಲ್ಲಿ ಯಾರಾದರೂ ಟಿವಿ ನೋಡುತ್ತಿದ್ದಾರೆ ಎಂದು ಭಾಸವಾಗುವಂತೆಯೇ ಮಾಡುತ್ತದೆ.

ಸ್ಟಿಕ್ ಎನ್ ಫೈಂಡ್

ಸ್ಟಿಕ್ ಎನ್ ಫೈಂಡ್

ಸಣ್ಣ ಜಿಪಿಎಸ್ ಟ್ರ್ಯಾಕರ್ ಅನ್ನು ಇದು ಒಳಗೊಂಡಿದ್ದು ನಿಮ್ಮೆಲ್ಲಾ ವಸ್ತುಗಳನ್ನು ಇದು ಜೋಪಾನವಾಗಿ ಕಾಪಾಡುತ್ತದೆ. ಈ ಟ್ರ್ಯಾಕರ್ ಅನ್ನು ನಿಮ್ ವಾಲ್ಲೆಟ್, ಕೀಗೆ ಅಟ್ಯಾಚ್ ಮಾಡಿದರೆ ಸಾಕು.

ಸೇವ್ ದ ಬೇಬಿ (ಸ್ವಿಮ್ಮಿಂಗ್ ಪೂಲ್ ಅಲರಾಮ್)

ಸೇವ್ ದ ಬೇಬಿ (ಸ್ವಿಮ್ಮಿಂಗ್ ಪೂಲ್ ಅಲರಾಮ್)

ನಿಮ್ಮ ಮಗು ಈಜುಕೊಳದ ಬಳಿ ಆಟವಾಡುತ್ತಿದ್ದಲ್ಲಿ ಮಗುವಿನ ಬಗ್ಗೆ ಕಾಳಜಿಯನ್ನು ಈ ಅಲರಾಮ್ ವಹಿಸುತ್ತದೆ.

ಬೀರ್ ಗ್ರೋವ್ಲರ್

ಬೀರ್ ಗ್ರೋವ್ಲರ್

ಬೀರ್ ಅನ್ನು ತಾಜಾವಾಗಿ ಇರಿಸುವ ಸ್ಕ್ರೂ ಇರುವ ಲಿಡ್‌ನೊಂದಿಗೆ ಬಂದಿದ್ದು, ಸೂರ್ಯನಿಂದ ಬೀರ್ ಅನ್ನು ಸಂರಕ್ಷಿಸುತ್ತದೆ.

ಚಿಲ್ ಪಕ್

ಚಿಲ್ ಪಕ್

ಇದಕ್ಕೆ ನೀರು ತುಂಬಿಸಿ ರಾತ್ರಿ ಪೂರ್ತಿ ಫ್ರಿಜ್‌ನಲ್ಲಿರಿಸಿ ಮತ್ತು ನಿಮ್ಮ ಕ್ಯಾನ್‌ನ ಕೆಳಭಾಗದಲ್ಲಿ ಇದನ್ನು ಅಟ್ಯಾಚ್ ಮಾಡಿ. ನಿಮ್ಮ ಪಾನೀಯವನ್ನು ತಂಪಾಗಿರಿಸುತ್ತದೆ.

ಸ್ಮಾರ್ಟ್‌ಫೋನ್ ಬ್ರೀತ್‌ಲೈಜರ್

ಸ್ಮಾರ್ಟ್‌ಫೋನ್ ಬ್ರೀತ್‌ಲೈಜರ್

ನಿಮ್ಮ ಬಿಯರ್ ಸೇವನೆ ಅಳತೆಯನ್ನು ಇದು ಟ್ರ್ಯಾಕ್ ಮಾಡುತ್ತದೆ. ಬ್ಲ್ಯೂಟೂತ್ ಮೂಲಕ ಇದು ಸ್ಮಾರ್ಟ್‌ಫೋನ್‌ನೊಂದಿಗೆ ಪೇರ್ ಆಗುತ್ತದೆ ಮತ್ತು ಮಾಹಿತಿ ನೀಡುತ್ತದೆ.

ಸನ್ ಬರ್ನ್ ವೃಸ್ಟ್‌ಬ್ಯಾಂಡ್ಸ್

ಸನ್ ಬರ್ನ್ ವೃಸ್ಟ್‌ಬ್ಯಾಂಡ್ಸ್

ಈ ವಿಶೇಷ ಪೇಪರ್ ವೃಸ್ಟ್‌ಬ್ಯಾಂಡ್‌ಗಳು, ನಿಮ್ಮನ್ನು ಯುವಿ ಕಿರಣಗಳಿಂದ ರಕ್ಷಿಸುತ್ತವೆ. ಹೆಚ್ಚು ಸೂರ್ಯನ ಕಿರಣಗಳು ನಿಮ್ಮನ್ನು ತಟ್ಟಿದಾಗ ಇದರ ಬಣ್ಣ ಬದಲಾಗುತ್ತದೆ.

ಹ್ಯಾಂಡ್ ಹೆಲ್ಡ್ ಬಗ್ ಝಾಪರ್

ಹ್ಯಾಂಡ್ ಹೆಲ್ಡ್ ಬಗ್ ಝಾಪರ್

ಸೊಳ್ಳೆ, ಕೀಟಗಳು, ನೊಣ ಮೊದಲಾದವುಗಳನ್ನು ಈ ಬ್ಯಾಟ್ ಬಳಸಿ ಕೊಲ್ಲಬಹುದಾಗಿದ್ದು ಇದಕ್ಕೆ ಚಾರ್ಜ್ ಮಾಡಬೇಕಾಗುತ್ತದೆ.

ಬಗ್ ವಾಕ್ಯುಮ್

ಬಗ್ ವಾಕ್ಯುಮ್

ನೊಣ, ಸೊಳ್ಳೆ ಮೊದಲಾದ ಕೀಟಗಳನ್ನು ಈ ವಾಕ್ಯುಮ್ ನಿವಾರಿಸುತ್ತದೆ.

ಚೈಲ್ಡ್ ಲೊಕೇಟರ್

ಚೈಲ್ಡ್ ಲೊಕೇಟರ್

ನಿಮ್ಮ ಮಗುವಿನ ಸೊಂಟಕ್ಕೆ ಈ ಉಪಕರಣವನ್ನು ಅಳವಡಿಸಿದರೆ ಸಾಕು ಮಗು 30 ಮೀಟರ್‌ಗಿಂತ ಹೆಚ್ಚು ದೂರವನ್ನು ಕ್ರಮಿಸಿತು ಎಂದಲ್ಲಿ ಇದು ಪೋಷಕರಿಗೆ ಸೂಚನೆಯನ್ನು ನೀಡುತ್ತದೆ.

Best Mobiles in India

English summary
Summer comes with its own set of problems and dangers. We're much more prone to getting overheated, dehydrated and sunburned. So here are the best tech to protect you from the dangers of summer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X