ಬಡವರ ನೋಕಿಯಾ.. ಸದ್ದಿಲ್ಲದೆ 2 ಹೊಸ ಫೋನ್ ಲಾಂಚ್: ಜಸ್ಟ್ 4 ಸಾವಿರಕ್ಕೆ ಈ ಫೋನ್ ಸಿಗುತ್ತೆ!
ನೋಕಿಯಾ ಪ್ರಿಯರಿಗೆ ಡಬಲ್ ಗುಡ್ ನ್ಯೂಸ್..! ಸದ್ದಿಲ್ಲದೆ ಕಡಿಮೆ ಬೆಲೆಯ ಎರಡು ಬಡವರ ಬಂಧು ಫೋನ್ ಎಂಟ್ರಿ. ಹೌದು, HMD ಭಾರತದಲ್ಲಿ Nokia 220 4G ಮತ್ತು Nokia 235 4G ಫೀಚರ್ ಫೋನ್‌ಗಳ ಬಿಡುಗಡೆ ಮಾಡಿದೆ. ಅತಿ ಕಡಿಮೆ ಮೊತ್ತದಲ್ಲಿ ಒಂದೊಳ್ಳೆ ಮೊಬೈಲ್ ಖರೀದಿಸಲು ಯೋಚನೆ ಮಾಡಿದ್ರೆ, ಈ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಪರ್ಫೆಕ್ಟ್ ಆಯ್ಕೆ. ಕೇವಲ 4 ಸಾವಿರ ರೂ. ಒಳಗೆ ಈ ಅತ್ಯುತ್ತಮ 4G ಸ್ಮಾರ್ಟ್‌ಫೋನ್ ಲಭ್ಯವಿದೆ. ಹಾಗಿದ್ರೆ, ಈ ಫೀಚರ್ ಫೋನ್‌ಗಳ ಬೆಲೆ ಎಷ್ಟು? ಫೀಚರ್‌ಗಳೇನು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ನೋಕಿಯಾ ಫೋನ್ ಕೊಳ್ಳಬೇಕು, ಆದ್ರೆ ಜೇಬಿಗೆ ಹೊರೆ ಆಗಬಾರದು ಅಂತ ಆಸೆಪಡುತ್ತಿದ್ದೀರಾ..? ಇಂಥ ಗ್ರಾಹಕರಿಗಾಗಿಯೇ Nokia 220 4G ಮತ್ತು Nokia 235 4G ಎಂಬ ಫೋನನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇವು ಮೊಬೈಲ್ ಪ್ರಿಯರಿಗೆ ಇಷ್ಟವಾಗುತ್ತವೆಯೋ? ಇಲ್ಲವೋ? ಎಂಬುದು ಇನ್ನೂ ಸ್ಪಷ್ಟವಿಲ್ಲ. ಆದರೆ, ಇವು ಕಡಿಮೆ ಬೆಲೆಯ ಬಡವರ ಬಂಧು ಫೋನ್‌ಗಳಾಗಿವೆ. Nokia 3210 ಜೊತೆಗೆ, ಕಂಪನಿಯು ನೋಕಿಯಾ 235 4G ಮತ್ತು 220 4G ಅನ್ನು ಬಿಡುಗಡೆ ಮಾಡಿದೆ.

HMD ತನ್ನ 25ನೇ ಬಿಡುಗಡೆಯ ವಾರ್ಷಿಕೋತ್ಸವದಂದು ಜನಪ್ರಿಯ Nokia 3210 ಮೊಬೈಲ್ ಅನ್ನು ಮರುಪ್ರಾರಂಭಿಸುವುದಾಗಿ ಘೋಷಿಸಿದೆ. ಒಂದಾನೊಂದು ಕಾಲದಲ್ಲಿ ಸಖತ್ ಸೌಂಡ್ ಮಾಡಿದ್ದ ಮೊಬೈಲ್ ಮತ್ತೆ ಭಾರತೀಯ ಮಾರುಕಟ್ಟೆಗೆ ಬಂದಿದೆ. ಕಂಪನಿಯು ಈ ಫೋನ್ ಅನ್ನು ಮೂರು ದಪ್ಪ ಮತ್ತು ಹಳೆಯ ಬಣ್ಣಗಳಲ್ಲಿ ಲಭ್ಯವಾಗುವಂತೆ ಮಾಡಿದೆ. ಈ ಫೋನ್ ಸ್ಕೂಬಾ ನೀಲಿ, ಗ್ರಂಜ್ ಕಪ್ಪು ಮತ್ತು Y2K ಗೋಲ್ಡ್ ಕಲರ್‌ನಲ್ಲಿ ಲಾಂಚ್ ಆಗಿದೆ.
Nokia 3210 ವಿಶೇಷತೆಗಳು
Nokia 3210 ಫೋನ್ 1450mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 9.5 ಗಂಟೆಗಳ ಟಾಕ್ ಟೈಮ್ ಅನ್ನು ಒದಗಿಸುತ್ತದೆ. ಈ ಫೋನ್‌ನಲ್ಲಿ ಹಳೆಯ ಸ್ನೇಕ್ ಗೇಮ್ ಅನ್ನು ಸಹ ಪರಿಚಯಿಸಲಾಗಿದೆ. ಕಂಪನಿಯು 2MP ಹಿಂಬದಿಯ ಕ್ಯಾಮೆರಾ ಮತ್ತು ಫ್ಲ್ಯಾಷ್ ಟಾರ್ಚ್ ಅನ್ನು ಮೊಬೈಲ್‌ನಲ್ಲಿ ಅಳವಡಿಸಿದೆ. Nokia 3210 ಆಧುನಿಕ ವೈಶಿಷ್ಟ್ಯಗಳೊಂದಿಗೆ ಹಳೆಯ ನೆನಪುಗಳನ್ನು ರಿಫ್ರೆಶ್ ಮಾಡುತ್ತದೆ. Nokia 3210 ರೆಟ್ರೊ 1999 ಪ್ರೇರಿತ ವಿನ್ಯಾಸವು ಅನನ್ಯ ಬಳಕೆದಾರ ಅನುಭವವನ್ನು ಒದಗಿಸುತ್ತದೆ.
YouTube, ಕ್ರಿಕೆಟ್ ಸ್ಕೋರ್ ಲಭ್ಯ
Nokia 3210 ನಿಮಗೆ YouTube ಮತ್ತು YouTube Music ಸೌಲಭ್ಯವನ್ನು ನೀಡುತ್ತದೆ. ಇದಲ್ಲದೆ, ಕಂಪನಿಯು ಹವಾಮಾನ, ಸುದ್ದಿ, ಸೊಕೊಬಾನ್, ಕ್ರಿಕೆಟ್ ಸ್ಕೋರ್, 2048 ಗೇಮ್ ಮತ್ತು ಟೆಟ್ರಿಸ್‌ನಂತಹ 8 ಅಪ್ಲಿಕೇಶನ್‌ಗಳನ್ನು ಸಹ ಹೊಂದಿದೆ. ಈ ಫೋನ್‌ಗಳನ್ನು ಖರೀದಿಸಿದವರು ಜೂನ್ 20 ರಿಂದ ಈ ಫೋನ್‌ನಲ್ಲಿ YouTube Music ಅನ್ನು ಬಳಸಲು ಸಾಧ್ಯವಾಗುತ್ತದೆ.
ಸುಲಭವಾಗಿ UPI ಪಾವತಿ ಮಾಡಬಹುದು
ಇದು ಮಾತ್ರವಲ್ಲದೆ, ಈ ಫೋನ್ ಅನ್ನು NPCI ಅನುಮೋದಿಸಿದ ಪೂರ್ವ ಲೋಡ್ ಮಾಡಲಾದ UPI ಅಪ್ಲಿಕೇಶನ್‌ನೊಂದಿಗೆ ಪರಿಚಯಿಸಲಾಗಿದೆ. ಇದು ಸುಲಭವಾದ ಸ್ಕ್ಯಾನ್ ಮತ್ತು ಪಾವತಿ ಕಾರ್ಯವನ್ನು ಸಹ ಬೆಂಬಲಿಸುತ್ತದೆ. ಈ ಫೋನ್‌ನಲ್ಲಿ ನೀವು ಸ್ಮಾರ್ಟ್‌ಫೋನ್‌ನಂತೆಯೇ ಪಾವತಿಯ ಅನುಭವವನ್ನು ಪಡೆಯುವ ಅವಕಾಶವನ್ನು ಪಡೆಯಬಹುದು.
Nokia 235 4G ಫೀಚರ್ಸ್‌ಗಳು
ನೋಕಿಯಾ 235 4G ಫೋನ್ 2.8-ಇಂಚಿನ IPS ಡಿಸ್ಪ್ಲೇಯನ್ನು ಹೊಂದಿದೆ. ಈ ಮೊಬೈಲ್ 2MP ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ, ಈ ಮೊಬೈಲ್ 3 ಬಣ್ಣಗಳನ್ನು ಪಡೆದಿದೆ. ನೀವು ನೀಲಿ, ಕಪ್ಪು ಮತ್ತು ನೇರಳೆ ಬಣ್ಣಗಳಲ್ಲಿ ಖರೀದಿಸಬಹುದು.

Nokia 220 4G ವಿಶೇಷತೆಗಳು
Nokia 220 4G ಕೂಡ 2.8 ಇಂಚಿನ IPS ಡಿಸ್ಪ್ಲೇ ಹೊಂದಿದೆ. ಈ ಫೋನ್‌ನಲ್ಲಿ ಯುಪಿಐ ಅಪ್ಲಿಕೇಶನ್ ಪೂರ್ವ ಲೋಡ್ ಆಗಿದ್ದು, ಇದನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅನುಮೋದಿಸಿದೆ. ಇದರ ಮೂಲಕ ನೀವು ಸುಲಭವಾಗಿ ವಹಿವಾಟುಗಳನ್ನು ಮಾಡಬಹುದು. ಈ ಫೋನ್ ಟೈಪ್-ಸಿ ಚಾರ್ಜಿಂಗ್ ಮೂಲಕ ಉತ್ತಮ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಕಂಪನಿಯು Nokia 220 4G ಅನ್ನು 'ಪೀಚ್ ಮತ್ತು ಕಪ್ಪು' ಎರಡು ಬಣ್ಣಗಳಲ್ಲಿ ಪರಿಚಯಿಸಿದೆ.
Nokia 3210, Nokia 235 4G ಮತ್ತು 220 4G ಬೆಲೆ ಎಷ್ಟು?
ಕಂಪನಿಯು Nokia 3210 ಅನ್ನು 3,999 ರೂ. ನಲ್ಲಿ ಬಿಡುಗಡೆ ಮಾಡಿದೆ. ಆದರೆ, Nokia 235 4G ಬೆಲೆಯನ್ನು 3,749 ರೂಪಾಯಿಗಳಲ್ಲಿ ಇರಿಸಲಾಗಿದೆ. ಇನ್ನೂ Nokia 220 4G ಬೆಲೆ 3,249 ರೂಪಾಯಿ ಇದೆ. ನೀವು ಈ ಮೂರು ಮೊಬೈಲ್‌ಗಳನ್ನು HMD.com, Amazon ಮತ್ತು ಚಿಲ್ಲರೆ ಅಂಗಡಿಗಳಿಂದ ಖರೀದಿಸಬಹುದು.
Nokia 235 4G ಮತ್ತು Nokia 220 4G ಪೂರ್ಣ ಫೀಚರ್ಸ್
- ಡಿಸ್ಲ್ಪೇ: 2.8 ″ QVGA ಡಿಸ್ಲ್ಪೇ
- ಪ್ರೊಸೆಸರ್: ಯುನಿಸೋಕ್ ಟಿ 107 (Unisoc T107) ಪ್ರೊಸೆಸರ್
- ಸ್ಟೋರೇಜ್: 64MB RAM, 128MB ಇಂಟರ್ನಲ್ ಸ್ಟೋರೇಜ್. ಮೈಕ್ರೊ ಎಸ್‌ಡಿ ಜೊತೆ 32GB ವರೆಗೆ ವಿಸ್ತರಿಸಬಹುದಾದ ಮೆಮೊರಿ
- OS: ನೋಕಿಯಾ ಎಸ್ 30+ OS
- ಕ್ಯಾಮೆರಾ: ಎಲ್ಇಡಿ ಫ್ಲ್ಯಾಶ್‌ನೊಂದಿಗೆ 2 ಎಂಪಿ ಹಿಂಭಾಗದ ಕ್ಯಾಮೆರಾ
- ಅಪ್ಲಿಕೇಶನ್: ಸ್ಕ್ಯಾನ್ and ಪೇ ಯುಪಿ ನೋಕಿಯಾ 235 4 ಜಿ (2024) ಮತ್ತು ಯುಪಿಐ ಅಪ್ಲಿಕೇಶನ್ ನೋಕಿಯಾ 220 4 ಜಿ (2024)
- 3.5mm ಹೆಡ್‌ಫೋನ್ ಜ್ಯಾಕ್, MP3 ಪ್ಲೇಯರ್, ಎಫ್‌ಎಂ ರೇಡಿಯೋ
- ಕನೆಕ್ಟಿವಿಟಿ ಆಯ್ಕೆಗಳು: ಬ್ಲೂಟೂತ್ 5.0, ಯುಎಸ್ಬಿ ಟೈಪ್-ಸಿ
- ಅಳತೆ: 127.25 x 54.2 x 11.63 mm
- ಬ್ಯಾಟರಿ: 9.8h ವರೆಗೆ ಟಾಕ್ ಟೈಮ್‌ನೊಂದಿಗೆ 1450mAh ಸಾಮರ್ಥ್ಯದ ಬ್ಯಾಟರಿ


Click it and Unblock the Notifications








