ನೋಕಿಯಾ 3310 ಫೋನಿಗೆ 1.5 ಲಕ್ಷ..? ಯಾಕೆ..?
ಸ್ಮಾರ್ಟ್ ಫೋನ್ ಗಳನ್ನು ವಿನ್ಯಾಸ ಮಾಡುವುದರಲ್ಲಿ ನಿಪುಣತೆಯನ್ನು ಸಾಧಿಸಿದ್ದು, ಈ ಬಾರಿ ಐಷಾರಾಮಿ ಪುಟೀನ್-ಟ್ರಂಪ್ ಆವೃತ್ತಿಯನ್ನು ನಿರ್ಮಿಸಿದ್ದು, ಈ ಸ್ಮಾರ್ಟ್‌ಫೋನಿಗೆ ರೂ.1.5 ಲಕ್ಷ ರೂ. ದರವನ್ನು ನಿಗಧಿ ಮಾಡಿದೆ.
ರಷ್ಯಾ ಮೂಲದ ಮೊಬೈಲ್ ವಿನ್ಯಾಸಕ ಕಂಪನಿ ಕ್ಯಾವಿಯರ್ ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ವಿನ್ಯಾಸ ಮಾಡುವುದರಲ್ಲಿ ನಿಪುಣತೆಯನ್ನು ಸಾಧಿಸಿದ್ದು, ಈ ಬಾರಿ ಐಷಾರಾಮಿ ಪುಟೀನ್-ಟ್ರಂಪ್ ಆವೃತ್ತಿಯನ್ನು ನಿರ್ಮಿಸಿದ್ದು, ಈ ಸ್ಮಾರ್ಟ್‌ಫೋನಿಗೆ ರೂ.1.5 ಲಕ್ಷ ರೂ. ದರವನ್ನು ನಿಗಧಿ ಮಾಡಿದೆ.

ಓದಿರಿ: ಶುರುವಾಗಿದೆ ನೋಕಿಯಾ 5 ಪ್ರೀ ಬುಕಿಂಗ್: ವೊಡಾಫೋನ್ ಆಫರ್ ಸಹ ಜೊತೆಗಿದೆ..!!
ಅಮೆರಿಕಾ ಮತ್ತು ರಷ್ಯಾದ ನಾಯಕರು ಜಿ-20 ಸಮಾವೇಶದಲ್ಲಿ ಎದುರಾಗಲಿದ್ದು, ಈ ಹಿನ್ನಲೆಯಲ್ಲಿ ಕ್ಯಾವಿಯರ್ ದುಬಾರಿ ಬೆಲೆಯ ನೋಕಿಯಾ 3310 ಫೋನ್ ಅನ್ನು ಬಿಡುಗಡೆ ಮಾಡಿದೆ. ಡಾಲರ್ ಲೆಕ್ಕದಲ್ಲಿ $2468ಕ್ಕೆ ಈ ಪೋನ್ ಮಾರಾಟವಾಗುತ್ತಿದೆ.

ಟೈಟೆನಿಯಮ್ ಬಾಡಿ:
ನೂತನ ಆವೃತ್ತಿಯ ನೋಕಿಯಾ 3310 ಫೋನಿನ ಹೊರಭಾಗವನ್ನು ಮಾತ್ರ ಬದಲಾವಣೆಯನ್ನು ಮಾಡಲಾಗಿದೆ. ಟೈಟೆನಿಯಮ್ ನಿಂದ ಬಾಡಿ ಮಾಡಲಾಗಿದೆ.

ಪುಟಿನ್-ಟ್ರೆಂಪ್
ಫೋನಿ ಹಿಂಭಾಗದಲ್ಲಿ ಪುಟಿನ್-ಟ್ರೆಂಪ್ ಚಿತ್ರವನ್ನು ಹಾಕಲಾಗಿದೆ. ಅದನ್ನು ಚಿನ್ನದಲ್ಲಿ ಮಾಡಲಾಗಿದೆ ಎನ್ನಲಾಗಿದೆ.

ಹೇಗಿದೆ:
ಈ ಫೋನಿನಲ್ಲಿ 2.4 ಇಂಚಿನ ಡಿಸ್‌ಪ್ಲೇ, 2 MP ಕ್ಯಾಮೆರಾವನ್ನು ಕಾಣಬಹದಾಗಿದ್ದು, ಉತ್ತಮ ಬ್ತಾಟರಿ ಪ್ಯಾಕಪ್ ಹೊಂದಿದೆ. ಆದರೆ 4G ಸಫೋರ್ಟ್ ಮಾಡಲ್ಲ.


Click it and Unblock the Notifications