ಮತ್ತೆ ಬಿಡುಗಡೆ ಆಯ್ತು ನೋಕಿಯಾ 3310: 1 ತಿಂಗಳ ಬ್ಯಾಟರಿ ಬಾಳಿಕೆ, ಕ್ಯಾಮೆರಾ ಇನ್ನು ಹಲವು.!!!
ನೋಕಿಯಾ 3310 ಫೀಚರ್ ಫೋನನ್ನು ಮತ್ತೆ ಹೊಸ ರೂಪದಲ್ಲಿ ಬಿಡುಗಡೆ ಮಾಡಿದೆ.
ನೋಕಿಯಾ ನಿರೀಕ್ಷೆಯಂತೆ ತನ್ನ ಕ್ಲಾಸಿಕ್ ಪೋನುಗಳಲ್ಲಿ ಒಂದಾದ ನೋಕಿಯಾ 3310 ಫೀಚರ್ ಫೋನನ್ನು ಮತ್ತೆ ಹೊಸ ರೂಪದಲ್ಲಿ ಬಿಡುಗಡೆ ಮಾಡಿದ್ದು, ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಓದಿರಿ: 2GB RAM, 13MP ಕ್ಯಾಮೆರಾ ಹೊಂದಿರುವ ನೋಕಿಯಾ 3: ಬೆಲೆ 10,500 ರೂ.ಗಳು ಮಾತ್ರ..!!!
ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ 17 ವರ್ಷಗಳ ಬಳಿಕ ನೋಕಿಯಾ 3310 ಪರಿಚಯಗೊಳಿಸಲಾಗಿದ್ದು, ಸದ್ಯ ಈ ಪೋನಿನ ಬೆಲೆ EUR 49 ಆಗಿದ್ದು, ಭಾರತೀಯ ಕರೆಸ್ಸಿಯಲ್ಲಿ 3,500 ರೂ ಗಳಾಗಲಿದೆ. ಆದರೆ ಭಾರತದಲ್ಲಿ ಲಾಂಚ್ ಆಗುವ ವೇಳೆಯಲ್ಲಿ ಬೆಲೆ ಮತ್ತಷ್ಟು ಕಡಿಮೆಯಾಗಲಿದ್ದು, ಸುಮಾರು 2,500 ರೂ ಗಳಿಗೆ ಲಭ್ಯವಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನೋಕಿಯಾ 3310ಪೋನ್ ಹೇಗಿದೆ:
ನೋಕಿಯಾ 3310 ಪೋನು 2.4 ಇಂಚಿನ ಟಿಎಫ್‍ಟಿ (320X240) ಕಲರ್ ಡಿಸ್‌ಪ್ಲೇ ಹೊಂದಿದ್ದು, 112.8 ಮಿ ಮೀಟರ್ ದಪ್ಪ, 79.6 ಗ್ರಾಂ ತೂಕವನ್ನು ಹೊಂದಿದೆ.

ಕ್ಯಾಮೆರ ಸಹ ನೀಡಲಾಗಿದೆ:
ನೋಕಿಯಾ 3310 ಪೋನಿನಲ್ಲಿ LED ಫ್ಲಾಶ್ ಲೈಟ್‌ನೊಂಡಿದಿಗೆ 2 MP ಕ್ಯಾಮೆರಾವನ್ನು ನೀಡಲಾಗದೆ, ಮಿನಿ ಸಿಮ್ ಹಾಕಬಹುದು. 2ಜಿ ನೆಟ್‍ವರ್ಕಿನಲ್ಲಿ ಈ ಪೋನ್ ವರ್ಕ್ ಆಗಲಿದ್ದು, ನೋಕಿಯಾ ಸೀರಿಸ್ 30+ OSನಲ್ಲಿ ಕಾರ್ಯ ನಿರ್ವಹಿಸಲಿದೆ.

ಒಂದು ತಿಂಗಳ ಬ್ಯಾಟರಿ ಸ್ಟ್ಯಾಂಡ್ ಬೈ:
ನೋಕಿಯಾ 3310 ಪೋನಿನಲ್ಲಿ ತೆಗೆಯಬಹುದಾದ 1,200mAh ಬ್ಯಾಟರಿಯನ್ನು ನೀಡಲಾಗಿದ್ದು, 22 ಗಂಟೆಗಳ ಟಾಕ್ ಟೈಂ ಹೊಂದಿರುವ ಈ ಬ್ಯಾಟರಿ 1 ತಿಂಗಳ ಕಾಲ ಸ್ಟ್ಯಾಂಡ್ ಬೈ ಟೈಂ ಹೊಂದಿದೆ ಎನ್ನಲಾಗಿದೆ.

ಎಫ್‍ಎಂ ರೇಡಿಯೋ ಸಹ ನೀಡಲಾಗಿದೆ:
ನೋಕಿಯಾ 3310 ಪೋನಿನಲ್ಲಿ ಎಫ್‍ಎಂ ರೇಡಿಯೋ ನೀಡಲಾಗಿದ್ದು, ಪೋನಿನಲ್ಲಿ 16 MB ಆಂತರಿಕ ಮೆಮೊರಿ ಇದ್ದು, ಗ್ರಾಹಕರು ಮೈಕ್ರೊ SD ಕಾರ್ಡ್ ಹಾಕಿಕೊಳ್ಳುವ ಮೂಲಕ 32 ಜಿಬಿವರೆಗೆ ಮಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಮೈಕ್ರೋ USB ಚಾರ್ಜಿಂಗ್:
ನೋಕಿಯಾ 3310 ಪೋನು ಮೈಕ್ರೋ USB ಚಾರ್ಜಿಂಗ್ ಹೊಂದಿದ್ದು, ಇದನ್ನು ಕಂಪ್ಯೂಟರ್‌ಗೆ ಸಂಪರ್ಕಿಸ ಬಹುದಾಗಿದ್ದು, 3.5 ಹೆಡ್‌ಪೋನ್ ಜ್ಯಾಕ್ ನೀಡಲಾಗಿದೆ.

ಮತ್ತೆ ಸ್ನೇಕ್, ಆದರೆ ಹೊಸ ರೂಪ:
ನೋಕಿಯಾ ಪೋನುಗಳಲ್ಲಿ ಬಹಳ ಪ್ರಸಿದ್ಧವಾಗಿರುವ ಸ್ನೇಕ್ ಗೇಮ್ ಮತ್ತೆ ಹೊಸ ರೂಪ ಪಡೆದುಕೊಂಡಿದ್ದು, ನೋಕಿಯಾ 3310ನಲ್ಲಿ ರೀಲಾಂಚ್ ಆಗಿದೆ. ಮತ್ತೆ ಸ್ನೇಕ್ ಗೇಮ್‌ಗೆ ಜೀವ ಸಿಕ್ಕಿದೆ.

ವಿವಿಧ ಬಣ್ಣದಲ್ಲಿ ಲಭ್ಯ:
ಫಿನ್ಲೆಂಡ್ ಮೂಲದ ಎಚ್ ಎಂಡಿ ಗ್ಲೋಬಲ್ ಕಂಪನಿ ತಯಾರಿಸಿರುವ ನೋಕಿಯಾ 3310 ಪೋನು ನೀಲಿ, ಹಳದಿ, ಕೆಂಪು, ಬೂದು ಬಣ್ಣದಲ್ಲಿ ಬಿಡುಗಡೆಯಾಗಿದೆ.
ಪೋನಿನ ವಿಡಿಯೋ ನೋಡಿ:
ನೋಕಿಯಾ ತನ್ನ ನೂತನ ಪೋನು ನೋಕಿಯಾ 3310ದ ವಿಡಿಯೋ ಬಿಡುಗಡೆ ಮಾಡಿದ್ದು, ಇದರಲ್ಲಿ ಪೋನಿನ ವಿಷೇಶತೆಗಳನ್ನು ವಿವರಿಸಿದ್ದು, ನೀವು ನೋಡಲೇಬೇಕಾದ ವಿಡಿಯೋ ಇದಾಗಿದೆ.


Click it and Unblock the Notifications








