ಆನ್‌ಲೈನಿನಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಲಭ್ಯ..!! ಎಲ್ಲಿ..? ಏಷ್ಟು..?
ನೋಕಿಯಾ ಮೂರು ವಿವಿಧ ದರ್ಜೆಯ ಸ್ಮಾರ್ಟ್‌ಫೋನ್‌ಗಳನ್ನು ಒಮ್ಮೆಗೆ ಲಾಂಚ್ ಮಾಡಿತ್ತು, ಇದರಲ್ಲಿ ಎರಡು ಫೋನ್‌ಗಳು ಸಾಮಾನ್ಯ ಮಾರುಕಟ್ಟೆಯಲ್ಲಿ ಉಳಿದ ಒಂದು ಫೋನ್ ಆನ್‌ಲೈನಿನಲ್ಲಿ ಮಾರಾಟ ಮಾಡುವುದಾಗಿ ತಿಳಿಸಿತ್ತು.
ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಿದ್ದವು, ಅದರಲ್ಲಿ ನೋಕಿಯಾ 6 ಸ್ಮಾರ್ಟ್‌ಫೋನ್ ಮಾತ್ರವೇ ಆನ್‌ಲೈನಿನಲ್ಲಿ ಲಭ್ಯವಿತ್ತು. ಅದುವೇ ಜುಲೈ ತಿಂಗಳಿನಿಂದ ಆದರೆ ಆಫ್ ಲೈನ್ ಮಾರುಕಟ್ಟೆಗೆಂದು ಬಿಡುಗಡೆಯಾಗಿದ್ದ ನೋಕಿಯಾ 3 ಸದ್ಯ ಆನ್‌ಲೈನಿನಲ್ಲಿಯೂ ಕಾಣಿಸಿಕೊಂಡಿದೆ.
ಓದಿರಿ: ಜಿಯೋ 'ಸಮ್ಮರ್ ಸರ್ಪೈಸ್ ಆಫರ್' ಮಾದರಿಯಲ್ಲಿ ಏರ್ಟೆಲ್ ನಿಂದ 'ಮಾನ್ಸೂನ್ ಸರ್ಪೈಸ್' ಆಫರ್....!!

ನೋಕಿಯಾ ಮೂರು ವಿವಿಧ ದರ್ಜೆಯ ಸ್ಮಾರ್ಟ್‌ಫೋನ್‌ಗಳನ್ನು ಒಮ್ಮೆಗೆ ಲಾಂಚ್ ಮಾಡಿತ್ತು, ಇದರಲ್ಲಿ ಎರಡು ಫೋನ್‌ಗಳು ಸಾಮಾನ್ಯ ಮಾರುಕಟ್ಟೆಯಲ್ಲಿ ಉಳಿದ ಒಂದು ಫೋನ್ ಆನ್‌ಲೈನಿನಲ್ಲಿ ಮಾರಾಟ ಮಾಡುವುದಾಗಿ ತಿಳಿಸಿತ್ತು.

ಆನ್‌ಲೈನ್ ನಲ್ಲಿ ನೋಕಿಯಾ 3:
ಸದ್ಯ ಹೆಚ್ಚು ಸದ್ದು ಮಾಡುತ್ತಿರುವ ಬಜೆಟ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ನೋಕಿಯಾ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕೇವಲ ಆಫ್ ಲೈನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ಈ ನೋಕಿಯಾ 3 ಫೋನ್ ಈಗ ಆನ್ ಲೈನಿನಲ್ಲಿ ಕಾಣಿಸಿಕೊಂಡಿದೆ. ಆನ್‌ಲೈನ್ ಶಾಪಿಂಗ್ ತಾಣ ಕ್ರೋಮದಲ್ಲಿ ನೋಕಿಯಾ 3 ಲಭ್ಯವಿದೆ.

ನೋಕಿಯಾ 3 ವಿಶೇಷತೆ:
ನೋಕಿಯಾ 3 ಸ್ಮಾರ್ಟ್‌ಪೋನಿನಲ್ಲಿ ನೂತನ ಆಂಡ್ರಾಯ್ಡ್ ನ್ಯಾಗಾ ಇದ್ದು, 5 ಇಂಚಿನ HD ಡಿಸ್‌ಪ್ಲೇ ಜೊತೆಗೆ ರಕ್ಷಣೆಗಾಗಿ ಗೋರಿಲ್ಲ ಗ್ಲಾಸ್, ಮೀಡಿಯಾ ಟೆಕ್ ಕ್ವಾಡ್ ಕೋರ್ 1.3GHz ಪ್ರೋಸೆಸರ್, 2 GB RAM ಹಾಗೂ 16 GB ಆಂತರಿಕ ಮೆಮೊರಿ ಇದರಲ್ಲಿದೆ. 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ, ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, 2650mAh ಬ್ಯಾಟರಿ ಇದೆ, 4G ಸಪೋರ್ಟ್ ಮಾಡಲಿದೆ.

ನೋಕಿಯಾ 3 ಬೆಲೆ:
ನೋಕಿಯಾ 3 ಸ್ಮಾರ್ಟ್‌ಫೋನಿನಿಂದಾಗಿ ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೆ ಹೊಡೆತ ಬಿಳುವ ಸಾಧ್ಯತೆ ಇದೆ. ಈ ಫೋನನ್ನು ನೋಕಿಯಾ ಕೇವಲ 9,499 ರೂಗಳಿಗೆ ಗ್ರಾಹಕರಿಗೆ ನೀಡಲು ಮುಂದಾಗಿದೆ. ಈ ಮೂಲಕ ಶಿಯೋಮಿ, ಮೈಕ್ರೋಮಾಕ್ಸ್, ಒಪ್ಪೋ, ವಿವೋ, ಮೊಟೊ, ಲಿನೊವೊ ಸ್ಮಾರ್ಟ್‌ಫೋನ್‌ಗಳಿಗೆ ಒಂದೇ ಹೊಡೆತದಲ್ಲಿ ಭಾರಿ ಸ್ಪರ್ಧೆಯನ್ನು ನೀಡಲು ಮುಂದಾಗಿದೆ.
ನೋಕಿಯಾ 3 ಕುರಿತ ಫಸ್ಟ್ ಲುಕ್;
ನೋಕಿಯಾ 3 ಸ್ಮಾರ್ಟ್ ಫೋನ್ ಹೇಗೆದೆ ಎಂಬುದನ್ನು ನೀವು ನೋಡಬೇಕಿದ್ದಲ್ಲಿ ವಿಡಿಯೋ ಇಲ್ಲಿದೇ ನೋಡಿ:


Click it and Unblock the Notifications