Home
ಮೊಬೈಲ್

ಶುರುವಾಯ್ತು ನೋಕಿಯಾ 2 ಮಾರಾಟ: ಭಾರೀ ಬ್ಯಾಟರಿಯ ಫೋನ್ ಬೆಲೆ ಮಾತ್ರ ತೀರಾ ಕಮ್ಮಿ.!

By Srinidhi

ಭಾರತದಲ್ಲಿ ಬಿಡುಗಡೆಯಾಗಿದ್ದ ನೋಕಿಯಾ 2 ಬಜೆಟ್ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದು, ಇಂದು ರಾತ್ರಿಯಿಂದಲೇ ಸೇಲ್ ಆಗಲಿದ್ದು, ಇನ್ನೇರಡು ದಿನದಲ್ಲಿ ಎಲ್ಲಾ ಆಫ್‌ಲೈನ್‌ ಮಾರುಕಟ್ಟೆಯಲ್ಲ ಕಾಣಿಸಿಕೊಳ್ಳಲಿದೆ.

ಅಲ್ಲದೇ ನಂತರದ ದಿನದಲ್ಲಿ ಆನ್‌ಲೈನ್‌ ಶಾಪಿಂಗ್ ತಾಣದಲ್ಲಿ ಮಾರಾಟವಾಗಲಿದೆ. ಆದರೆ ಎಂದಿನಿಂದ ಮಾರಾಟ ಶುರುವಾಗಲಿದೆ ಎಂಬುದು ಖಚಿತವಾಗಿಲ್ಲ.

ಶುರುವಾಯ್ತು ನೋಕಿಯಾ 2 ಮಾರಾಟ: ಭಾರೀ ಬ್ಯಾಟರಿಯ ಫೋನ್ ಬೆಲೆ ಮಾತ್ರ ತೀರಾ ಕಮ್ಮಿ.!

ಓದಿರಿ: ಐಡಿಯಾ ಬಳಕೆದಾರರು ಆಧಾರ್ ಲಿಂಕ್ ಮಾಡಿದರೆ ಬಂಪರ್ ಆಫರ್: ರೂ.20000 ಮೌಲ್ಯದ ಮೂವಿ ವೋಚರ್

ಭಾರತದಲ್ಲಿ ನೋಕಿಯಾ 2 ಎರಡು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದು, 1GB ಮತ್ತು 8GB ಆವೃತ್ತಿಯಲ್ಲಿ ಹಾಗೂ 2GB ಮತ್ತು 16GBಯ ಮತ್ತೊಂದು ಆವೃತ್ತಿಯೂ ಮಾರಾಟವಾಗಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಅಬ್ಬರ ಶುರು ಮಾಡಲಿದೆ.

ಬೆಲೆಗಳು:

ಬೆಲೆಗಳು:

2GB ಮತ್ತು 16GBಯ ಮತ್ತೊಂದು ಆವೃತ್ತಿ ನೋಕಿಯಾ 2 ಇಂದಿನಿಂದಲೇ ಆಫ್‌ಲೈನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹಲವು ವೆಬ್‌ಸೈಟ್‌ಗಳು ವರದಿ ಮಾಡಿವೆ. ಇದರ ಬೆಲೆ ರೂ. 6,999 ಆಗಲಿದೆ. ಇದೇ ಮಾದರಿಯಲ್ಲಿ 2GB ಮತ್ತು 16GB ಆವೃತ್ತಿ ಫ್ಲಿಪ್‌ಕಾರ್ಟಿನಲ್ಲಿ ಮಾತ್ರವೇ ದೊರೆಯಲಿದ್ದು, ರೂ.7,999ಕ್ಕೆ ಮಾರಾಟವಾಗಲಿದೆ.

ಮೂರು ಬಣ್ಣಗಳು:

ಮೂರು ಬಣ್ಣಗಳು:

ನೋಕಿಯಾ 2 ಸ್ಮಾರ್ಟ್‌ಫೋನ್ ಒಟ್ಟು ಮೂರು ಬಣ್ಣಗಳಲ್ಲಿ ದೊರೆಯಲಿದೆ ಎನ್ನಲಾಗಿದೆ. ಕಾಪರ್ ಬ್ಲಾಕ್, ಬ್ಲಾಕ್, ವೈಟ್ ಬಣ್ಣಗಳಲ್ಲಿ ಲಭ್ಯವಿರಲಿದೆ. ಇದು ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಸ್ವಾತಂತ್ರವನ್ನು ನೀಡಲಿದೆ.

ಆಂಡ್ರಾಯ್ಡ್ ನ್ಯಾಗಾ;

ಆಂಡ್ರಾಯ್ಡ್ ನ್ಯಾಗಾ;

ನೋಕಿಯಾ 2 ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸಲಿದ್ದು, ಶೀಘ್ರವೇ ಆಂಡ್ರಾಯ್ಡ್ ಒರಿಯೋ ಆಪ್‌ಡೇಟ್ ಸಹ ಪಡೆದುಕೊಳ್ಳಿದೆ. 5 ಇಂಚಿನ HD ಡಿಸ್‌ಪ್ಲೇಯನ್ನು ಈ ಫೋನ್ ಹೊಂದಿರಲಿದೆ. 16:9 ಡಿಸ್‌ಪ್ಲೇ ಅನುಪಾತದಿಂದ ಕೂಡಿರಲಿದೆ.

4100 mAh ಬ್ಯಾಟರಿ:

4100 mAh ಬ್ಯಾಟರಿ:

ನೋಕಿಯಾ 2 ಉತ್ತಮ ಬ್ಯಾಟರಿಯನ್ನು ಒಳಗೊಂಡಿದೆ. 4100 mAh ಬ್ಯಾಟರಿಯನ್ನು ಹೊಂದಿದೆ. ಎರಡು ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಆಂಡ್ರಾಯ್ಡ್ ಸ್ನಾಪ್‌ಡ್ರಾಗನ್ 212 ಪ್ರೋಸೆಸರ್ ಅನ್ನು ನೋಕಿಯಾ 2 ಹೊಂದಿದೆ. ಇದು ಈ ಫೋನಿನ ವೇಗವನ್ನು ಹೆಚ್ಚಿಸಲಿದೆ.

ಉತ್ತಮ ಕ್ಯಾಮೆರಾ:

ಉತ್ತಮ ಕ್ಯಾಮೆರಾ:

ನೋಕಿಯಾ 2 ಸ್ಮಾರ್ಟ್‌ಫೋನಿನಲ್ಲಿ 5MP ಸೆಲ್ಪಿ ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ 8MP ಕ್ಯಾಮೆರಾವನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ. ಜೊತಗೆ LED ಫ್ಲಾಷ್ ಲೈಟ್ ಹೊಂದಿದೆ. ಅಲ್ಲದೇ 128GB ವರೆಗೆ SD ಕಾರ್ಡ್ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು.

Best Mobiles in India

English summary
Nokia 2 launch exclusively on Flipkart. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+