155223ನಂಬರ್‌ಗೆ ಕಾಲ್‌ ಮಾಡಿ ಅನಗತ್ಯ ಸೇವೆ ಬಂದ್‌ ಮಾಡಿ

Posted By:

ನೀವು ಅನಗತ್ಯ ಕಾಲರ್‌ಟ್ಯೂನ್‌,ಮೊಬೈಲ್‌ ಇಂಟರ್‌ ನೆಟ್‌ ಆಕ್ಟಿವೇಷನ್‌ ಆಗಿ ತೊಂದರೆ ಅನುಭವಿಸಿದ್ದೀರಾ ? ಮೊಬೈಲ್‌ ಕಂಪೆನಿಗಳ ಗ್ರಾಹಕರ ಸೇವೆಗೆ ಕರೆ ಮಾಡಿ ನೀವು ಜಗಳಮಾಡಿಕೊಂಡಿದ್ದೀರಾ..? ಹಾಗಾದ್ರೆ ನಿಮಗೆಲ್ಲಾ ಇಲ್ಲಿ ಒಂದು ಗುಡ್‌ ನ್ಯೂಸ್‌ ಇದೆ. ಇನ್ನು ಮುಂದೆ ನಿಮ್ಮ ಅನುಮತಿಯಿಲ್ಲದೇ ಚಾಲು ಆಗುವಂತಹ ಎಲ್ಲಾ ಸೇವೆಗಳನ್ನು ಬಂದ್‌ ಮಾಡಲು ಒಂದು ನಂಬರ್‌ ಬಂದಿದೆ. ನೀವು ಮೊಬೈಲ್‌ನಿಂದ 155223 ನಂಬರ್‌ಗೆ ಕಾಲ್‌ ಮಾಡಿದ್ರೆ ಆಯ್ತು. ಈ ಸೇವಾ ಪೀಡೆಗಳು ದೂರವಾಗುತ್ತದೆ.

ಅಷ್ಟೇ ಅಲ್ಲದೇ ಅನಗತ್ಯವಾಗಿ ಗ್ರಾಹಕರ ಅನುಮತಿ ಇಲ್ಲದೇ ಈ ಸೇವೆ ಆಕ್ಟಿವೇಶನ್‌ ಆದ 24 ಗಂಟೆಯೊಳಗೆ ಈ ನಂಬರ್‌ಗೆ ಕರೆ ಮಾಡಿ ದೂರು ನೀಡಿದ್ರೆ, ಆ ಸೇವೆಗೆ ಗ್ರಾಹಕ ಕಳೆದುಕೊಂಡ ಹಣವನ್ನು ಕಂಪೆನಿ ಈಗ ನೀಡಬೇಕಿದೆ.

155223ನಂಬರ್‌ಗೆ ಕಾಲ್‌ ಮಾಡಿ ಅನಗತ್ಯ ಸೇವೆ ಬಂದ್‌ ಮಾಡಿ

ದೂರಸಂಪರ್ಕ ನಿಯಂತ್ರಣ ವ್ಯವಸ್ಥೆ ಟ್ರಾಯ್‌(Telecom Regulatory Authority of India) ಬಿಗು ನಿಲುವಿನಿಂದಾಗಿ ಸೇವಾದಾರ ಕಂಪೆನಿಗಳು ಜತೆಯಾಗಿ ಈ ನಂಬರನ್ನು ರೂಪಿಸಿ ಕಾರ್ಯಗತಗೊಳಿಸಿಗೊಂಡಿವೆ. ಫೆ. 2ರೊಳಗೆ ಗ್ರಾಹಕರನ್ನು ಶೋಷಿಸುವ ಇಂತಹ ಪ್ರಕರಣಗಳಗಳ ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಟ್ರಾಯ್‌ ಎಲ್ಲಾ ಮೊಬೈಲ್‌ ಸೇವಾದರ ಸಂಸ್ಥೆಗಳಿಗೆ ಆದೇಶಿಸಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ಫೆ. 1ರಿಂದ ಎಲ್ಲಾ ಮೊಬೈಲ್‌ ಕಂಪೆನಿಗಳು ಈ ಸೇವೆಯನ್ನು ಆರಂಭಿಸಿದೆ.


ಅನಗತ್ಯ ಸೇವೆ ಆರಂಭಗೊಂಡ 24ಗಂಟೆಯ ನಂತರ ಸಹ ನೀವು ಈ ನಂಬರ್‌ಗೆ ಕರೆ ಮಾಡಿ ಸೇವೆಯನ್ನು ನಿಲ್ಲಿಸಲು ಹೇಳಬಹುದು. ಆದರೆ ಗ್ರಾಹಕರು ಈ ಹಣವನ್ನು ಕೇಳುವಂತಿಲ್ಲ ಎಂದು ಟ್ರಾಯ್‌ ಹೇಳಿದೆ.

ಮೌಲ್ಯವರ್ಧಿತ ಸೇವೆಗಳ ಹೆಸರಿನಲ್ಲಿ ಗ್ರಾಹಕರನ್ನು ಶೋಷಿಸುವ ಸಮಸ್ಯೆಗೆ ಒಂದು ಸರಳ ಮತ್ತು ಸುಲಭ ಪರಿಹಾರವನ್ನು ಕಂಡುಕೊಳ್ಳಲಾಗಿದ್ದು, ಫೆ.1ರಿಂದ ಈ ತಂತ್ರ ಜಾರಿಗೆ ಬಂದಿದೆ ಎಂದು ಟ್ರಾಯ್‌ ಅಧ್ಯಕ್ಷ ರಾಹುಲ್‌ ಖುಲ್ಲರ್‌ ಹೇಳಿದ್ದಾರೆ.

ಇದನ್ನೂ ಓದಿ : ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗೆ ಮತ್ತೆ ಅಗ್ರಪಟ್ಟ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot