Home
ಮೊಬೈಲ್

ಸ್ಮಾರ್ಟ್‌ಫೋನ್‌ ನಿಮಗೆ ಮೊಡವೆಗಳ ಕೊಡುಗೆ ನೀಡಬಹುದು?: ತಡೆಯುವುದು ಹೇಗೆ?

ಸ್ಮಾರ್ಟ್‌ಫೋನ್‌ಗಳು ಇಂದು ನಮ್ಮ ದೈನಂದಿನ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಮೂಲಕ ಎಲ್ಲಾ ರೀತಿಯಲ್ಲಿ ಬಳಕೆದಾರರಿಗೆ ಹಲವು ರೀತಿಯಲ್ಲಿ ಸೌಲಭ್ಯ ಕಲ್ಪಿಸಿಕೊಡುತ್ತದೆ. ಅದರಂತೆ ಈ ಸ್ಮಾರ್ಟ್‌ಫೋನ್‌ ಅನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಕೆಲವು ಅಡ್ಡ ಪರಿಣಾಮ ಸಹ ಎದುರಿಸಬೇಕಾಗುತ್ತದೆ. ತಜ್ಞರ ಪ್ರಕಾರ ಸ್ಮಾರ್ಟ್‌ಫೋನ್‌ಗಳು ನಿಮ್ಮ ಮುಖದ ಅಂದ ಹಾಳುಮಾಡುತ್ತವಂತೆ.

ಹೌದು, ಸಾಮಾನ್ಯವಾಗಿ ಯುವ ಸಮೂಹ ತಮ್ಮ ಮುಖದ ಸೌಂದರ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಇದರೊಂದಿಗೆ ಸ್ಮಾರ್ಟ್‌ಫೋನ್‌ನಲ್ಲಿ ವಿವಿಧ ವಿಚಾರಗಳನ್ನು ತಿಳಿದುಕೊಂಡು ತಮ್ಮ ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳಲು ಯತ್ನಿಸುತ್ತಾರೆ. ಆದರೆ, ಅದೇ ಸ್ಮಾರ್ಟ್‌ಫೋನ್‌ ನಿಮ್ಮ ಮುಖದ ಅಂದವನ್ನು ಹಾಳು ಮಾಡುತ್ತದೆ ಎಂದು ನಿಮಗೆ ಗೊತ್ತಿದೆಯಾ?. ಹಾಗಿದ್ರೆ ಹೇಗೆಲ್ಲಾ ಮುಖದ ಕಾಂತಿಯನ್ನು ಸ್ಮಾರ್ಟ್‌ಫೋನ್‌ ಕಡಿಮೆ ಮಾಡುತ್ತದೆ ಎಂದು ತಿಳಿಸಿಕೊಟ್ಟಿದ್ದೇವೆ ಓದಿರಿ.

ಸ್ಮಾರ್ಟ್‌ಫೋನ್‌ ನಿಮಗೆ ಮೊಡವೆಗಳ ಕೊಡುಗೆ ನೀಡಬಹುದು?: ತಡೆಯುವುದು ಹೇಗೆ?

ಸ್ಮಾರ್ಟ್‌ಫೋನ್‌ ಬಳಕೆ ಮಾಡುವುದರಿಂದ ಮೊಡವೆ: ಈ ವಿಷಯ ಕೇಳಿದ್ರೆ ಬಹುಪಾಲು ಮಂದಿಗೆ ಅಚ್ಚರಿ ಆಗಬಹುದು. ತಜ್ಞರ ಪ್ರಕಾರ ಸ್ಮಾರ್ಟ್‌ಫೋನ್‌ಗಳು ಮೊಡವೆಗಳಿಗೆ ಕಾರಣವಾಗುತ್ತವೆ. ಜೊತೆಗೆ ದೀರ್ಘಾವಧಿ ಚರ್ಮ ಸಮಸ್ಯೆಯನ್ನೂ ಸಹ ನಿರ್ಮಾಣ ಮಾಡುತ್ತವೆ ಎನ್ನಲಾಗಿದೆ. ಈ ವಿಷಯ ಕೇಳಿ ಶಾಕ್ ಆಗಬೇಡಿ. ಯಾಕೆಂದರೆ ಈ ರೀತಿಯ ಸಮಸ್ಯೆಯಿಂದ ಸುಲಭವಾಗಿ ಪಾರಾಗಲು ನಾವು ಇಲ್ಲಿ ಕೆಲವೊಂದಿಷ್ಟು ಸಲಹೆ ನೀಡಿದ್ದೇವೆ ಗಮನಿಸಿ.

ಇದು ಹೇಗೆ ಸಂಭವಿಸುತ್ತದೆ?: ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನಿಮ್ಮ ಮುಖದ ವಿರುದ್ಧ ಹಿಡಿದಿಟ್ಟುಕೊಳ್ಳುವಾಗ, ಶಾಖ ಮತ್ತು ಒತ್ತಡವು ನಿಮ್ಮ ಚರ್ಮದಲ್ಲಿ ಹೆಚ್ಚು ಎಣ್ಣೆಯನ್ನು ಉತ್ಪಾದಿಸಲು ಕಾರಣವಾಗಬಹುದು. ಈ ರೀತಿ ಆಗುವುದರಿಂದ ಇದು ರಂಧ್ರಗಳನ್ನು ಮುಚ್ಚಿ ಮೊಡವೆಗಳಿಗೆ ಕಾರಣವಾಗಬಹುದು. ಅದರಲ್ಲೂ ಪ್ರಮುಖ ವಿಷಯ ಏನೆಂದರೆ ಸ್ಮಾರ್ಟ್‌ಫೋನ್‌ನ ಮೇಲ್ಮೈ ಭಾಗದಲ್ಲಿ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಾಣು ಸಂಗ್ರಹ ಆಗಿರುತ್ತವೆ. ಇವು ಸುಲಭವಾಗಿ ನಿಮ್ಮ ಮುಖಕ್ಕೆ ವರ್ಗಾವಣೆ ಆಗುತ್ತವೆ.

ಫೋನ್‌ನಲ್ಲಿ ಮಾತನಾಡುವಾಗ ಫೋನ್ ಅನ್ನು ಮುಖದ ಹತ್ತಿರ ಇರಿಸಿಕೊಳ್ಳುವುದು: ಇನ್ನು ಸ್ಮಾರ್ಟ್‌ಫೋನ್‌ ಅನ್ನು ಕರೆ ಸಂದರ್ಭದಲ್ಲಿ ಬಳಕೆ ಮಾಡುವಾಗ ಮುಖದ ಹಾಗೂ ಕಿವಿಗೆ ಹತ್ತಿರ ಹಿಡಿಯುವುದರಿಂದ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಾಣುಗಳು ನಿಮ್ಮ ಕೆನ್ನೆ ಹಾಗೂ ಗಡ್ಡಕ್ಕೆ ಸುಲಭ ಪ್ರವೇಶ ಪಡೆದುಕೊಳ್ಳಲಿದ್ದು, ಈ ಮೂಲಕ ನಿಮ್ಮ ಮುಖದಲ್ಲಿ ಮೊಡವೆ ಹೆಚ್ಚಾಗಲು ಕಾರಣವಾಗುತ್ತದೆ.

ಸ್ಮಾರ್ಟ್‌ಫೋನ್‌ ನಿಮಗೆ ಮೊಡವೆಗಳ ಕೊಡುಗೆ ನೀಡಬಹುದು?: ತಡೆಯುವುದು ಹೇಗೆ?

ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ವಿಷಯ ಏನೆಂದರೆ ಸ್ಮಾರ್ಟ್‌ಫೋನ್‌ಗಳು ನೇರವಾಗಿ ಮೊಡವೆಗಳಿಗೆ ಕಾರಣವಾಗದಿದ್ದರೂ ಅವು ಖಂಡಿತವಾಗಿಯೂ ಮೊಡವೆಗಳ ಬೆಳವಣಿಗೆಗೆ ಕೊಡುಗೆ ನೀಡುತ್ತವೆ. ಹೀಗಾಗಿ ಕೆಲವು ಸರಳ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ, ಸ್ಮಾರ್ಟ್ಫೋನ್ ಬಳಕೆದಾರರು ತಮ್ಮ ಚರ್ಮವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿರಿಸಿಕೊಳ್ಳಲು ಸಹಾಯ ಮಾಡಬಹುದು.

ಸ್ಮಾರ್ಟ್‌ಫೋನ್‌ ಶೌಚಾಲಕ್ಕೆ ತೆಗೆದುಕೊಂಡು ಹೋಗಬೇಡಿ: ನಿಮ್ಮ ಮುಖ ಅಂದವಾಗಿರಬೇಕು ಎಂದರೆ ನಿಮ್ಮ ಸ್ಮಾರ್ಟ್‌ಫೋನ್‌ನ ಅಂದ ಸಹ ಹೆಚ್ಚಾಗಿರಬೇಕು. ಇದಕ್ಕಾಗಿ ನೀವು ನಿಯಮಿತವಾಗಿ ಆಂಟಿಬ್ಯಾಕ್ಟೀರಿಯಲ್ ವೈಪ್‌ಗಳು ಅಥವಾ ಶೇಕಡಾ 70 ರಷ್ಟು ಆಲ್ಕೋಹಾಲ್ ಹೊಂದಿರುವ ಬಟ್ಟೆಯಿಂದ ಫೋನ್ ಅನ್ನು ಒರೆಸಿ. ಹಾಗೆಯೇ ನಿಮ್ಮ ಫೋನ್ ಅನ್ನು ರೆಸ್ಟ್ ರೂಂಗೆ ತೆಗೆದುಕೊಂಡು ಹೋಗುವುದನ್ನು ತಪ್ಪಿಸಿ.

ಹೆಡ್‌ಫೋನ್ ಬಳಕೆ ಮಾಡಿ: ಕರೆ ಸಂದರ್ಭದಲ್ಲಿ ಅಥವಾ ವಿಡಿಯೋ ವೀಕ್ಷಣೆ ಮಾಡುವ ಸಂದರ್ಭದಲ್ಲಿ ಹೆಡ್‌ಫೋನ್‌ಗಳು ಅಥವಾ ಸ್ಪೀಕರ್‌ಫೋನ್‌ಗಳನ್ನು ಬಳಕೆ ಮಾಡಿದರೆ ಇನ್ನೂ ಒಳಿತು. ಯಾಕೆಂದರೆ ನಿಮ್ಮ ಫೋನ್‌ ಅನ್ನು ಕಿವಿಗೆ ಹಾಗೂ ಕೆನ್ನೆಗೆ ತಾಗಿಸುವುದರಿಂದ ಮೊಡವೆಗಳು ಮೂಡಲು ಕಾರಣವಾಗುತ್ತದೆ. ಇದರೊಂದಿಗೆ ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯಿರಿ ಮತ್ತು ನಿಮ್ಮ ಫೋನ್ ಅಥವಾ ನಿಮ್ಮ ಮುಖವನ್ನು ಕೊಳಕು ಕೈಗಳಿಂದ ಸ್ಪರ್ಶಿಸಬೇಡಿ.

ಸ್ಮಾರ್ಟ್‌ಫೋನ್‌ ನಿಮಗೆ ಮೊಡವೆಗಳ ಕೊಡುಗೆ ನೀಡಬಹುದು?: ತಡೆಯುವುದು ಹೇಗೆ?

ವಿರಾಮ ನೀಡಿ: ಇದೆಲ್ಲಕ್ಕೂ ಮಿಗಿಲಾಗಿ ಫೋನ್‌ ಅನ್ನು ನಿರಂತರವಾಗಿ ಬಳಕೆ ಮಾಡಬೇಡಿ ಬದಲಾಗಿ ಅದಕ್ಕೆ ಸ್ವಲ್ಪ ವಿರಾಮ ಕೊಟ್ಟು ನೀವು ಅದರಿಂದ ಮುಕ್ತರಾಗಿ. ಇದರಿಂದಾಗಿ ನಿಮ್ಮ ಚರ್ಮದ ಮೇಲಿನ ಶಾಖ ಮತ್ತು ಒತ್ತಡದ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಆಗುತ್ತದೆ. ಈ ಎಲ್ಲಾ ಸಲಹೆಗಳು ಸಾಮಾನ್ಯ ಸಲಹೆಗಳಾಗಿದ್ದು, ಅದಾಗ್ಯೂ ನಿಮ್ಮ ಮುಖದಲ್ಲಿ ಹೆಚ್ಚಿನ ಮೊಡವೆಗಳಿದ್ದರೆ ಅಥವಾ ಮುಖದಲ್ಲಿ ಏನಾದರೂ ಇತರೆ ಸಮಸ್ಯೆ ಕಂಡುಬಂದರೆ ತಕ್ಷಣ ವೈದ್ಯರ ಬಳಿ ಹೋಗಿ.

Best Mobiles in India

English summary
According to experts, smartphones cause acne. It is also said to cause long-term skin problems. Thus, how to be careful from these has been informed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+