Home
ಮೊಬೈಲ್

ಸ್ಮಾರ್ಟ್‌ಫೋನ್ ಬ್ಯಾಟರಿ 10 ದಿನ ಖಾಲಿಯಾಗಲ್ಲ! ಇದು ಜಿಯೋನಿಯ ಜಿಂಗಾಲಾಲ!!

Mysterious Gionee M2017 ಎಂಬ 7000 AMH ಬ್ಯಾಟರಿ ಪವರ್ ಹೊಂದಿರುವ ಜಿಯೋನಿ ಮೊಬೈಲ್‌ ನಿಮಗಾಗಿ ಮಾರುಕಟ್ಟೆಗೆ ಬರುತ್ತಿದೆ.

By Bhaskar N J

ಸ್ಮಾರ್ಟ್‌ಫೋನ್ ಬಳಕೆದಾರರ ಬಹುದೊಡ್ಡ ಚಿಂತೆಯೇ ಬ್ಯಾಟರಿ ಪ್ಯಾಕಪ್ ಇಲ್ಲದಿರುವುದು. ರಾತ್ರಿಪೂರ್ತಿ ಮೊಬೈಲ್‌ ಚಾರ್ಜ್ ಮಾಡಿದರೂ ಸಹ ಸಂಜೆಯವೇಳೆಗೆ ನನ್ನ ಮೊಬೈಲ್ ಬ್ಯಾಟರಿ ಲೋ ತೋರಿಸುತ್ತಿದೆ ಎಂದು ಎಲ್ಲರ ಆಂಬೋಣ!

ಅಂತರ್ಜಾಲವನ್ನು ಹೆಚ್ಚು ಬಳಸುವ ನಾನು ಕನಿಷ್ಠ ಎರಡು ದಿವಸಗಳಾದರು ಬ್ಯಾಟರಿ ಉಳಿಯುವಂತಹ ಮೊಬೈಲ್‌ ಖರೀದಿಸಬೇಕು ಎಂದು ಸ್ಮಾರ್ಟ್‌ಫೋನ್ ಬಳಕೆದಾರರು ಅಂದುಕೊಳ್ಳುತ್ತಾರೆ. ಆದರೆ, ಅಂತಹ ಮೊಬೈಲ್ ಇಲ್ಲಿಯವರಿಗೂ ಸಿಕ್ಕಿರಲಿಲ್ಲ!! ಆದರೆ, ಇನ್ನು ಆ ಚಿಂತೆ ಬಿಡಿ! ಏಕೆಂದರೆ, Mysterious Gionee M2017 ಎಂಬ 7000 AMH ಬ್ಯಾಟರಿ ಪವರ್ ಹೊಂದಿರುವ ಜಿಯೋನಿ ಮೊಬೈಲ್‌ ನಿಮಗಾಗಿ ಮಾರುಕಟ್ಟೆಗೆ ಬರುತ್ತಿದೆ. ಮುಂದೆ ಓದಿ

ಫೇಸ್‌ಬುಕ್ ಉಪಯೋಗಿಸಲು ಇನ್ನು ಡಾಟಾ ಬೇಕಿಲ್ಲ!..ಉಚಿತ Wi-Fi ಪಡೆಯಿರಿ!!

ಕೆಲವೇ ಕೆಲವು ದಿನಗಳ ಹಿಂದೆ ಜಿಯೋನಿ ಎಂದರೆ ಯಾವ ಕಂಪೆನಿ ಎಂದು ಕೇಳುತ್ತಿದ್ದ ಜನರು ಇಂದು ಜಿಯೋನಿ ಮೊಬೈಲ್‌ಖರೀದಿಸಲು ಸಾಲು ನಿಂತಿದ್ದಾರೆ. ಹಾಗಾದರೆ 7000 AMH ಬ್ಯಾಟರಿ ಪವರ್ ಹೊಂದಿರುವ ಜಿಯೋನಿಯ ನೂತನ ಸ್ಮಾರ್ಟ್‌ಫೋನ್ Mysterious Gionee M2017 ಏನೇನು ವಿಶೇಷತೆಗಳನ್ನು ಹೋಂದಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

5.7 ಇಂಚ್ 2k ಡಿಸ್‌ಪ್ಲೇ

5.7 ಇಂಚ್ 2k ಡಿಸ್‌ಪ್ಲೇ

ಜಿಯೋನಿ ಬಿಡುಗಡೆಮಾಡುತ್ತಿರುವ ನೂತನ Mysterious Gionee M2017 ಸ್ಮಾರ್ಟ್‌ಫೋನ್ 5.7 ಇಂಚ್ 2k ಡಿಸ್‌ಪ್ಲೇ ಹೊಂದಿದೆ. ಡಬಲ್-ಎಡ್ಜ್ ಡಿಸ್‌ಪ್ಲೇ ಇರುವುದರಿಂದ ಮೊಬೈಲ್‌ ನೋಡಲು ಅತ್ಯಾಕರ್ಷಕವಾಗಿದೆ.

ಅತ್ಯುತ್ತಮ ಕ್ಯಾಮರಾ.

ಅತ್ಯುತ್ತಮ ಕ್ಯಾಮರಾ.

Mysterious Gionee M2017 ಮೊಬೈಲ್ 12mp ಮತ್ತು 13mp ಪಿಕ್ಯೆಲ್‌ಗಳುಳ್ಳ ಅತ್ಯುತ್ತಮ ಹಿಂಬದಿ ಎರಡು ಕ್ಯಾಮರಾವನ್ನು ಹೊಂದಿದೆ. ಮತ್ತು ಸೆಲ್ಫಿ ಪ್ರಿಯರಿಗಾಗಿ 8mp ಮುಂಬದಿ ಕ್ಯಾಮರಾವನ್ನು ಹೊಂದಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

6GB ರ್ಯಾಮ್!!

6GB ರ್ಯಾಮ್!!

Gionee M2017 ಸ್ಮಾರ್ಟ್‌ಫೋನ್ 6GB ರ್ಯಾಮ್ ಹೊಂದಿದ್ದು, ಅತ್ತುತ್ತಮ ಕಾರ್ಯನಿರ್ವಹಣೆಯ ಅನುಭವಕ್ಕಾಗಿ ಆಕ್ಟ-ಕೋರ್ ಪ್ರೊಸೆಸರ್ ಒಳಗೊಂಡಿದೆ.

7000 AMH ಬ್ಯಾಟರಿ!

7000 AMH ಬ್ಯಾಟರಿ!

ಮೊದಲೇ ಹೇಳಿದಂತೆ Mysterious Gionee M2017 ಸ್ಮಾರ್ಟ್‌ಫೋನ್ ಅತ್ಯುತ್ತಮ ಬ್ಯಾಟರಿ ಪವರ್ ಹೊಂದಿದೆ. ನೀವು ಹೆಚ್ಚು ಇಂಟರ್‌ನೆಟ್ ಉಪಯೋಗಿಸಿದರೂ 7000 AMH ಬ್ಯಾಟರಿ ಇರುವುದರಿಂದ 4 ರಿಂದ 5 ದಿವಸಗಳು ಮೊಬೈಲ್ ಚಾರ್ಜ್ ಮಾಡುವ ಅವಶ್ಯಕತೆ ಇರುವುದಿಲ್ಲ. ಒಂದು ವೇಳೆ ನೀವು ಇಂಟರ್‌ನೆಟ್ ಬಳಕೆದಾರರು ಆಗದಿದ್ದಲ್ಲಿ 10 ದಿನಗಳಿಗಿಂತ ಹೆಚ್ಚು ನಿಮ್ಮ ಮೊಬೈಲ್‌ನಲ್ಲಿ ಚಾರ್ಜ್ ಇರುತ್ತದೆ ಎಂದು ಹಳಲಾಗಿದೆ.

ಮೊಬೈಲ್‌ ಬಿಡುಗಡೆ ಯಾವಾಗ?

ಮೊಬೈಲ್‌ ಬಿಡುಗಡೆ ಯಾವಾಗ?

ಮೊಬೈಲ್‌ ಬಿಡುಗಡೆ ದಿನಾಂಕವನ್ನು ಜಿಯೋನಿ ಇನ್ನು ಸ್ಪಷ್ಟಪಡಿಸಿಲ್ಲ. Mysterious Gionee M2017 ಮೊಬೈಲ್‌ ಹೆಸರಿನಲ್ಲಿಯೇ 2017 ಎಂದು ಇದ್ದು, 2017ನೇ ವರ್ಷದ ಮೊದಲ ತಿಂಗಳುಗಳಲ್ಲಿ ಈ ಮೊಬೈಲ್‌ ಬಿಡುಗಡೆಯಾಗುತ್ತದೆ ಎನ್ನಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
It looks like Gionee isn’t yet done in releasing the battery-centric devices. A mysterious smartphone from Gionee has spotted online with a 7000mAh battery to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+