ಶುರುವಾಗಿದೆ ನೋಕಿಯಾ 5 ಪ್ರೀ ಬುಕಿಂಗ್: ವೊಡಾಫೋನ್ ಆಫರ್ ಸಹ ಜೊತೆಗಿದೆ..!!

Written By:

ನೋಕಿಯಾ ಭಾರತದಲ್ಲಿ ಲಾಂಚ್ ಮಾಡಿದ್ದ ನೋಕಿಯಾ 3 ಸ್ಮಾರ್ಟ್‌ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಇದೇ ಮಾದರಿಯಲ್ಲಿ ನೋಕಿಯಾ 5 ಸ್ಮಾರ್ಟ್‌ಫೋನಿಗೆ ಪ್ರೀ ಬುಕಿಂಗ್ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಈ ಫೋನಿನ ಕುರಿತ ಮಾಹಿತಿ ಇಲ್ಲಿದೆ.

ಶುರುವಾಗಿದೆ ನೋಕಿಯಾ 5 ಪ್ರೀ ಬುಕಿಂಗ್: ವೊಡಾಫೋನ್ ಆಫರ್ ಸಹ ಜೊತೆಗಿದೆ..!!

ಓದಿರಿ: ಜುಲೈ 21 ರಂದು ಜಿಯೋ 500 ರೂ. 4G ಫೋನ್ ಲಾಂಚ್ ಮಾತ್ರವಲ್ಲ, ಇನ್ನೊಂದು ಭರ್ಜರಿ ಆಫರ್ ಕಾದಿದೆ...!!

ನೋಕಿಯಾ 5 ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ವೊಡಾಫೋನ್ ನಿಂದ ಡೇಟಾ ಆಫರ್ ಸಹ ಲಭ್ಯವಿದ್ದು, ಬಿಡುಗಡೆಗೆ ಮುಂಚೆಯೇ ನೋಕಿಯಾ 5 ಆರ್ಭಟ ಜೋರಾಗಿದೆ. ಇನ್ನು ಇದೇ ತಿಂಗಳ 14 ರಿಂದ ನೋಕಿಯಾ 6 ಪ್ರೀ ಬುಕಿಂಗ್ ಸಹ ಆನ್‌ಲೈನಿನಲ್ಲಿ ಆರಂಭವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೊಡಾಫೋನ್ ಆಫರ್:

ವೊಡಾಫೋನ್ ಆಫರ್:

ನೋಕಿಯಾ 5 ಸ್ಮಾರ್ಟ್‌ಪೋನ್ ಕೊಳ್ಳುವವರಿಗೆ ವೊಡಾಫೋನ್ ಆಫರ್ ಘೋಷಣೆ ಮಾಡಿದ್ದು, ಮೂರು ತಿಂಗಳ ಕಾಲ ಪ್ರತಿ ತಿಂಗಳು 4GB ಡೇಟಾವನ್ನು ನೀಡಲಿದೆ.

ಮೈಕ್ ಮೈ ಟ್ರಿಪ್ ಆಫರ್:

ಮೈಕ್ ಮೈ ಟ್ರಿಪ್ ಆಫರ್:

ನೋಕಿಯಾ 5 ಸ್ಮಾರ್ಟ್‌ಪೋನ್ ಕೊಳ್ಳುವವರಿಗೆ ಮೈಕ್ ಮೈ ಟ್ರಿಪ್ ನಿಂದ ಹೊಸ ಆಫರ್ ದೊರೆಯಲಿದೆ. ಬಳಕೆದಾರಿಗೆ ಮೈಕ್ ಮೈ ಟ್ರಿಪ್. ಕಾಮ್ ನಲ್ಲಿ ರೂ.2,500 ಕಡಿತ ದೊರೆಯಲಿದೆ.

ಎಲ್ಲಿ ದೊರೆಯಲಿದೆ:

ಎಲ್ಲಿ ದೊರೆಯಲಿದೆ:

ನೋಕಿಯಾ 5 ಸ್ಮಾರ್ಟ್‌ಪೋನ್ ಗಳು ಸದ್ಯ ಡೆಲ್ಲಿ, ಮುಂಬೈ, ಬೆಂಗಳೂರು, ಚೆನ್ನೈ, ಜೈಪುರ್, ಕೊಲ್ಕತ್ತಾ, ಲಕ್ನೋ, ಇಂಡೋರ್, ಹೈದ್ರಾಬಾದ್, ಪುಣೆ, ಅಹಮದಬಾದ್, ಕಲ್ಲಿಕೋಟೆ ಗಳಲ್ಲಿ ಪ್ರೀ ಬುಕಿಂಗ್‌ ಗೆ ಲಭ್ಯವಿದೆ.

ನೋಕಿಯಾ 5 ಸ್ಮಾರ್ಟ್‌ಪೋನ್:

ನೋಕಿಯಾ 5 ಸ್ಮಾರ್ಟ್‌ಪೋನ್:

ನೋಕಿಯಾ 5 ಸ್ಮಾರ್ಟ್‌ಪೋನ್ ನಲ್ಲಿ ಆಂಡ್ರಾಯ್ಡ್ ನ್ಯಾಗಾ ಕಾಣಬಹುದಾಗಿದೆ, ಅಲ್ಲದೇ ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಅಳವಡಿಸಲಾಗಿದೆ.

2GB/ 16GB ಮೆಮೊರಿ:

2GB/ 16GB ಮೆಮೊರಿ:

ನೋಕಿಯಾ 5 ಸ್ಮಾರ್ಟ್‌ಪೋನ್ ನಲ್ಲಿ 2GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ, ಇದಲ್ಲದೇ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವು ಇದೆ.

13 MP/ 8 MP ಕ್ಯಾಮೆರಾ:

13 MP/ 8 MP ಕ್ಯಾಮೆರಾ:

ಇದಲ್ಲದೇ ನೋಕಿಯಾ 5 ಸ್ಮಾರ್ಟ್‌ಪೋನ್ ನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು LED ಫ್ಲಾಷ್ ನೊಂದಿಗೆ ಕಾಣಬಹುದಾಗಿದೆ. ಮುಂಭಾಗದಲ್ಲಿ 8MP ಕ್ಯಾಮೆರಾ ನೀಡಲಾಗಿದೆ.

ನೋಕಿಯಾ 5 ಸ್ಮಾರ್ಟ್‌ಫೋನ್ ಪ್ರತಿ ಸ್ಪರ್ಧಿಗಳು ಯಾರು..?

ನೋಕಿಯಾ 5 ಸ್ಮಾರ್ಟ್‌ಫೋನ್ ಪ್ರತಿ ಸ್ಪರ್ಧಿಗಳು ಯಾರು..?

ನೋಕಿಯಾ 5 ಸ್ಮಾರ್ಟ್‌ಪೋನ್ ಪ್ರತಿ ಸ್ಪರ್ಧಿಯಾಗಿ ಶಿಯೋಮಿ ರೆಡ್ ಮಿ ನೋಟ್ 4, ಮೊಟೊ G5, ಯು ಯುರೇಕಾ ಮತ್ತು ಒಪ್ಪೋ A57 ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಯಲ್ಲಿ ಕಾಣಬಹುದು.

ನೋಕಿಯಾ 5 ಬೆಲೆ ಎಷ್ಟು..?

ನೋಕಿಯಾ 5 ಬೆಲೆ ಎಷ್ಟು..?

ನೋಕಿಯಾ 5 ಸ್ಮಾರ್ಟ್‌ಫೋನ್ ಆಫ್ ಲೈನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ರೂ. 12,899ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ. ಇದು ಎಲ್ಲಾ ಮೊಬೈಲ್ ಗಳಿಗೆ ಸ್ಪರ್ಧೆ ನೀಡಲಿದೆ.

ಕೈಗೆ ಬರುವುದು ಎಂದು..?

ಕೈಗೆ ಬರುವುದು ಎಂದು..?

ಇಂದಿನಿಂದ ಬುಕಿಂಗ್ ಆರಂಭವಾಗಿದ್ದರೂ ಗ್ರಾಹಕರ ಕೈಗೆ ನೋಕಿಯಾ 5 ಸ್ಮಾರ್ಟ್‌ಫೋನ್ ಎಂದು ಸಿಗಲಿದೆ ಎನ್ನುವುದು ಇನ್ನು ಪ್ರಶ್ನೆಯಾಗಿ ಉಳಿದುಕೊಂಡಿದೆ. HDM ಕಂಪನಿಯೂ ಇದಕ್ಕೆ ಉತ್ತರವನ್ನು ನೀಡಿಲ್ಲ ಎನ್ನಲಾಗಿದೆ.

ನೋಕಿಯಾ 6 ಅಮೆಜಾನ್‌ನಲ್ಲಿ:

ನೋಕಿಯಾ 6 ಅಮೆಜಾನ್‌ನಲ್ಲಿ:

ನೋಕಿಯಾ 5 ಸ್ಮಾರ್ಟ್‌ಪೋನ್ ನಂತದಲ್ಲಿ ಜುಲೈ 14 ರಿಂದ ನೋಕಿಯಾ 6 ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ನೋಕಿಯಾ 5 ಬೇಡ ಎಂದವರು ನೋಕಿಯಾ 6 ಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Nokia 5 will be offline exclusive smartphones, while the high-end Nokia 6 will be available for registration on Amazon from July 14. to know more visit kannada.gizbot.com
Please Wait while comments are loading...
Opinion Poll

Social Counting