ನೋಕಿಯಾ 2 ಸ್ಮಾರ್ಟ್‌ಫೋನ್ ಕೊಳ್ಳಲೇಬೇಕು ಎನ್ನುವುದಕ್ಕೆ ಇಲ್ಲಿದೇ ಕಾರಣಗಳು..!

|

ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ 2 ಸದ್ದು ಮಾಡಲು ಶುರುವಾಗಿದೆ. ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಗೆ ಲಾಂಚ್ ಆಗಿರುವ ನೋಕಿಯಾ 2 ಚೀನಾ ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ಹೊಡೆತವನ್ನು ನೀಡುತ್ತಿದೆ. ರೂ. 6,999ಕ್ಕೆ ಮಾರಾಟವಾಗುತ್ತಿರುವ ಈ ನೋಕಿಯಾ 2 ಸ್ಮಾರ್ಟ್‌ಫೋನ್ ಅನ್ನು ಖರೀದಿಸಲು ಇರುವ ಕಾರಣಗಳನ್ನು ತಿಳಿಸುವ ಪ್ರಯತ್ನವಾಗಿದೆ.

ನೋಕಿಯಾ 2 ಸ್ಮಾರ್ಟ್‌ಫೋನ್ ಕೊಳ್ಳಲೇಬೇಕು ಎನ್ನುವುದಕ್ಕೆ ಇಲ್ಲಿದೇ ಕಾರಣಗಳು..!

ಓದಿರಿ: ಟ್ರಾಫಿಕ್ ಪೊಲೀಸ್ ಹಿಡಿದರೆ ಹೆದರಬೇಕಾಗಿಲ್ಲ: ಬಂದಿದೆ ಹೊಸ ಆಪ್‌! ಯಾಕೆ ಈ ಆಪ್?

HMD ಗ್ಲೊಬಲ್ ಸಂಸ್ಥೆಯೂ ಲಾಂಚ್ ಮಾಡಿರುವ ನೋಕಿಯಾ 2 ಸ್ಮಾರ್ಟ್‌ಫೋನ್ ಬಜೆಜ್ ಸ್ಮಾರ್ಟ್‌ಫೋನ್ ಕೊಳ್ಳಬೇಕು ಎನ್ನುವವರಿಗೆ ಇದು ಉತ್ತಮ ಆಯ್ಕೆಯನ್ನಲಾಗಿದೆ. ನವೆಂವರ್ 24 ರಿಂದ ಆಫ್‌ಲೈನ್ ಮಾರುಕಟ್ಟೆಯಲ್ಲಿ ಈ ಫೋನ್ ಕಾಣಿಸಿಕೊಳ್ಳಲಿದ್ದು, ಗ್ರಾಹಕರ ಕೈಗೆ ಸೇರಿಸಲಿದೆ.

ಹೆಚ್ಚು ಬ್ಯಾಟರಿ ಬಾಳಿಕೆ:

ಹೆಚ್ಚು ಬ್ಯಾಟರಿ ಬಾಳಿಕೆ:

ನೋಕಿಯಾ 2 ಸ್ಮಾರ್ಟ್‌ಫೋನ್ ಹೆಚ್ಚು ಸದ್ದು ಮಾಡುತ್ತಿರುವ ಕಾರಣ ಎಂದರೆ ಅತೀ ದೊಡ್ಡ ಬ್ಯಾಟರಿಯನ್ನು ಹೊಂದಿರುವುದಕ್ಕೆ. ಈ ಸ್ಮಾರ್ಟ್‌ಫೋನ್ 4100mAh ಬ್ಯಾಟರಿಯನ್ನು ಒಳಗೊಂಡಿದ್ದು, ಎರಡು ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ ಎನ್ನಲಾಗಿದೆ. ಇದರಿಂದಾಗಿ ಹೆಚ್ಚಿನ ಬ್ಯಾಟರಿಯ ಬ್ಯಾಕಪ್ ಬೇಕು ಎನ್ನುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಅತ್ಯುತ್ತಮ ವಿನ್ಯಾಸ:

ಅತ್ಯುತ್ತಮ ವಿನ್ಯಾಸ:

ಇದಲ್ಲದೇ ನೋಕಿಯಾ 2 ಸ್ಮಾರ್ಟ್‌ಫೋನ್ ನೋಡಲು ಉತ್ತಮ ವಿನ್ಯಾಸವನ್ನು ಕಾಣಬಹುದಾಗಿದೆ. ಇದು ಎರಡು ಮೂರು ಬಣ್ಣಗಳಲ್ಲಿ ಲಭ್ಯವಿದ್ದು, ಬ್ಲಾಕ್, ವೈಟ್, ಕಾಪರ್ ಬ್ಲಾಕ್ ಬಣ್ಣಗಳಲ್ಲಿ ಇದು ದೊರೆಯಲಿದೆ.

ಉತ್ತಮ ಗುಣಮಟ್ಟದ ಡಿಸ್‌ಪ್ಲೇ:

ಉತ್ತಮ ಗುಣಮಟ್ಟದ ಡಿಸ್‌ಪ್ಲೇ:

ನೋಕಿಯಾ 2 ಸ್ಮಾರ್ಟ್‌ಫೋನ್ 5 ಇಂಚಿನ LED 720p ಗುಣಮಟ್ಟದ ಡಿಸ್‌ಪ್ಲೇಯನ್ನು ಇದರಲ್ಲಿ ಕಾಣಬಹುದಾಗಿದೆ. ಉತ್ತಮ ಕ್ವಾಲಿಟಿಯನ್ನು ಹೊಂದಿದ್ದು, ವಿಡಿಯೋ ನೋಡಲು ಗೇಮ್ ಆಡಲು ಇದು ಸೂಕ್ತವಾಗಿದೆ ಎನ್ನಲಾಗಿದೆ.

ಡ್ಯುಯಲ್ ಸಿಮ್‌ ಜೊತೆಗೆ ಮೆಮೊರಿ ಕಾರ್ಡ್:

ಡ್ಯುಯಲ್ ಸಿಮ್‌ ಜೊತೆಗೆ ಮೆಮೊರಿ ಕಾರ್ಡ್:

ಸದ್ಯ ಲಭ್ಯವಿರುವ ಫೋನ್‌ಗಳಲ್ಲಿ ಒಂದು ಸಿಮ್‌ ಕಾರ್ಡ್‌ ಒಂದು ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಆದರೆ ನೋಕಿಯಾ 2 ನಲ್ಲಿ ಎರಡು ಸಿಮ್‌ ಜೊತೆಗೆ ಮತ್ತೊಂದು ಮೆಮೊರಿ ಕಾರ್ಡ್ ಹಾಕುವ ಅವಕಾಶ ನೀಡಿದ್ದು, 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಿದೆ.

ಆಂಡ್ರಾಯ್ಡ್ ಒರಿಯೋ:

ಆಂಡ್ರಾಯ್ಡ್ ಒರಿಯೋ:

ಇದಲ್ಲದೇ ಬಜೆಟ್ ಬೆಲೆಯ ನೋಕಿಯಾ2 ಆಂಡ್ರಾಯ್ಡ್ ಒರಿಯೋ ಆಪ್‌ಡೇಟ್ ಸ್ವೀಕರಿಸಲಿದ್ದು, ಬೇರೆ ಇನ್ಯಾವುದೇ ಬಜೆಟ್ ಫೋನ್ ಆಂಡ್ರಾಯ್ಡ್ ಒರಿಯೋ ಆಪ್‌ಡೇಟ್ ಸ್ವೀಕರಿಸಲಿದೆ ಎನ್ನುವ ಕಾರಣಗಿಯೇ ಈ ಫೋನ್ ಖರೀದಿಸಬೇಕು ಎಂದರೆ ತಪ್ಪಾಗುವುದಿಲ್ಲ.

Best Mobiles in India

English summary
Nokia 2 Now Available in India: Reasons to Buy. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X