ಮತ್ತೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ HTC!.ಹೊಸ ಸ್ಮಾರ್ಟ್‌ಫೋನ್‌ ಮಾಹಿತಿ ಲೀಕ್!

|

ಡಿಸೈರ ಶ್ರೇಣಿಯಲ್ಲಿ ಹಲವು ವಿಶೇಷ ಸ್ಮಾರ್ಟ್‌ಪೋನ್‌ಗಳನ್ನು ಪರಿಚಯಿಸಿದ್ದ ಎಚ್‌ಟಿಸಿ ಸ್ಮಾರ್ಟ್‌ಪೋನ್‌ ಕಂಪನಿಯನ್ನು ಸ್ಮಾರ್ಟ್‌ಪೋನ್‌ ಪ್ರಿಯರಂತು ಮರೆತಿರುವುದಿಲ್ಲ. ಸ್ಮಾರ್ಟ್‌ಫೋನ್‌ ತಯಾರಿಕೆಯಿಂದ ದೂರಾಗಿದ್ದ ಎಚ್‌ಟಿಸಿ ಕಂಪನಿ ಮತ್ತೆ ಫ್ಲ್ಯಾಗ್‌ಶಿಪ್ ಮತ್ತು ಮಿಡ್‌ರೇಂಜಿನ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವುದಾಗಿ ಕಳೆದ ಡಿಸೆಂಬರನಲ್ಲಿ ಘೋಷಿಸಿತ್ತು. ಅದಕ್ಕಿಗ ಕಾಲ ಕೂಡಿಬಂದಿದ್ದು, ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡುವ ಸೂಚನೆ ಹೊರಹಾಕಿದೆ.

ಮತ್ತೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ HTC!.ಹೊಸ ಸ್ಮಾರ್ಟ್‌ಫೋನ್‌ ಮಾಹಿತಿ ಲೀಕ್!

ಹೌದು, ಎಚ್‌ಟಿಸಿ ಕಂಪನಿಯು ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಮುಂದಾಗಿದ್ದು, ಈ ಮೂಲಕ ಮತ್ತೆ ಸ್ಮಾರ್ಟ್‌ಫೋನ್‌ ಕ್ಷೇತ್ರಕ್ಕೆ ಎಂಟ್ರಿ ಕೊಡಲಿದೆ ಎನ್ನಲಾಗುತ್ತಿದೆ. ಕಂಪನಿಯ ಹೊಸ ಸ್ಮಾರ್ಟ್‌ಫೋನ್‌ಗಳು ಫ್ಲ್ಯಾಗ್‌ಶಿಪ್‌ ಮತ್ತು ಮಿಡ್‌ರೇಂಜ್‌ ಮಾದರಿಯಲ್ಲಿರಲಿದ್ದು, ಪ್ರಸ್ತುತ ಚಾಲ್ತಿ ಇರುವ ಎಲ್ಲ ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎನ್ನುತ್ತಿವೆ ಲೀಕ್ ಮಾಹಿತಿಗಳು.

ಮತ್ತೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ HTC!.ಹೊಸ ಸ್ಮಾರ್ಟ್‌ಫೋನ್‌ ಮಾಹಿತಿ ಲೀಕ್!

ತೈವಾನ ಮೂಲದ ಎಚ್‌ಟಿಸಿ ಕಂಪನಿಯು ತನ್ನ ಹೊಸ ಸ್ಮಾರ್ಟ್‌ಫೋನ್‌ ವೇಗದ ಕಾರ್ಯನಿರ್ವಹಣೆಗೆ ಹೆಚ್ಚಿನ ಗಮನ ನೀಡಿದ್ದು, ಅದಕ್ಕಾಗಿ ಕ್ವಾಲ್ಕಮ್ ಚಿಪ್‌ಸೆಟ್‌ ಅನ್ನು ಒದಗಿಸಿರುವ ಜೊತೆಗೆ ಸ್ನ್ಯಾಪ್‌ಡ್ರಾಗನ್ 710 SoC ಪ್ರೊಸೆಸರ್ ಸಾಮರ್ಥ್ಯದವನ್ನು ಅಳವಡಿಸಲಾಗಿದೆ ಎಂದು ಹೇಳಲಾಗುತ್ತದೆ. ಆದರೆ ಕಂಪನಿಯು ಸ್ಮಾರ್ಟ್‌ಫೋನ್‌ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಹೊರಹಾಕಿಲ್ಲ.

ಮತ್ತೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ HTC!.ಹೊಸ ಸ್ಮಾರ್ಟ್‌ಫೋನ್‌ ಮಾಹಿತಿ ಲೀಕ್!

ಮಾರುಕಟ್ಟೆಯಲ್ಲಿ ಪ್ರಮುಖ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಪೈಪೋಟಿ ಜೋರಾಗಿದ್ದು, ಎಚ್‌ಟಿಸಿ ಸಂಸ್ಥೆಯು ಇದೀಗ ಸೇರಿಕೊಂಡಿದೆ. ತನ್ನ ಹೊಸ ಸ್ಮಾರ್ಟ್‌ಪೋನಿನಲ್ಲಿ 6GB RAM ಸಾಮರ್ಥ್ಯವನ್ನು ಒದಗಿಸಲಿದ್ದು, ಹೀಗಾಗಿ ಸ್ಮಾರ್ಟ್‌ಫೋನ್‌ ಮಲ್ಟಿಟಾಸ್ಕ್ ಕೆಲಸಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಬಲ್ಲ ಶಕ್ತಿಯನ್ನು ಹೊಂದಿರಲಿದೆ. ಅಧಿಕ ಸಾಮರ್ಥ್ಯ RAM ಸ್ಮಾರ್ಟ್‌ಫೋನ್‌ಗಳು ಹ್ಯಾಂಗ್‌ ಆಗುವುದನ್ನು ತಡೆಯುತ್ತವೆ.

ಪ್ರಸ್ತುತ ಇತರೆ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ 'ಆಂಡ್ರಾಯ್ಡ್‌ 9 ಪೈ' ಆಪರೇಟಿಂಗ್ ಸಿಸ್ಟಮ್ ಎಚ್‌ಟಿಸಿಯ ಹೊಸ ಸ್ಮಾರ್ಟ್‌ಫೋನಿನಲ್ಲಿ ಇರಲಿದ್ದು, ಸ್ಮಾರ್ಟ್‌ಫೋನ್‌ ಕಾರ್ಯ ಅತ್ಯುತ್ತಮವಾಗಿ ನಡೆಯಲಿದೆ. ಇತ್ತಿಚೀಗೆ ಕಂಪನಿಯು ಎಚ್‌ಟಿಸಿ ಯು11, ಎಚ್‌ಟಿಸಿ ಯು11+ ಮತ್ತು ಎಚ್‌ಟಿಸಿ ಯು12+ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಯು ಪರಿಚಯಿಸಿದ್ದು, ಇದೀಗ ಹೊಸ ಸ್ಮಾರ್ಟ್‌ಫೋನ್‌ ಮೂಲಕ ಮತ್ತೆ ಗ್ರಾಹಕರನ್ನು ಸೆಳೆಯಲು ಮಾರುಕಟ್ಟೆಗೆ ಬರಲಿದೆ.

Most Read Articles
Best Mobiles in India

English summary
New HTC mid-ranger stops by Geekbench with Snapdragon 710, 6GB of RAM.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X