ಕ್ಸಿಯೋಮಿ ಹೊಸ ಪೋನು Mi Max 2: 6GB RAM ಮತ್ತು ಸ್ನಾಪ್‌ಡ್ರಾಗನ್ 660 ಪ್ರೋಸೆಸರ್
ಕ್ಸಿಯೋಮಿ ಕಂಪನಿಯೂ ಹೊಸದಾಗಿ ಬಿಡುಗಡೆಗಳಿಸಲು ಮುಂದಾಗಿರುವ Mi Max 2 ಸ್ಮಾರ್ಟ್‌ಪೋನು ಟಾಪ್‌ಎಂಡ್ ಪೋನಿನಲ್ಲಿ ಇರುವಂತಹ ಎಲ್ಲಾ ಆಯ್ಕೆಗಳು ಇದರಲಿದೆ.
ಚೀನಾ ಮೂಲದ ಕ್ಸಿಯೋಮಿ ಮೊಬೈಲ್ ಕಂಪನಿ, ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ಪೋನನ್ನು ಪರಿಚಯಿಸಲು ಮುಂದಾಗಿದ್ದು, 6.4 ಇಂಚಿನ ಡಿಸ್‌ಪ್ಲೇ ಇದ್ದು, 6GB RAM ಮತ್ತು ಸ್ನಾಪ್‌ಡ್ರಾಗನ್ 660 ಪ್ರೋಸೆಸರ್ ಸಹ ಒಳಗೊಂಡಿದೆ ಎನ್ನಲಾಗಿದೆ. ಈ ಪೋನು ಮೇ ತಿಂಗಳಿನಲ್ಲಿ ಮಾರುಕಟ್ಟೆಗೆ ಬರಲಿದೆ.

ಓದಿರಿ: ವಿಶ್ವದ ಅತೀ ವೇಗದ SD Card ಬಿಡುಗಡೆ ಮಾಡಿದ ಸೋನಿ
ಕ್ಸಿಯೋಮಿ ಕಂಪನಿಯೂ ಹೊಸದಾಗಿ ಬಿಡುಗಡೆಗೊಳಿಸಲು ಮುಂದಾಗಿರುವ Mi Max 2 ಸ್ಮಾರ್ಟ್‌ಪೋನು ಟಾಪ್‌ಎಂಡ್ ಪೋನಿನಲ್ಲಿ ಇರುವಂತಹ ಎಲ್ಲಾ ಆಯ್ಕೆಗಳು ಇದರಲಿದೆ. ಗೇಮಿಂಗ್ ಮತ್ತು ವಿಡಿಯೋ ನೋಡುವುದಕ್ಕಾಗಿ 6.4 ಇಂಚಿನ ಡಿಸ್‌ಪ್ಲೇಯನ್ನು ನೀಡಲಾಗಿದೆ, ಇದಲ್ಲದೇ ವೇಗದ ಕಾರ್ಯ ನಿರ್ವಹಣೆಗೆ 6GB RAM ಇದರಲ್ಲಿದೆ.
ಈ ಸ್ಮಾರ್ಟ್‌ಪೋನ್ ಆಂಡ್ರಾಯ್ಡ್ 7.0ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಸ್ನಾಪ್‌ಡ್ರಾಗನ್ 660 ಪ್ರೋಸರ್‌ಅನ್ನು ಒಳಗೊಂಡಿದ್ದು, 128 ಜಿಬಿ ಇಂಟರ್ನಲ್ ಮೆಮೊರಿಯೂ ಈ ಪೋನಿನಲ್ಲಿದೆ. ಅಲ್ಲದೇ ದೀರ್ಘಕಾಲದ ಬ್ಯಾಟರಿ ಬಾಳಿಕೆಗಾಗಿ 5000mAh ಬ್ಯಾಟರಿಯು ಸಹ ಇದರಲ್ಲಿದೆ.

ಓದಿರಿ: ಫೆ.26ರಂದು ನೋಕಿಯಾ ಪೋನ್ ಬಿಡುಗಡೆ ಮಾಡುವುದನ್ನು ನಿಮ್ಮ ಸ್ಮಾರ್ಟ್‌ಪೋನಿನಲ್ಲೇ ಲೈವ್ ನೋಡಿ..!
ಸದ್ಯ ಮಾರುಕಟ್ಟೆ ಬಂದಿರುವ ಕ್ಸಿಯೋಮಿ ನೋಟ್ 4 ಹೆಚ್ಚಿನ ಸದ್ದು ಮಾಡುತ್ತಿದ್ದು, ಇದೇ ಸಂದರ್ಭದಲ್ಲಿ ನೋಟ್ 4X ಕೂಡ ಮಾರುಕಟ್ಟಗೆ ಬರಲಿದ್ದು, ಇದರ ಹಿಂದೆಯೇ Mi Max 2 ಬಿಡುಗಡೆಯಾಗಲಿದ್ದು, ಆದರೆ ಬೆಲೆ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.


Click it and Unblock the Notifications








