Subscribe to Gizbot

2GB RAM, 13MP ಕ್ಯಾಮೆರಾ ಹೊಂದಿರುವ ನೋಕಿಯಾ 3: ಬೆಲೆ 10,500 ರೂ.ಗಳು ಮಾತ್ರ..!!!

Written By:

ಫೆಬ್ರವರಿ 26ರಂದು ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ನೋಕಿಯಾ ಬಿಡುಗಡೆ ಮಾಡಲಿರುವ ಸ್ಮಾರ್ಟ್‌ಪೋನುಗಳ ಕುರಿತಂತೆ ಒಂದೊಂದೇ ಮಾಹಿತಿಗಳು ಹೊರ ಬರುತ್ತಿದ್ದು, ಈ ಬಾರಿ ನೋಕಿಯಾ ಬಿಡುಗಡೆ ಮಾಡಲು ಹೊರಟಿರುವ ಬಜೆಟ್‌ ಪೋನೊಂದರ ಮಾಹಿತಿಯೂ ಲೀಕ್ ಆಗಿದೆ.

2GB RAM, 13MP ಕ್ಯಾಮೆರಾ ಹೊಂದಿರುವ ನೋಕಿಯಾ 3: ಬೆಲೆ 10,500 ರೂ.ಗಳು ಮಾತ್ರ..!!

ಓದಿರಿ: LG X Power 2 ಸ್ಮಾರ್ಟ್‌ಪೋನು: ಆಂಡ್ರಾಯ್ಡ್ 7.0, 4,500mAh ಬ್ಯಾಟರಿ

ನೋಕಿಯಾ 3 ಹೆಸರಿನ ಸ್ಮಾರ್ಟ್‌ಪೋನು ಆರಂಭಿಕ ಬೆಲೆಗೆ ಲಭ್ಯವಿರಲಿದ್ದು, 2GB RAM, 13MP ಕ್ಯಾಮೆರಾ ಸೇರಿದಂತೆ ಹತ್ತು ಹಲವು ಗುಣವಿಶೇಷತೆಗಳನ್ನು ತನ್ನದಾಗಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ನೋಕಿಯಾ 3 ಕುರಿತ ವಿವರ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.2 ಇಂಚಿನ HD ಡಿಸ್‌ಪ್ಲೇ:

5.2 ಇಂಚಿನ HD ಡಿಸ್‌ಪ್ಲೇ:

ನೋಕಿಯಾ 3 ಸ್ಮಾರ್ಟ್‌ಪೋನಿನಲ್ಲಿ 5.2 ಇಂಚಿನ HD ಡಿಸ್‌ಪ್ಲೇ ಹೊಂದಿದ್ದು, ದೊಡ್ಡದಾಗಿ ಮತ್ತು ಉತ್ತಮ ಗುಣಮಟ್ಟವನ್ನು ಹೊಂದಿದೆ. ಇದು ಗೇಮಿಂಗ್ ಆಡಲು ಮತ್ತು ಗುಣಮಟ್ಟದ ವಿಡಿಯೋ ನೋಡಲು ಇದು ಸಹಾಯಕಾರಿಯಾಗಿದೆ.

ವೇಗದ ಕಾರ್ಯಚರಣೆಗೆ 2GB RAM:

ವೇಗದ ಕಾರ್ಯಚರಣೆಗೆ 2GB RAM:

ನೋಕಿಯಾ 3 ವೇಗದ ಕಾರ್ಯಚರಣೆಯನ್ನು ಹೊಂದಿದ್ದು, ಇದಕ್ಕಾಗಿ ಈ ಪೋನ್‌ನಲ್ಲಿ ಸ್ನಾಪ್‌ಡ್ರಾಗನ್ 425 ಪ್ರೋಸೆರ್ ಅಳವಡಿಸಲಾಗಿದೆ. ಜೊತೆಯಲ್ಲಿ 2GB RAM ಇದ್ದು, 16GB ಇಂಟರ್ನಲ್ ಮೆಮೊರಿಯನ್ನು ಒಳಗೊಂಡಿದೆ. ಇದಲ್ಲದೇ ಗುಣಮಟ್ಟದ ಗ್ರಾಫಿಕ್ಸ್ ಗಾಗಿ Adreno 308 GPU ಸಹ ಇದರಲ್ಲಿದೆ. ಮೆಮೊರಿ ಕಾರ್ಡ್‌ ಹಾಕಿಕೊಳ್ಳುವ ಮೂಲಕ ಸ್ಟೋರೆಜ್ ಹೆಚ್ಚಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಉತ್ತಮ ಫೋಟೊ ತೆಗೆಯಲು 13MP ಕ್ಯಾಮೆರಾ:

ಉತ್ತಮ ಫೋಟೊ ತೆಗೆಯಲು 13MP ಕ್ಯಾಮೆರಾ:

ನೋಕಿಯಾ 3 ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ನೀಡಲಾಗಿದ್ದು, ಇದರೊಂದಿಗೆ ಉತ್ತಮ ಸೆಲ್ಫಿಗಾಗಿ 5 MP ಕ್ಯಾಮೆರಾವನ್ನು ಅವಳಡಿಸಲಾಗಿದೆ. ಈ ಪೋನು ಆಂಡ್ರಾಯ್ಡ್ 7.0 ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಬೆಲೆ: 10,500 ರೂ.ಗಳು ಮಾತ್ರ:

ಬೆಲೆ: 10,500 ರೂ.ಗಳು ಮಾತ್ರ:

ಸದ್ಯ ದೊರೆತಿರುವ ಮಾಹಿತಿಗಳ ಪ್ರಕಾರ ನೋಕಿಯಾ ಬಿಡುಗಡೆ ಮಾಡುತ್ತಿರುವ ಈ ಹೊಸ ಬಜೆಟ್‌ ಪೋನಿನ ಬೆಲೆಯೂ ಯುರೋಪ್ ಮಾರುಕಟ್ಟೆಯಲ್ಲಿ EUR 149ಕ್ಕೆ ಮಾರಾಟವಾಗುತ್ತಿದ್ದು, ಇದನ್ನು ರೂಪಾಯಿಗೆ ಪರಿವರ್ತಿಸಿದರೆ ರೂ.10,500 ಆಗಲಿದೆ. ಭಾರತದಲ್ಲಿ ಈ ಪೋನು ಲಾಂಚ್ ಆದ ನಂತರ ಬೆಲೆ ಇನಷ್ಟು ಕಡಿಮೆಯಾಗಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
February 26 event seems to be the most anticipated event because the company is expected to showcase Nokia smartphones in the event. Nokia will showcase Nokia 3 which will be an affordable smartphone. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot