ನೋಕಿಯಾ 3310 ರಿಬೋಟ್: ಹಳೇ ಪೋನಿನ 5 ಹೊಸ ಆಯ್ಕೆಗಳು..!!
ತನ್ನ ಕ್ಲಾಸಿಕ್ ಪೋನು ನೋಕಿಯಾ 3310 ಅನ್ನು ನೋಕಿಯಾ 3310 ರಿಬೋಟ್ ಎಂಬ ಹೆಸರಿನಲ್ಲೇ ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ನೋಕಿಯಾ ಜಾಗತಿಕ ಮಟ್ಟದಲ್ಲಿ ಮತ್ತೆ ಕಂಮ್‌ಬ್ಯಾಕ್ ಮಾಡುತ್ತಿದ್ದು, ಈ ಸಂದರ್ಭದಲ್ಲಿ ನೂತನ ಸ್ಮಾರ್ಟ್‌ಪೋನುಗಳನ್ನು ವಿವಿಧ ಬೆಲೆ ಶ್ರೇಣಿಗಳಲ್ಲಿ ಬಿಡುಗಡೆ ಮಾಡುತ್ತಿದ್ದು, ಇದೇ ಸಂದರ್ಭದಲ್ಲಿ ತನ್ನ ಹಳೇಯ ಪೋನುಗಳಿಗೆ ಮರು ಜೀವವನ್ನು ನೀಡುತ್ತಿದೆ. ಹಳೇ ಪೋನುಗಳುಗಳಿಗೆ ಸ್ಮಾರ್ಟ್‌ಟಚ್ ನೀಡುತ್ತಿದೆ. ಇದೇ ಮಾದರಿಯಲ್ಲಿ ತನ್ನ ಕ್ಲಾಸಿಕ್ ಪೋನು ನೋಕಿಯಾ 3310 ಅನ್ನು ನೋಕಿಯಾ 3310 ರಿಬೋಟ್ ಎಂಬ ಹೆಸರಿನಲ್ಲೇ ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಓದಿರಿ: ಕ್ಸಿಯೋಮಿ ಹೊಸ ಪೋನು Mi Max 2: 6GB RAM ಮತ್ತು ಸ್ನಾಪ್‌ಡ್ರಾಗನ್ 660 ಪ್ರೋಸೆಸರ್
ನೋಕಿಯಾ 3310 ರಿಬೋಟ್ ಸದ್ಯ ನೋಕಿಯಾ ಬಿಡುಗಡೆ ಮಾಡಲು ಸಿದ್ಧವಾಗಿರುವ ಸ್ಮಾರ್ಟ್‌ಪೋನಿಗಳಿಗಿಂತ ಹೆಚ್ಚಿನ ಸುದ್ಧಿಯಲ್ಲಿದೆ. ಕಾರಣ ಈ ಪೋನಿನ ವಿಶೇಷತೆಗಳು. ಅದಲ್ಲದೇ ನೋಕಿಯಾ ಈ ಪೋನನನ್ನು ಹೊಸ ಮಾದರಿಯಲ್ಲಿ ಬಿಡುಗಡೆ ಮಾಡುತ್ತಿರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ, ಈ ಹಿನ್ನಲೆಯಲ್ಲಿ ಈ ಪೋನಿನ ಹೊಸ ಆಯ್ಕೆಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ನ್ಯಾನೋ/ಮೈಕ್ರೊ ಸಿಮ್ ಸ್ಲಾಟ್, ಡುಯಲ್ ಸಿಮ್ ಹಾಕಬಹುದು:
2000 ಇಸವಿಯಲ್ಲಿ ಮಾರುಕಟ್ಟೆಗೆ ಬಂದ ನೋಕಿಯಾ 3310 ಪೋನು ಕೇವಲ ಒಂದು ಸಿಮ್ ಹಾಕುವ ಅವಕಾಶವನ್ನು ಹೊಂದಿತ್ತು. ಅಲ್ಲದೇ ಮಾಮೂಲಿ ಸಿಮ್ ಹಾಕಬಹುದಾಗಿತ್ತು. ಈಗ ಹೊಸದಾಗಿ ನ್ಯಾನೋ/ಮೈಕ್ರೊ ಸಿಮ್ ಸ್ಲಾಟ್ ನೀಡಲಾಗಿದ್ದು, ಇದರೊಂದಿಗೆ ಡುಯಲ್ ಸಿಮ್ ಹಾಕಬಹುದಾಗಿದೆ.

4G ಸಪೋರ್ಟ್ ಮಾಡಲಿದ್ದು, ಜಿಯೋ ಸಿಮ್ ಹಾಕಬಹುದು:
ನೋಕಿಯಾ 3310 ಕೇಲವ GSM ಸಿಮ್ ಸಪೋರ್ಟ್ ಮಾಡುತ್ತಿತ್ತು, ಅಲ್ಲದೇ 2G ಸಪೋರ್ಟ್ ಮಾಡುತ್ತಿತ್ತು. ಆದರೆ ನೋಕಿಯಾ 3310 ರಿಬೋಟ್ ಪೋನು 4G ಸಪೋರ್ಟ್ ಮಾಡಲಿದೆ. ಜಿಯೋ ಸಿಮ್ ಅನ್ನು ಈ ಪೋನಿನಲ್ಲೂ ಬಳಸಬಹುದಾಗಿದೆ. ಅಲ್ಲದೇ ಈ ಪೋನು ವೈಫೈ ಸಪೋರ್ಟ್ ಮಾಡಲಿದೆ ಎನ್ನಲಾಗಿದೆ.

USB ಟೈಪ್ C ಚಾರ್ಜಿಂಗ್:
ನೋಕಿಯಾ 3310 ಪೋನಿ ನೋಕಿಯಾ ಪಿನ್ ಚಾರ್ಜರ್ ಸಪೋರ್ಟ್ ಮಾಡುತ್ತಿತ್ತು, ಆದರೆ ನೋಕಿಯಾ 3310 ರಿಬೋಟ್ USB Type C ಚಾರ್ಜರ್‌ಗೆ ಸಪೋರ್ಟ್ ಮಾಡಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಎಲ್ಲಾ ಸ್ಮಾರ್ಟ್‌ಪೋನುಗಳ ಚಾರ್ಚರ್ ಮೂಲಕ ಇದನ್ನು ಚಾರ್ಜ್ ಮಾಡಬಹುದಾಗಿದೆ. ಅಲ್ಲದೇ ಇದರ ಮೂಲಕ ನಿಮ್ಮ ಕಂಪ್ಯೂಟರ್‌ಗೆ ಈ ಪೋನನ್ನು ಕನೆಕ್ಟ್ ಮಾಡಬಹುದಾಗಿದೆ.

ಕಾನ್ಟೆಕ್ಟ್, ಕ್ಯಾಲೆಂಡರ್ ಸಿಂಕ್:
ಸ್ಮಾರ್ಟ್‌ಪೋನುಗಳಲ್ಲಿ ಇರುವಂತೆ ನಿಮ್ಮ ಕಾನ್ಟೆಕ್ಟ್‌ಗಳನ್ನು, ಕ್ಯಾಲೆಂಡರ್ ಗಳನ್ನು ಕೌಡ್‌ಗೆ ಸಿನ್ಕಿಂಗ್ ಮಾಡುವ ಆಯ್ಕೆ ನೋಕಿಯಾ 3310 ರಿಬೋಟ್ ಪೋನಿನಲ್ಲಿ ಇರಲಿದೆ. ಮೇಸೆಜ್‌ಗಳನ್ನು ಈ ಪೋನಿನಲ್ಲಿ ಸಿಂಕ್ ಮಾಡಬಹುದಾಗಿದೆ.

ದೀರ್ಘಕಾಲದ ಬ್ಯಾಟರಿ ಬ್ಯಾಕಪ್:
ನೋಕಿಯಾ 3310 ರಿಬೋಟ್ ಪೋನಿನಲ್ಲಿ ಉತ್ತಮ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಈ ಹಿಂದಿನ ಪೋನಿನಂತೆ ದೀರ್ಘಕಾಲದ ಬ್ಯಾಟರಿ ಬ್ಯಾಕಪ್ ಅನ್ನು ಈ ಪೋನು ನೀಡಲಿದ್ದು, ಮೂರು ದಿನಕ್ಕೂ ಹೆಚ್ಚುಕಾಲ ಬಾಳಿಕೆ ಬರುವ ಬ್ಯಾಟರಿಯನ್ನು ಇದರಲ್ಲಿ ನೀಡಲಾಗಿದೆ.


Click it and Unblock the Notifications








