Subscribe to Gizbot

ಮತ್ತೆ ಮೋಡಿ ಮಾಡಲು ಬರುತ್ತಿದೆ ನೋಕಿಯಾ 3310: ಬೆಲೆ ಎಷ್ಟು ಗೊತ್ತಾ..?

Written By:

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ನೋಕಿಯಾ ಕಂಪನಿ ಕಂಡಷ್ಟು ಯಶಸ್ಸು ಬೇರೆ ಯಾವ ಕಂಪನಿಗೂ ಸಾಧ್ಯವಾಗಿಲ್ಲ. ಹಾಗೇ ನೋಕಿಯಾ ಪೋನುಗಳು ಭಾರತೀಯರಿಗೆ ಹತ್ತಿರವಾದಷ್ಟು ಬೇರೆ ಪೋನುಗಳು ಹತ್ತಿರವಾಗಿಲ್ಲ. ಇದೇ ಮಾದರಿಯಲ್ಲಿ ಉತ್ತಮ ಬ್ಯಾಟರಿ ಬಾಳಿಕೆ ಮತ್ತು ಗಟ್ಟಿತನಕ್ಕೆ ಹೆಸರುವಾಸಿಯಾಗಿದ್ದ ನೋಕಿಯಾ 3310 ಮತ್ತೆ ಮಾರುಕಟ್ಟೆಗೆ ಬರಲಿದೆ.

ಮತ್ತೆ ಮೋಡಿ ಮಾಡಲು ಬರುತ್ತಿದೆ ನೋಕಿಯಾ 3310: ಬೆಲೆ ಎಷ್ಟು ಗೊತ್ತಾ..?

ಓದಿರಿ: ಗ್ರಾಮೀಣ ಭಾಗಕ್ಕೆ ಗೂಗಲ್ ನಿಂದ ಬಲೂನ್ ಇಂಟರ್‌ನೆಟ್..!!

ಕಳೆದ ಕೆಲ ವರ್ಷಗಳ ಹಿಂದೆ ಮೈಕ್ರೋಸಾಫ್ಟ್‌ಗೆ ಮಾರಾಟವಾಗಿದ್ದ ನೋಕಿಯಾ, ಮತ್ತೊಮ್ಮೆ ಅದೇ ಹೆಸರಿನಲ್ಲಿ ತಲೆ ಎತ್ತಿದ್ದು, ಹೊಸ ಹೊಸ ಸ್ಮಾರ್ಟ್‌ಪೋನುಗಳು ಸೇರಿದಂತೆ ತನ್ನ ಹಳೇ ಪೋನುಗಳಿಗೆ ಹೊಸ ಟಚ್ ನೀಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 3310 ರೀಬೂಟ್:

ನೋಕಿಯಾ 3310 ರೀಬೂಟ್:

ಫೆಬ್ರವರಿ ಕೊನೆ ವಾರ ಇಲ್ಲವೇ ಮಾರ್ಚ್‌ ಮೊದಲ ವಾರದಲ್ಲಿ ನೋಕಿಯಾ 3310 ಲಾಂಚ್ ಆಗಲಿಕದೆ ಎನ್ನಲಾಗಿದೆ. ನೋಕಿಯಾ 3310 ನೋಡಲು ಅದೇ ಮಾದರಿಯಲ್ಲಿರಲಿದ್ದು, ಫೀಚರ್ ಪೋನ್‌ ಮಾದರಿಯ ಆಯ್ಕೆಗಳನ್ನು ಹೊಂದಲಿದೆ.

ವಿಶೇಷತೆಗಳೇನು:

ವಿಶೇಷತೆಗಳೇನು:

ಸದ್ಯ ಈ ಪೋನ್ ಕಾನ್ಸೆಪ್ಟ್ ಪ್ರಕಾರ ನೋಕಿಯಾ 3310 ರೀಬೂಟ್ ಪೋನು ಹೆಡ್‌ಪೋನ್ ಜಾಕ್ ಹೊಂದಿರಲಿದ್ದು, 256K ಕಲರ್ಸ್ ಹೊಂದಿರುವ 1.5 ಇಂಚಿನ ಪರದೆ ಈ ಪೋನಿನಲ್ಲಿರಲಿದ್ದು, ಹಿಂಬಾಗದಲ್ಲಿ ಕ್ಯಾಮೆರ ಇರಲಿದೆ. FM ರೇಡಿಯೋ, 8GB ಇಂಟರ್ನಲ್ ಸ್ಪೇಸ್ ಮತ್ತು ಮೈಕ್ರೊ USB ಹಾಕಬಹುದಾಗಿದೆ.

235 ಗಂಟೆ ಬಾಳಿಕೆ ಬ್ಯಾಟರಿ:

235 ಗಂಟೆ ಬಾಳಿಕೆ ಬ್ಯಾಟರಿ:

ಈ ಮೊದಲು ಮಾರುಕಟ್ಟೆಗೆ ಬಂದಿದ್ದ ನೋಕಿಯಾ 3310 ಪೋನು ಸಹ ಬ್ಯಾಟರಿ ಬ್ಯಾಳಿಕೆಗೆ ಹೆಸರುವಾಸಿಯಾಗಿತ್ತು. ಅದೇ ಮಾದರಿಯಲ್ಲಿ ಹೊಸದಾಗಿ ಬಿಡುಗಡೆಯಾಗಲಿರುವ ಪೋನಿನಲ್ಲಿಯೂ 235 ಗಂಟೆ ಬಾಳಿಕೆ ಬರುವಂತಹ 1650mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ನೋಕಿಯಾ 3310 ಬೆಲೆ: 2500 ರೂ.

ನೋಕಿಯಾ 3310 ಬೆಲೆ: 2500 ರೂ.

ಸದ್ಯ ಮಾರುಕಟ್ಟೆಗೆ ಬರಲು ಸಿದ್ಧವಾಗಿರುವ ನೋಕಿಯಾ 3310 ರೀಬೂಟ್ ಪೋನಿನ ಬೆಲೆ ಯೂರೋಪ್ ಮಾರುಕಟ್ಟೆಯಲ್ಲಿ 4,000 ರೂ ಆಗಲಿದ್ದು, ಅದೇ ಭಾತರಕ್ಕೆ ಬಂದರೆ 2,500 ರೂ ಅಸುಪಾಸಿನಲ್ಲಿರಲಿದೆ ಎನ್ನಲಾಗಿದೆ. ಮುಂದಿನ ತಿಂಗಳು ಮಾರುಕಟ್ಟೆಗೆ ಬಂದ ಮೇಲೆ ನಿಜವಾದ ಬೆಲೆ ತಿಳಿಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
News of a Nokia 3310 reboot coming later this month spread like wildfire on the Internet, leading to a trip down memory lane for the fans of the classic phone. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot