ಮಾರುಕಟ್ಟೆಗೆ ನೋಕಿಯಾ 3310 3G ಆವೃತ್ತಿ ಬಿಡುಗಡೆ..!!
ಬೆಲೆಯಲ್ಲಿ ಕೊಂಚ ವ್ಯತ್ಯಾಸವಾಗುವ ಸಾಧ್ಯತೆ ಇದ್ದು, ಈ ಹಿಂದೆ ನೋಕಿಯಾ 3310 ಬೆಲೆ ರೂ.3310 ಆಗಿತ್ತು, ಆದರೆ 3G ಆಯ್ಕೆಯನ್ನು ನೀಡಿರುವ ಸಲುವಾಗಿ ಈ ಫೋನಿನ ಬೆಲೆಯಲ್ಲಿ ಕೊಂಚ ವ್ಯತ್ಯಾಸ ಕಾಣುವ ಸಾಧ್ಯತೆ ಇದೆ.
HMD ಗ್ಲೋಬಲ್ ಸಂಸ್ಥೆ ಈ ಹಿಂದೆ ತಿಳಿಸಿದಂತೆ ಮಾರುಕಟ್ಟೆಗೆ ನೋಕಿಯಾ 3310 3G ಆವೃತ್ತಿಯನ್ನು ಲಾಂಚ್ ಮಾಡಿದೆ. ಆದರೆ ಈ ಫೋನ್ ಸದ್ಯ ಆಸ್ಟ್ರೇಲಿಯನ್ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಶೀಘ್ರವೇ ಭಾರತೀಯ ಮಾರುಕಟ್ಟೆಗೆ ಕಾಲಿಡಲಿದೆ.

ಓದಿರಿ: ಜಿಯೋ ಫೋನ್ ಹಿಂದಿರುಗಿಸುವುದು ನೀವೆಂದು ಕೊಂಡಷ್ಟು ಸುಲಭವಲ್ಲ..!!
ಬೆಲೆಯಲ್ಲಿ ಕೊಂಚ ವ್ಯತ್ಯಾಸವಾಗುವ ಸಾಧ್ಯತೆ ಇದ್ದು, ಈ ಹಿಂದೆ ನೋಕಿಯಾ 3310 ಬೆಲೆ ರೂ.3310 ಆಗಿತ್ತು, ಆದರೆ 3G ಆಯ್ಕೆಯನ್ನು ನೀಡಿರುವ ಸಲುವಾಗಿ ಈ ಫೋನಿನ ಬೆಲೆಯಲ್ಲಿ ಕೊಂಚ ವ್ಯತ್ಯಾಸ ಕಾಣುವ ಸಾಧ್ಯತೆ ಇದೆ.

ನೋಕಿಯಾ 3310:
S30+ ಅಪರೇಟಿಂಗ್ ಸಿಸ್ಟಮ್ ನಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದೆ. ಅಲ್ಲದೇ 2.5G ಕನೆಕ್ಟವಿಟಿಯನ್ನು ಈ ಫೋನ್ ಹೊಂದಿದೆ. 2MP ಹಿಂಬದಿ ಕ್ಯಾಮೆರಾ ಸಹ ಈ ಫೋನಿನಲ್ಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ 3310 ಮೊದಲಿಗೆ ಕಾಣಿಸಿಕೊಳ್ಳಲಿದ್ದು, ವಾರ್ಮ್ ರೆಡ್, ಹಳದಿ, ಡಾರ್ಕ್ ಬ್ಲೂ ಮತ್ತು ಗ್ರೇ ಬಣ್ಣದಲ್ಲಿ ದೊರೆಯಲಿದೆ ಎನ್ನಲಾಗಿದೆ.

ಉತ್ತಮ ಬ್ಯಾಟರಿ:
ನೋಕಿಯಾ 3310 ಪೋನಿನಲ್ಲಿ ತೆಗೆಯಬಹುದಾದ 1,200mAh ಬ್ಯಾಟರಿಯನ್ನು ನೀಡಲಾಗಿದ್ದು, 22 ಗಂಟೆಗಳ ಟಾಕ್ ಟೈಂ ಹೊಂದಿರುವ ಈ ಬ್ಯಾಟರಿ 1 ತಿಂಗಳ ಕಾಲ ಸ್ಟ್ಯಾಂಡ್ ಬೈ ಟೈಂ ಹೊಂದಿದೆ ಎನ್ನಲಾಗಿದೆ. ನೋಕಿಯಾ 3310 ಪೋನಿನಲ್ಲಿ ಎಫ್‍ಎಂ ರೇಡಿಯೋ ನೀಡಲಾಗಿದ್ದು, ಪೋನಿನಲ್ಲಿ 16 MB ಆಂತರಿಕ ಮೆಮೊರಿ ಇದ್ದು, ಗ್ರಾಹಕರು ಮೈಕ್ರೊ SD ಕಾರ್ಡ್ ಹಾಕಿಕೊಳ್ಳುವ ಮೂಲಕ 32 ಜಿಬಿವರೆಗೆ ಮಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಹೊಸ ಆಟ:
ನೋಕಿಯಾ 3310 ಪೋನು ಮೈಕ್ರೋ USB ಚಾರ್ಜಿಂಗ್ ಹೊಂದಿದ್ದು, ಇದನ್ನು ಕಂಪ್ಯೂಟರ್‌ಗೆ ಸಂಪರ್ಕಿಸ ಬಹುದಾಗಿದ್ದು, 3.5 ಹೆಡ್‌ಪೋನ್ ಜ್ಯಾಕ್ ನೀಡಲಾಗಿದೆ. ಹಳೇ ಸ್ನೇಕ್ ಆಟಕ್ಕೆ ಹೊಸ ರೂಪ ನೀಡಲಾಗಿದೆ. ಹೊಸ ಮಾದರಿಯ ಸ್ನೇಕ್ ಗೇಮ್ ಬಳಕೆದಾರರಿಗೆ ಹೊಸ ಅನುಭವನ್ನು ನೀಡುವುದು ಖಂಡಿತ.


Click it and Unblock the Notifications