ಗೂಗಲ್‌ ಆಂಡ್ರಾಯ್ಡ್ 4.3 ಓಎಸ್‌ ಬಿಡುಗಡೆ

Posted By:

ಆಂಡ್ರಾಯ್ಡ್‌ ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂ ಅಪ್‌ಡೇಟ್‌ ಆವೃತ್ತಿಯನ್ನು ಗೂಗಲ್‌ ಬಿಡುಗಡೆ ಮಾಡಿದೆ. ಅಪ್‌ಡೇಟ್‌ ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌ನ್ನು ನಿನ್ನೆ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ನೆಕ್ಸಸ್‌ 7 ಟ್ಯಾಬ್ಲೆಟ್‌ 2 ಬಿಡುಗಡೆ ಸಮಾರಂಭದಲ್ಲಿ ಬಿಡುಗಡೆ ಮಾಡಿದೆ. ಬಿಡುಗಡೆಯಾಗಿರುವ ನೆಕ್ಸಸ್‌ 7 ಟ್ಯಾಬ್ಲೆಟ್‌ ಈಗ ಹೊಸದಾಗಿ ಬಂದಿರುವ ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌ ಆವೃತ್ತಿಯಲ್ಲಿ ಮಾರುಕಟ್ಟೆಗೆ ಬಂದಿದೆ.

ಹೊಸ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂನ್ನು ಆಂಡ್ರಾಯ್ಡ್‌ ಬಳಸುವ ಬಳಕೆದಾರರು ಈಗಲೇ ಆಪ್‌ಡೇಟ್‌ ಮಾಡಬಹುದಾಗಿದ್ದು ಎಲ್‌ಜಿ ನೆಕ್ಸಸ್‌ 74,ಸ್ಯಾಮ್‌ಸಂಗ್‌ ನೆಕ್ಸಸ್‌ 7ಸ್ಮಾರ್ಟ್‌ಫೋನ್‌,ಮತ್ತು ನೆಕ್ಸಸ್‌ 7 10 ಟ್ಯಾಬ್ಲೆಟ್‌ ಹೊಂದಿರುವ ಗ್ರಾಹಕರು ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌ ಆವೃತ್ತಿಗೆ ಅಪ್‌ಡೇಟ್‌ ಮಾಡಬಹುದಾಗಿದೆ.

ಗೂಗಲ್‌ ಆಂಡ್ರಾಯ್ಡ್ 4.3 ಓಎಸ್‌ ಬಿಡುಗಡೆ

Click Here For List of New Smartphones And Tablets Price

ಹೀಗೆ ಅಪ್‌ಡೇಟ್‌ ಮಾಡಿ:
ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಹೊಂದಿರುವ ಬಳಕೆದಾರರು ಸೆಟ್ಟಿಂಗ್ಸ್‌ ಮೆನುವಿಗೆ ಹೋಗಿ about phoneಆಯ್ಕೆಯನ್ನು ಆರಿಸಿಕೊಳ್ಳಿ.ನಂತರ Select Software Update ಆಯ್ಕೆಯನ್ನು ಆರಿಸಿ. ಈಗ ನಿಮ್ಮಲ್ಲಿರುವ ಸ್ಮಾರ್ಟ್‌ಫೋನ್‌ ಯಾವುದಾದರು ಆಪ್‌ಡೇಟ್‌ ಆಗುವಂತ ಅವಕಾಶವಿದೆಯೇ ಎಂದು ಸರ್ಚ್‌ ಮಾಡುತ್ತದೆ.ಒಂದು ವೇಳೆ ಅಪಡೇಟ್‌‌ ಫೀಚರ್‌ ಇದ್ದಲ್ಲಿ ಅದೇ ಡೌನ್‌ಲೋಡ್‌ ಇನ್‌ಸ್ಟಾಲ್‌ ಆಗಿ ಆಪಡೇಟ್‌ ಆಗುತ್ತದೆ. ಒಂದು ವೇಳೆ ಸರ್ಚ್‌ ಮಾಡುವ ವೇಳೆ ಯಾವುದೇ ಆಪ್‌ಡೇಟ್‌ ಸಿಗದಿದ್ದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ ಓಎಸ್‌ಗೆ ಸಂಬಂಧಿಸಿದಂತೆ ಯಾವುದೇ ಅಪ್‌ಡೇಟ್‌ ಇಲ್ಲ ಎನ್ನುವುದನ್ನು ತಿಳಿಯಬಹುದಾಗಿದೆ. ಇದೇ ರೀತಿಯಾಗಿ ನೀವು ನಿಮ್ಮ ಆಂಡ್ರಾಯ್ಡ್‌ ಫ್ಯಾಬ್ಲೆಟ್‌ ಟ್ಯಾಬ್ಲೆಟ್‌ನ್ನು ಅಪ್‌ಡೇಟ್‌ ಮಾಡಬಹುದಾಗಿದೆ.

ಇದನ್ನೂ ಓದಿ: ಏನು ಚಂದ ಏನು ಚಂದ ಈ ಗೂಗಲ್‌ ಆಫೀಸ್‌

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot