ಹೊಸ ನೋಕಿಯಾ ಫೋನ್‌: 23MP ಹಿಂಭಾಗ ಕ್ಯಾಮೆರಾ, ಬಟನ್‌ಲೆಸ್ ಫೀಚರ್..!

Written By:

ಅಂತು ಇಂತೂ ಬಂತೂ ಹೊಸ ನೋಕಿಯಾ ಸ್ಮಾರ್ಟ್‌ಫೋನ್‌. ಸ್ವಲ್ಪ ಕರೆಕ್ಷನ್ ಏನಂದ್ರೆ ಫೋನ್ ಬಂದಿರುವುದು ಇಂಟರ್ನೆಟ್'ನಲ್ಲಿ ಮಾತ್ರ. ಹೊಸ ನೋಕಿಯಾ ಫೋನ್‌ ಪರಿಕಲ್ಪನೆ ಈಗ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಫೋನ್ ಎಡ್ಜ್‌ ಟು ಎಡ್ಜ್‌ ಡಿಸ್‌ಪ್ಲೇ ಅನ್ನು ಸೆಕೆಂಡರಿ ಡಿಸ್‌ಪ್ಲೇ ಜೊತೆಗೆ ಹೊಂದಲಿದೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಈ ಪರಿಕಲ್ಪನೆಯನ್ನು ಪ್ರಖ್ಯಾತ ವಿನ್ಯಾಸಗಾರ 'ಮೈಕೆಲ್ ಮುಲೆಬಾ'ರವರು ನೀಡಿದ್ದು, ಈ ಹಿಂದಿನ ನೋಕಿಯಾ ಫೋನ್‌ಗೂ ಇವರೇ ವಿನ್ಯಾಸ ರಚಿಸಿದ್ದರು. ಆದರೆ ಇದು ಅಧಿಕೃತವಾಗಿ ಹೊರಹೊಮ್ಮಿರಲಿಲ್ಲ.

ಹೊಸ ನೋಕಿಯಾ ಫೋನ್‌: 23MP ಹಿಂಭಾಗ ಕ್ಯಾಮೆರಾ, ಬಟನ್‌ಲೆಸ್ ಫೀಚರ್..!

ಹೊಸ ನೋಕಿಯಾ ಫೋನ್‌(Nokia phones) ಪರಿಕಲ್ಪನೆ ಹೆಚ್ಚು ವಾಸ್ತವಿಕವಾಗಿದ್ದು, ಬಹುಬೇಗ ರಿಯಲ್‌ ಲೈಪ್‌ನಲ್ಲಿ ನೋಡಬಹುದು. ಹೊಸ ನೋಕಿಯಾ ಫೋನ್‌ ಪರಿಕಲ್ಪನೆ ಹೇಗಿದೆ ಎಂದು ಮುಂದೆ ಓದಿ ತಿಳಿಯಿರಿ.

999 ರೂಪಾಯಿಗೆ ನೋಕಿಯಾ ಮೊಬೈಲ್‌ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಟನ್‌ಲೆಸ್‌ ಫೋನ್‌

ಬಟನ್‌ಲೆಸ್‌ ಫೋನ್‌

ಹೊಸ ನೋಕಿಯಾ ಫೋನ್‌ ಫೋಟೋ ನೋಡಿದರೆ, ಡಿವೈಸ್ ಸಂಪೂರ್ಣ ಬಟನ್‌ಲೆಸ್ ಸ್ಮಾರ್ಟ್‌ಫೋನ್ ಆಗಿದ್ದು, ಎಲ್ಲವೂ ಡಿಸ್‌ಪ್ಲೇ ಇಂದಲೇ ನಿಯಂತ್ರಣ ಹೊಂದಬಹುದು. ಅಲ್ಲದೇ ಸೌಂಡ್ ಹೆಚ್ಚಿಸುವ ಕೀಗಳು ಇಲ್ಲದಿರುವುದರಿಂದ, ಸ್ಮಾರ್ಟ್‌ಫೋನ್‌ ಪ್ರಿಯರನ್ನು ಸಂಶಯಕ್ಕೆ ಒಳಪಡಿಸಿದೆ. ಹೌದು, ಅಲ್ವಾ ಸೌಂಡ್ ಬಟನ್‌ ಇಲ್ಲದೇ ಸೌಂಡ್ ನಿಯಂತ್ರಣ ತಾನೆ ಹೇಗೆ?

ಎಡ್ಜ್ ಟು ಎಡ್ಜ್ ಡಿಸ್‌ಪ್ಲೇ

ಎಡ್ಜ್ ಟು ಎಡ್ಜ್ ಡಿಸ್‌ಪ್ಲೇ

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನಿಧಾನವಾಗಿ ಎಡ್ಜ್‌ ಟು ಎಡ್ಜ್ ಡಿಸ್‌ಪ್ಲೇ ವಿನ್ಯಾಸ ಹೆಚ್ಚಾಗುತ್ತಲೇ ಇದೆ. ಅಂತೆಯೇ ಈಗ ಹೊಸ ನೋಕಿಯಾ ಸ್ಮಾರ್ಟ್‌ಫೋನ್‌ ಪರಿಕಲ್ಪನೆಯಲ್ಲಿ ಎಡ್ಜ್‌ ಟು ಎಡ್ಜ್‌ ಡಿಸ್‌ಪ್ಲೇ ಇದ್ದು, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌7 ಎಡ್ಜ್‌ ಮತ್ತು ನೋಟ್‌ 7 ಸಹ ಎಡ್ಜ್‌ ಟು ಎಡ್ಜ್ ಡಿಸ್‌ಪ್ಲೇ ಹೊಂದಿವೆ. ಅಲ್ಲದೇ ನೋಕಿಯಾ ಸ್ಮಾರ್ಟ್‌ಫೋನ್ ಪರಿಕಲ್ಪನೆಯ ಪೋಟೋಗಳಲ್ಲಿ ಸ್ಯಾಮ್‌ಸಂಗ್ ಟಚ್ ನೀಡಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೆಕೆಂಡರಿ ಡಿಸ್‌ಪ್ಲೇ

ಸೆಕೆಂಡರಿ ಡಿಸ್‌ಪ್ಲೇ

ಪ್ರಾಥಮಿಕ ಸ್ಕ್ರೀನ್‌ನ ಮೇಲ್ಭಾಗದಲ್ಲಿ ನೋಕಿಯಾ ಫೋನ್ ಸೆಕೆಂಡರಿ ಡಿಸ್‌ಪ್ಲೇ ವಿನ್ಯಾಸ ಹೊಂದಲಿದೆ. ಸೆಕೆಂಡರಿ ಸ್ಕ್ರೀನ್ 3.5mm ಹೆಡ್‌ಫೋನ್‌ ಜಾಕ್‌ ಹತ್ತಿರದಲ್ಲಿ ಇದೆ. ಈ ಸ್ಕ್ರೀನ್ ಟೆಕ್ಸ್ಟ್‌ ನೋಟಿಫಿಕೇಶನ್, ಮೀಡಿಯಾ ಪ್ಲೇಬ್ಯಾಕ್ UI, ವರ್ಚುವಲ್ ವ್ಯಾಲ್ಯೂಮ್ ನಿಯಂತ್ರಣ ಪ್ರದರ್ಶನವಾಗುತ್ತದೆ.

23MP ಹಿಂಭಾಗ ಕ್ಯಾಮೆರಾ

23MP ಹಿಂಭಾಗ ಕ್ಯಾಮೆರಾ

ನೋಕಿಯಾ ಸ್ಮಾರ್ಟ್‌ಫೋನ್ 23MP ಹಿಂಭಾಗ ಕ್ಯಾಮೆರಾ ಫೀಚರ್ ಹೊಂದಲಿದ್ದು, ಪ್ರಖ್ಯಾತ ಕಾರ್ಲ್ ಝೈಸ್ ತಂತ್ರಜ್ಞಾನ ಬಳಸಿಕೊಳ್ಳಲಿದೆ. ಇ ಹಿಂದಿನ ನೋಕಿಯಾ ಫೋನ್‌ನಲ್ಲಿ ಈ ತಂತ್ರಜ್ಞಾನ ನೋಡಿರಬಹುದು.

ಐರಿಸ್ ಸ್ಕ್ಯಾನರ್ ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್?

ಐರಿಸ್ ಸ್ಕ್ಯಾನರ್ ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್?

ಹೊಸ ಪರಿಕಲ್ಪನೆಯ ಪ್ರಕಾರ ನೋಕಿಯಾ ಸ್ಮಾರ್ಟ್‌ಫೋನ್ ಐರಿಸ್ ಸ್ಕ್ಯಾನರ್ ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್ ಎರಡು ಫೀಚರ್ ಅನ್ನು ಹೊಂದಲಿದೆ. ಫಿಂಗರ್ ಪ್ರಿಂಟ್ ಸೆನ್ಸಾರ್ ಹಿಂಭಾಗ ಕ್ಯಾಮೆರಾದ ಕೆಳಗೆ ನಿರ್ಮಾಣವಾಗಲಿದೆ. ಐರಿಸ್ ಸ್ಕ್ಯಾನರ್ ಮುಂಭಾಗ ಡಿಸ್‌ಪ್ಲೇನಲ್ಲಿ ವ್ಯವಸ್ಥೆ ಹೊಂದಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
New Nokia Phone Concept Hits the Web and it’s Absolutely Gorgeous. Another day, another concept phone about Nokia phones. This time with an edge-to-edge screen and secondary display. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot