Home
ಮೊಬೈಲ್

ಕ್ಯೋಸೆರಾ ಸೋಲಾರ್ ಸ್ಮಾರ್ಟ್‌ಫೋನ್: ಫೋನ್‌ ಬ್ಯಾಟರಿ ಎಂದಿಗೂ ಖಾಲಿ ಆಗುವುದಿಲ್ಲ!

By Suneel

ಪ್ರವಾಸ ಹೋದಾಗ, ದೂರದ ಪಟ್ಟಣಗಳಿಗೆ ಹೋದಾಗ ಸ್ಮಾರ್ಟ್‌ಫೋನ್‌ಗೆ ಎದುರಾಗುವ ದೊಡ್ಡ ಸಮಸ್ಯೆ ಎಂದರೆ ಬ್ಯಾಟರಿ ಪವರ್‌. ಇಂತಹ ಸಂದರ್ಭದಲ್ಲಿ ಬ್ಯಾಟರಿ ಚಾರ್ಜ್‌ ಮಾಡಲು ಪವರ್‌ ಬ್ಯಾಂಕ್ ಹೊರತು ಪಡಿಸಿದರೆ ಸೂರ್ಯನ ಬೆಳಕೆ ಗತಿ. ಹಾಗೆ ಒಮ್ಮೆ ಸೂರ್ಯನ ಬೆಳಕಿಗೆ ಸ್ಮಾರ್ಟ್‌ಫೋನ್‌ ಹಿಡಿದ ತಕ್ಷಣ ಬ್ಯಾಟರಿ ಚಾರ್ಜ್‌ ಆಗುವ ಹಾಗಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಅಲ್ವೇ! ಇಂತಹದೊಂದು ಪ್ರಯತ್ನ ಈಗಾಗಲೇ ನಡೆದಿದೆ. ಅದೇನು ಎಂದು ಮುಂದೆ ಓದಿರಿ.

ಮೊಬೈಲ್‌ ಮಾರುಕಟ್ಟೆಗೆ ಹೊಸ ಹೊಸ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳು ಕಾಲಿಡುತ್ತಿವೆ. ಅತಿ ಶೀಘ್ರದಲ್ಲಿ ಸ್ಮಾರ್ಟ್‌ಫೋನ್‌ ಪ್ರಿಯರ ಕೈಗೆ ತಲುಪಲು ರೆಡಿಯಾಗಿರುವ ಸ್ಮಾರ್ಟ್ ಡಿವೈಸ್‌ನಲ್ಲಿ ಬ್ಯಾಟರಿಯೇ ಖಾಲಿಯಾಗುವುದಿಲ್ಲ. ಅಂದಹಾಗೆ ವಿಶೇಷ ಏನಪ್ಪಾ ಅಂದ್ರೆ ಯಾವುದೇ ಚಾರ್ಜರ್ ಕೇಬಲ್‌ ಹಿಡಿದು ವಿದ್ಯುತ್‌ಗೆ ಪ್ಲನ್‌ ಇನ್‌ ಮಾಡುವ ಅವಶ್ಯಕತೆಯೂ ಇಲ್ಲ.

ಚಾರ್ಜರ್‌ ಕನೆಕ್ಟ್‌ ಮಾಡಿ ಚಾರ್ಜ್‌ ಮಾಡುವ ಅಗತ್ಯವೂ ಇಲ್ಲದ, ಹಾಗೆ ಬ್ಯಾಟರಿಯ ಪವರ್‌ ಖಾಲಿಯೂ ಆಗದ ಈ ಸ್ಮಾರ್ಟ್‌ಫೋನ್ ಅನ್ನು ಜಪಾನಿನ 'ಕ್ಯೋಸೆರಾ' ಸಂಸ್ಥೆ ಬಹಿರಂಗಪಡಿಸಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ ಬೆಲೆ ಎಷ್ಟು, ವಿಶೇಷತೆ ಏನು, ಡಿವೈಸ್‌ ರನ್‌ ಆಗುವುದಾದರೂ ಹೇಗೆ, ಚಾರ್ಜ್‌ ಹೇಗೆ ಆಗುತ್ತದೆ ಎಂಬಿತ್ಯಾದಿ ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ಐಫೋನ್ ಕ್ಯಾಮೆರಾ ಮತ್ತು ಫ್ಲ್ಯಾಶ್‌ ನಡುವಿನ ಸಣ್ಣ ಬ್ಲಾಕ್‌ ಹೋಲ್‌ ರಹಸ್ಯ ಇಲ್ಲಿದೆ

ಕ್ಯೋಸೆರಾ ಫೋನ್‌

ಕ್ಯೋಸೆರಾ ಫೋನ್‌

ಜಪಾನ್‌ ಮೂಲದ 'ಕ್ಯೋಸೆರಾ' ಸ್ಮಾರ್ಟ್‌ಫೋನ್‌ನಲ್ಲಿ ಎಂದಿಗೂ ಪವರ್ ಖಾಲಿಯೇ ಆಗುವುದಿಲ್ಲ. ಫೋನ್‌ನ ಸ್ಕ್ರೀನ್‌ನಲ್ಲಿ ಸೋಲಾರ್‌ ಪ್ಯಾನೆಲ್ ಇದ್ದು, ಹ್ಯಾಂಡ್‌ಸೆಟ್ ಚಾರ್ಜ್‌ ಆಗಲು ಸೂರ್ಯನ ಬೆಳಕನ್ನು ಬಳಸಲಾಗುತ್ತದೆ.

ಕ್ಯೋಸೆರಾ ಫೋನ್‌ ಡಿಸ್‌ಪ್ಲೇ

ಕ್ಯೋಸೆರಾ ಫೋನ್‌ ಡಿಸ್‌ಪ್ಲೇ

ಕ್ಯೋಸೆರಾ ಫೋನ್‌ ಡಿಸ್‌ಪ್ಲೇ 5 ಇಂಚು ಇದ್ದು, ದ್ಯುತಿವಿದ್ಯುಜ್ಜನಕ (ಫೋಟೋವೊಲ್ಟಿಕ್) ಲೇಯರ್‌ ಅನ್ನು ಸ್ಕ್ರೀನ್‌ಗೆ ವ್ಯವಸ್ಥೆಗೊಳಿಸಲಾಗಿದೆ.

ಸೋಲಾರ್ ಪವರ್‌

ಸೋಲಾರ್ ಪವರ್‌

ಸಾಂಪ್ರದಾಯಿಕ ಬ್ಯಾಟರಿಯನ್ನು ಫೋನ್‌ ಅವಲಂಭಿಸಿದ್ದರು ಸಹ, ಚಾರ್ಜ್‌ ಆಗುವುದು ಸೋಲಾರ್ ಪವರ್‌ ಅನ್ನು ಬ್ಯಾಟರಿ ಪವರ್‌ಗೆ ಬದಲಾಯಿಸುವ ಮೂಲಕ. ಅಂದಹಾಗೆ ಒಂದು ನಿಮಿಷ ಮಾತನಾಡಲು ಇದು 3 ನಿಮಿಷ ಸೂರ್ಯನ ಬೆಳಕನ್ನು ಹೀರಿಕೊಳ್ಳಬೇಕಂತೆ.

ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್

ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್

ಕ್ಯೋಸೆರಾ ಸಂಸ್ಥೆ ತನ್ನ 5 ಇಂಚಿನ ಡಿಸ್‌ಪ್ಲೇ ಡಿವೈಸ್ ಅನ್ನು ಬಾರ್ಸಿಲೋನಾದ 'ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌'ನಲ್ಲಿ ಪ್ರದರ್ಶಿಸಿತ್ತು. ಡಿವೈಶ್‌ ಕಾರ್ಯವೈಖರಿ ಬಗ್ಗೆ ವಿವರವನ್ನು ನೀಡಿತ್ತು.

ಕ್ಯೋಸೆರಾ ಮೊಬೈಲ್‌ ಅಭಿವೃದ್ದಿ

ಕ್ಯೋಸೆರಾ ಮೊಬೈಲ್‌ ಅಭಿವೃದ್ದಿ

ಬ್ಯಾಟರಿ ಚಾರ್ಜ್‌ ಆಗಲು ಸೂರ್ಯನ ಬೆಳಕನ್ನು ಉಪಯೋಗಿಸುವ ಸ್ಮಾರ್ಟ್‌ಫೋನ್‌ ಅನ್ನು ಕ್ಯೋಸೆರಾ ಸಂಸ್ಥೆ ಫ್ರೆಂಚ್‌ ಸಂಸ್ಥೆ 'ಸನ್‌ಪಾರ್ಟ್ನರ್‌' ಜೊತೆ ಸೇರಿ ಅಭಿವೃದ್ದಿ ಪಡಿಸಿದ್ದು, ಸನ್‌ಪಾರ್ಟ್ನರ್‌ ಸೋಲಾರ್ ಪ್ಯಾನೆಲ್‌ನಿಂದ ಮೊಬೈಲ್‌ಗಳನ್ನು ನಿರ್ಮಿಸುವ ಜವಾಬ್ದಾರಿ ಹೊತ್ತಿದೆ. ಇದನ್ನು WYSIPS (What You See Is Photovoltaic Surface) ಎಂದು ಕರೆಯಲಾಗಿದೆ.

ದ್ಯುತಿವಿದ್ಯುಜ್ಜನಕ (ಫೋಟೋವೊಲ್ಟಿಕ್)

ದ್ಯುತಿವಿದ್ಯುಜ್ಜನಕ (ಫೋಟೋವೊಲ್ಟಿಕ್)

0.55mm ಪಾರದರ್ಶಕ ದ್ಯುತಿವಿದ್ಯುಜ್ಜನಕ (ಫೋಟೋವೊಲ್ಟಿಕ್) ಫಲಕವನ್ನು ಫೋನ್‌ ಡಿಸ್‌ಪ್ಲೇ ಮತ್ತು ಟಚ್‌ ಸ್ಕ್ರೀನ್ ಪದರದ ನಡುವೆ ಹೊಂದಿದೆ. ಪವರ್ ಜೆನರೇಟ್‌ ಮಾಡುವ ಡಿಸ್‌ಪ್ಲೇ ಪದರವನ್ನು ದ್ಯುತಿವಿದ್ಯುಜ್ಜನಕ (ಫೋಟೋವೊಲ್ಟಿಕ್) ಸ್ಫಟಿಕ ಎಂದು ಕರೆಯಲಾಗುತ್ತದೆ. ಇದು ಚಿಪ್‌ಗೆ ಕನೆಕ್ಟ್ ಆಗಿದ್ದು, ಸೋಲಾರ್ ಶಕ್ತಿಯನ್ನು ಬ್ಯಾಟರಿಗೆ ಪವರ್‌ ಆಗಿ ಬದಲಾಯಿಸುತ್ತದೆ ಎಂದು ತಿಳಿಯಲಾಗಿದೆ.

ಸೋಲಾರ್ ಸ್ಮಾರ್ಟ್‌ಫೋನ್‌

ಸೋಲಾರ್ ಸ್ಮಾರ್ಟ್‌ಫೋನ್‌

ಒಂದು ನಿಮಿಷ ಕರೆಗಾಗಿ ಪ್ರತಿ 3 ನಿಮಿಷ ಸೂರ್ಯನ ಬೆಳಕನ್ನು ಫೋನ್ ಡಿಸ್‌ಪ್ಲೇ ಹೀರಿಕೊಳ್ಳುತ್ತದೆ.ಕಳೆದ ವರ್ಷದ 'ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್'ನಲ್ಲಿ ಇದನ್ನು ಸೋಲಾರ್‌ ಸ್ಮಾರ್ಟ್‌ಫೋನ್‌ ಎಂದೇ ಪ್ರದರ್ಶಿಸಲಾಗಿದೆ.

ಸಾಂಪ್ರದಾಯಿಕ ಬ್ಯಾಟರಿ

ಸಾಂಪ್ರದಾಯಿಕ ಬ್ಯಾಟರಿ

ಕ್ಯೋಸೆರಾ ಸೋಲಾರ್‌ ಸ್ಮಾರ್ಟ್‌ಫೋನ್‌ ಕೇವಲ ಸೋಲಾರ್‌ ಪವರ್‌ ಆಧಾರಿತವಾಗದೇ, ಸಾಂಪ್ರದಾಯಿಕ ಬ್ಯಾಟರಿಯನ್ನು ಸಹ ಬಳಸುತ್ತದೆ. ಹೈಬ್ರಿಡ್‌ ಕಾರುಗಳು ಗ್ಯಾಸ್ ಮತ್ತು ವಿದ್ಯುತ್‌ ಅನ್ನು ಬಳಸಿದ ಹಾಗೆ. ಡಿವೈಸ್‌ ಸೋಲಾರ್ ಶಕ್ತಿಯಿಂದ ಸಂಪೂರ್ಣ ಚಾರ್ಜ್‌ ಆಗಲು ದೀರ್ಥ ಸಮಯ ತೆಗೆದುಕೊಳ್ಳುತ್ತದೆ.

 ಸ್ಮಾರ್ಟ್‌ಫೋನ್‌ ಆಪ್

ಸ್ಮಾರ್ಟ್‌ಫೋನ್‌ ಆಪ್

ಸೋಲಾರ್ ಸ್ಮಾರ್ಟ್‌ಫೋನ್‌ ವಿಶೇಷ ಆಪ್‌ ಅನ್ನು ಇನ್‌ಬಿಲ್ಟ್‌ ಆಗಿ ಹೊಂದಿದ್ದು, ಈ ಆಪ್‌ ಬಳಕೆದಾರರಿಗೆ ಚಾರ್ಚಿಂಗ್ ಪರಿಸ್ಥಿತಿಯನ್ನು ಪ್ರದರ್ಶಿಸುತ್ತದೆ. ಭವಿಷ್ಯದಲ್ಲಿ ಚಾರ್ಜ್‌ಲೆಸ್‌ ಸ್ಮಾರ್ಟ್‌ಫೋನ್‌ ಆಸಕ್ತರಿಗೆ ಈ ಡಿವೈಸ್ ಖರೀದಿಗೆ ಲಭ್ಯವಿರುತ್ತದೆ ಎನ್ನಬಹುದು.

ಗಿಜ್‌ಬಾಟ್‌

ಗಿಜ್‌ಬಾಟ್‌

Best Mobiles in India

English summary
Kyocera phone uses 'solar panels' in the screen to charge the handset using sunlight. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+