ಭಾರತದಲ್ಲಿ 'ನೋಕಿಯಾ 4.2' ಬಿಡುಗಡೆ!..ಬೆಲೆ ಎಷ್ಟು?

|

ನೋಕಿಯಾ ಕಂಪನಿಯಿಂದ ಸದ್ಯ ಯಾವುದೇ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿಲ್ಲವೆಂದು ಬಹುತೇಕ ಗ್ರಾಹಕರ ಮಾತಾಗಿತ್ತು. ಆದರೆ ಕಂಪನಿಯು ತನ್ನ ಬಹುನಿರೀಕ್ಷಿತ ನೋಕಿಯಾ 4.2 ಸ್ಮಾರ್ಟ್‌ಫೋನ್‌ ಇಂದು (ಮೇ 7) ದೇಶಿಯ ಮಾರುಕಟ್ಟೆ ಪ್ರವೇಶಿಸಿದ್ದು, ಗ್ರಾಹಕರಿಗೆ ಖುಷಿ ತಂದಿದೆ. ಬಜೆಟ್‌ ಬೆಲೆಯಲ್ಲಿ ಲಾಂಚ್ ಆಗಿರುವ ಈ ಸ್ಮಾರ್ಟ್‌ಫೋನ್‌ ಗ್ರಾಹಕರಿಗೆ ಮತ್ತಷ್ಟು ಖುಷಿಯನ್ನು ನೀಡಿದೆ.

ಹೌದು, ಕಂಪನಿಯು ತನ್ನ 'ನೋಕಿಯಾ 4.2' ಸ್ಮಾರ್ಟ್‌ಫೋನ್ ಭಾರತದಲ್ಲಿ ಇಂದು ಲಾಂಚ್‌ ಆಗಿದ್ದು, ಗೂಗಲ್‌ ಅಸಿಸ್ಟಂಟ್ ಬಟನ್ ಹಾಗೂ LED ನೋಟಿಫಕೇಶನ್‌ ಲೈಟ್‌ ಆಯ್ಕೆಗಳನ್ನು ಒಳಗೊಂಡಿದೆ. ಎರಡು ವೇರಿಯಂಟ್‌ ಆಯ್ಕೆಗಳನ್ನು ಹೊಂದಿರಲಿರುವ ಈ ಫೋನ್‌ ಬಾರ್ಸಿಲೋನಾದಲ್ಲಿ ನಡೆದಿದ್ದ 2019ರ ವರ್ಲ್ಡ್‌ ಮೊಬೈಲ್‌ ಕಾಂಗ್ರೆಸ್‌ ಮೇಳದಲ್ಲಿ ಪ್ರದರ್ಶನಗೊಂಡು ಗಮನ ಸೆಳೆದಿತ್ತು.

ಭಾರತದಲ್ಲಿ 'ನೋಕಿಯಾ 4.2' ಬಿಡುಗಡೆ!..ಬೆಲೆ ಎಷ್ಟು?

ನೋಕಿಯಾ 4.2 ಸ್ಮಾರ್ಟ್‌ಫೋನ್‌ 3GB RAM ಆಯ್ಕೆಯೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ 400GB ವಿಸ್ತರಿಸುವ ಅವಕಾಶವಿರಲಿದೆ. ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 439 SoC ಪ್ರೊಸೆಸರ್ ಜೊತೆಗೆ ಅಂಡ್ರಾಯ್ಡ್‌ 9.0 ಪೈ ಆಪರೇಟಿಂಗ್ ಸಿಸ್ಟಮ್ ಇದರಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಾದರೇ ನೋಕಿಯಾ 4.2 ಸ್ಮಾರ್ಟ್‌ಫೋನ್‌ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸೈನ್‌

ಡಿಸೈನ್‌

ನೋಕಿಯಾ 4.2 ಸ್ಮಾರ್ಟ್‌ಫೋನ್ ಆಕರ್ಷಕ ಡಿಸೈನ್‌ನಲ್ಲಿ ಕಂಗೊಳಿಸಲಿದ್ದು, 2.5D ಕರ್ವ್‌ ಗ್ಲಾಸ್‌ ರಕ್ಷಣೆಯನ್ನು ಪಡೆದಿದೆ. ಫೋನಿನ ಡಿಸ್‌ಪ್ಲೇಯು ಕಡಿಮೆ ಅಂಚಿನಿಂದ ಕೂಡಿದ್ದು, ಹಿಂಬದಿಯಲ್ಲಿ ಕ್ಯಾಮೆರಾ ಮತ್ತು ರೇರ್‌ ಫಿಂಗರ್‌ ಸೆನ್ಸಾರ್‌ ಆಯ್ಕೆಯನ್ನು ಹೊಂದಿರಲಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ನೋಕಿಯಾ 4.2 ಸ್ಮಾರ್ಟ್‌ಫೋನ್ 720x1520 ಸಾಮರ್ಥ್ಯದ ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 5.71 ಇಂಚಿನ ಹೆಚ್‌ಡಿ ಪ್ಲಸ್‌ ಹಾಗೂ TFT ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಫೋನಿನ ಡಿಸ್‌ಪ್ಲೇಯ ಅನುಪಾತವು 19:9 ಆಗಿದೆ. ತನ್ನ ವರ್ಗದಲ್ಲಿಯೇ ಅತ್ಯುತ್ತಮ ಡಿಸ್‌ಫ್ಲೇ ಇದಾಗಿದೆ.

ஜியோ, வோடபோன்,ஏர்டெலின் அசரவைக்கும் ரீசார்ஜ் திட்டம் தெரியுமா?

ಪ್ರೊಸೆಸರ್‌

ಪ್ರೊಸೆಸರ್‌

ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 439 SoC ಪ್ರೊಸೆಸರ್ ಈ ಸ್ಮಾರ್ಟ್‌ಫೋನಿನಲ್ಲಿ ವೇಗದ ಕಾರ್ಯನಿರ್ವಹಿಸಲಿದೆ ಇದರೊಂದಿಗೆ ಅಂಡ್ರಾಯ್ಡ್‌ 9.0 ಪೈ ಆಪರೇಟಿಂಗ್ ಸಿಸ್ಟಮ್ ಮಲ್ಟಿಟಾಸ್ಕ್‌ ಕೆಲಸಗಳಿಗೆ ಬೆಂಬಲ ನೀಡಲಿದೆ. ಗೇಮಿಂಗ್‌ಗೆ ಪೂರ್ಕವಾಗಿ ಪ್ರೊಸೆಸರ್‌ ಬಲ ನೀಡಲಿದೆ.

ಮೆಮೊರಿ

ಮೆಮೊರಿ

ನೋಕಿಯಾ 4.2 ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ ಆಯ್ಕೆಗಳಲ್ಲಿ ಲಾಂಚ್ ಆಗಿದ್ದು, ಅವು ಕ್ರಮವಾಗಿ 2GB ಮತ್ತು 3GB RAM ಸಾಮರ್ಥ್ಯದಲ್ಲಿರಲಿವೆ. 32GB ಆಂತರಿಕ ಸಂಗ್ರಹದೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು 400GB ವರೆಗೂ ವಿಸ್ತರಿಸುವ ಅವಕಾಶ ನೀಡಲಾಗುತ್ತದೆ.

ಕ್ಯಾಮೆರಾ

ಕ್ಯಾಮೆರಾ

ನೋಕಿಯಾ 4.2 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರೇರ್‌ ಕ್ಯಾಮೆರಾಗಳನ್ನು ಹೊಂದಿದ್ದು, ಪ್ರಮುಖ ಕ್ಯಾಮೆರಾವು 13 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ಹಾಗೇ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾವು 8ಮೆಗಾಪಿಕ್ಸಲ್‌ ಸಾಮರ್ಥ್ಯದಲ್ಲಿದೆ.

ಬ್ಯಾಟರಿ

ಬ್ಯಾಟರಿ

3,000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಅತ್ಯುತ್ತಮ ಬ್ಯಾಕ್‌ಅಪ್‌ ಒದಗಿಸಲಿದೆ. ಹಾಗೇ ಇದರೊಂದಿಗೆ ಉತ್ತಮ ಚಾರ್ಜಿಂಗ್ ಬೆಂಬಲ ನೀಡುವ ಚಾರ್ಜರ್‌ ಒದಗಿಸಿದೆ. ಇನ್ನು ಬ್ಲೂಟೂತ್‌ v4.2, ಸೇರಿದಂತೆ GPS, NFC, Micro-USB ಆಯ್ಕೆಗಳು ಸಹ ಇವೆ.

ಬೆಲೆ

ಬೆಲೆ

ಗ್ರಾಹಕರಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸಿರುವ ನೋಕಿಯಾ 4.2 ಸ್ಮಾರ್ಟ್‌ಫೋನ್‌ ಇಂದು ಭಾರತದಲ್ಲಿ ಲಾಂಚ್‌ ಆಗಿದ್ದು, ಇದೊಂದು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಆಗಿದೆ. 3GB RAM ಬೆಲೆಯು 10,990ರೂ.ಗಳು ಆಗಿದೆ.

ಇದನ್ನೂ ಓದಿರಿ : ಬರಲಿದೆ ಆಪಲ್‌ ಹೊಸ iOS 13 OS ; ಕಾಣಲಿದ್ದಿರಿ ಅಚ್ಚರಿಯ ಫೀಚರ್ಸ್‌!ಇದನ್ನೂ ಓದಿರಿ : ಬರಲಿದೆ ಆಪಲ್‌ ಹೊಸ iOS 13 OS ; ಕಾಣಲಿದ್ದಿರಿ ಅಚ್ಚರಿಯ ಫೀಚರ್ಸ್‌!

Best Mobiles in India

English summary
Nokia 4.2 Set to Launch in India Today: Expected Price, Specifications.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X