Subscribe to Gizbot

ಗೂಗಲ್‌ ನೆಕ್ಸಸ್‌ ಟ್ಯಾಬ್ಲೆಟ್‌ ಬೆಲೆ ದಿಢೀರ್‌ ಇಳಿಕೆ

Posted By:

ಗೂಗಲ್‌ ತನ್ನ 15ವರ್ಷದ ಹುಟ್ಟುಹಬ್ಬದಂದು ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಕಳೆದ ವರ್ಷ‌ ಬಿಡುಗಡೆಯಾದ ನೆಕ್ಸಸ್‌ 7 ಟ್ಯಾಬ್ಲೆಟ್‌ ಬೆಲೆಯನ್ನು ದಿಢೀರ್‌ ಇಳಿಕೆ ಮಾಡಿದೆ.ಆನ್‌ಲೈನ್‌ ಶಾಪಿಂಗ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಟ್ಯಾಬ್ಲೆಟ್‌ ಲಭ್ಯವಿದ್ದು ಗ್ರಾಹಕರು ಖರೀದಿಸಬಹುದಾಗಿದೆ.

16GB ಆಂತರಿಕ ಮೆಮೋರಿ ಹೊಂದಿರುವ ನೆಕ್ಸಸ್‌ ಟ್ಯಾಬ್ಲೆಟ್‌ಗೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 15,999 ರೂ ನಿಗದಿಯಾಗಿದ್ದರೆ, ಫ್ಲಿಪ್‌ಕಾರ್ಟ್‌‌ನಲ್ಲಿ ಅದೇ ಟ್ಯಾಬ್ಲೆಟ್‌ಗೆ 9,999 ಬೆಲೆ ನಿಗದಿಯಾಗಿದೆ. ಇನ್ನೂ 32 GB ಆಂತರಿಕ ಮೆಮೋರಿ ಹೊಂದಿರುವ ಟ್ಯಾಬ್ಲೆಟ್‌ಗೆ ಪ್ಲೇ ಸ್ಟೋರ್‌ನಲ್ಲಿ18,999 ಬೆಲೆ ನಿಗಿದಿಯಾಗಿದ್ದರೆ ಫ್ಲಿಪ್‌ಕಾರ್ಟ್‌ನಲ್ಲಿ ಆ ಟ್ಯಾಬ್ಲೆಟ್‌ಗೆ 13,499 ರೂ ಬೆಲೆ ನಿಗದಿಯಾಗಿದೆ. ಹೀಗಾಗಿ ಈ ಎರಡು ಟ್ಯಾಬ್ಲೆಟ್‌ಗಳು ಜೆಲ್ಲಿ ಬೀನ್‌ 4.2 ಓಎಸ್‌ ಹೊಂದಿದ್ದರೂ ಹೊಸ 4.3 ಓಎಸ್‌ಗೆ ಆಪ್‌ಡೇಟ್‌ ಮಾಡಬಹುದಾಗಿದೆ.

ಗೂಗಲ್‌ ನೆಕ್ಸಸ್‌ ಟ್ಯಾಬ್ಲೆಟ್‌ ಬೆಲೆ ದಿಢೀರ್‌ ಇಳಿಕೆ

ಗೂಗಲ್‌ ಈ ಟ್ಯಾಬ್ಲೆಟ್‌ ಬೆಲೆಯನ್ನು ಯಾಕೆ ಕಡಿಮೆ ಮಾಡಿದೆ ಎನ್ನುವುದರ ಬಗ್ಗೆ ಇದುವರೆಗೂ ಎಲ್ಲಿಯೂ ಮಾಹಿತಿ ಲಭ್ಯವಿಲ್ಲ. ಗೂಗಲ್‌ ಜೆಲ್ಲಿ ಬೀನ್ ಆಪ್‌ಡೇಟ್‌ ಓಎಸ್‌ 4.3ಯನ್ನು ಇದೇ ಜುಲೈನಲ್ಲಿ ಬಿಡುಗಡೆ ಮಾಡಿತ್ತು. ಈ ಓಎಸ್‌ ಬಿಡುಗಡೆ ಮಾಡಿದ ದಿನವೇ ಗೂಗಲ್‌‌ ನೆಕ್ಸಸ್‌ 7 ಟ್ಯಾಬ್ಲೆಟ್‌ 2 ಬಿಡುಗಡೆ ಮಾಡಿತ್ತು.ಈ ಟ್ಯಾಬ್ಲೆಟ್‌ ಕೆಲ ದೇಶಗಳ ಮಾರುಕಟ್ಟೆಗೆ ಬಿಡುಗಡೆಯಾಗಿದ್ದರೂ ಭಾರತದ ಮಾರುಕಟ್ಟೆಗೆ ಇನ್ನೂ ಬಿಡುಗಡೆಯಾಗಿಲ್ಲ. ಸದ್ಯದಲ್ಲೇ ಈ ಟ್ಯಾಬ್ಲೆಟ್‌ನ್ನು ಭಾರತದ ಮಾರುಕಟ್ಟೆಗೆ ಗೂಗಲ್‌ ಪರಿಚಯಿಸುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಗೂಗಲ್‌ ತನ್ನ ಟ್ಯಾಬ್ಲೆಟ್‌ ಬೆಲೆಯಲ್ಲಿ ಇಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ.

ನೆಕ್ಸಸ್‌‌ 7 ಟ್ಯಾಬ್ಲೆಟ್‌
ವಿಶೇಷತೆ
7 ಇಂಚಿನ ಎಚ್‌ಡಿ ಸ್ಕ್ರೀನ್‌ (1280 x 800 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
16/32 GB ಆಂತರಿಕ ಮೆಮೋರಿ
1.2 ಎಂಪಿ ಮುಂದುಗಡೆ ಕ್ಯಾಮೆರಾ
NVIDIA Tegra 3 ಕ್ವಾಡ್‌ ಕೋರ್‌ ಪ್ರೊಸೆಸರ್‌
1 GB RAM
ಮೈಕ್ರೋ ಯುಎಸ್‌ಬಿ,ವೈಫೈ
4325 mAh ಬ್ಯಾಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot