Subscribe to Gizbot

ಭಾರತೀಯ ಗ್ರಾಹಕರಿಗೆ ನೋಕಿಯಾದಿಂದ ಸ್ವಾತಂತ್ರ್ಯ ದಿನಾಚರಣೆಗೆ ಭರ್ಜರಿ ಗಿಫ್ಟ್..!!!

Written By:

ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ ಸ್ಮಾರ್ಟ್‌ಫೋನ್ ಗಳು ಬಿಡುಗಡೆಯಾಗುವುದನ್ನೇ ಕಾಯುತ್ತಿರುವ ಮಂದಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ನೋಕಿಯಾ 3 ಸ್ಮಾರ್ಟ್‌ಫೋನಿಗೆ ಭಾರಿ ಡಿಮಾಂಡ್ ಆಗಿದ್ದು, ಇದೇ ಬೆನ್ನಲ್ಲಿ ಇನ್ನುಳಿದ ಎರಡು ಸ್ಮಾರ್ಟ್‌ಫೋನ್ ಗಳು ಆಗಸ್ಟ್ ನಲ್ಲಿ ನಿಮ್ಮ ಕೈ ಸೇರಲಿದೆ.

ಭಾರತೀಯ ಗ್ರಾಹಕರಿಗೆ ನೋಕಿಯಾದಿಂದ ಸ್ವಾತಂತ್ರ್ಯ ದಿನಾಚರಣೆಗೆ ಭರ್ಜರಿ ಗಿಫ್ಟ್..!!!

ಓದಿರಿ: ಎಚ್ಚರ.!! ವಾಟ್ಸ್ಆಪ್ ನಲ್ಲಿ GST ಕುರಿತಂತೆ ತಪ್ಪು ಸಂದೇಶ: ಅಪ್ಪಿ-ತಪ್ಪಿಯೂ ಶೇರ್ ಮಾಡಬೇಡಿ..!!

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಈಗಾಗಲೇ ಆಫ್ ಲೈನ್ ಮಾರುಕಟ್ಟೆಯಲ್ಲಿ ಬುಕಿಂಗ್ ಆಗುತ್ತಿರುವ ನೋಕಿಯಾ 5 ಮತ್ತು ಕೆಲವೇ ದಿನಗಲ್ಲಿ ಆನ್‌ಲೈನಿನಲ್ಲಿ ಬುಕಿಂಗ್ ಪ್ರಾರಂಭವಾಗಲಿರುವ ನೋಕಿಯಾ 6 ಸ್ಮಾರ್ಟ್‌ಫೋನ್ ಗಳು ಆಗಸ್ಟ್ ನಲ್ಲಿ ಅಂದರೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗ್ರಾಹಕರಿಗೆ ಲಭ್ಯವಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ವಾತಂತ್ರ್ಯ ದಿನಾಚರಣೆಗೆ ನೋಕಿಯಾ 6:

ಸ್ವಾತಂತ್ರ್ಯ ದಿನಾಚರಣೆಗೆ ನೋಕಿಯಾ 6:

ಅಮೆಜಾನ್ ನಲ್ಲಿ ಮಾತ್ರವೇ ಜುಲೈ 14 ರಿಂದ ನೋಕಿಯಾ 6 ಪ್ರೀ ಬುಕಿಂಗ್ ಆರಂಭವಾಗಲಿದ್ದು, ಈ ಫೋನ್ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಗ್ರಾಹಕರಿಗೆ ದೊರೆಯಲಿದೆ. ನೋಕಿಯಾ ಸ್ವಾತಂತ್ರ್ಯ ದಿನಾಚರಣೆಯ ಗಿಫ್ಟ್ ಆಗಿ ಈ ಫೋನ್ ಅನ್ನು ನೀಡಲಿದೆ.

ಭಾರತದಲ್ಲೇ ತಯಾರಾಗಲಿದೆ ನೋಕಿಯಾ ಫೋನ್:

ಭಾರತದಲ್ಲೇ ತಯಾರಾಗಲಿದೆ ನೋಕಿಯಾ ಫೋನ್:

ಮೇಕ್ ಇನ್ ಇಂಡಿಯಾ ಅಂಗವಾಗಿ ಭಾರತದಲ್ಲಿಯೇ ನೋಕಿಯಾ ಸ್ಮಾರ್ಟ್‌ಪೋನ್ ಗಳನ್ನು ತಯಾರಿಸಲು HDM ಕಂಪನಿ ನಿರ್ಧರಿಸಿದ್ದು, ಮುಂದಿನ ವಾರದಿಂದ ಭಾರದಲ್ಲಿಯೇ ನೋಕಿಯಾ 6 ಸ್ಮಾರ್ಟ್‌ಫೋನ್ ತಯಾರಿಕೆಯೂ ಆರಂಭವಾಗಲಿದೆ.

ಮತ್ತಷ್ಟು ನೋಕಿಯಾ 3 ಉತ್ಪಾದನೆ ಹೆಚ್ಚಲಿದೆ:

ಮತ್ತಷ್ಟು ನೋಕಿಯಾ 3 ಉತ್ಪಾದನೆ ಹೆಚ್ಚಲಿದೆ:

ಈಗಾಗಲೇ ಮಾರುಕಟ್ಟೆಯಲ್ಲಿ ನೋಕಿಯಾ 3 ಬೇಡಿಕೆಯೂ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ನೋಕಿಯಾ ಸ್ಮಾರ್ಟ್‌ಫೋನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯನ್ನು ಮಾಡಲಾಗುವುದು ಎಂದು HMD ಗ್ಲೋಬಲ್ ಸಂಸ್ಥೆಯೂ ತಿಳಿಸಿದೆ.

ಆಗಸ್ಟ್ ಮೊದಲ ವಾರದಲ್ಲಿ ನೋಕಿಯಾ 5

ಆಗಸ್ಟ್ ಮೊದಲ ವಾರದಲ್ಲಿ ನೋಕಿಯಾ 5

ಈಗಾಗಲೇ ಪ್ರೀ ಬುಕಿಂಗ್ ಆರಂಭವಾಗಿರುವ ನೋಕಿಯಾ 5 ಸ್ಮಾರ್ಟ್ ಫೋನ್ ಆಗಸ್ಟ್ ಮೊದಲ ವಾರದಲ್ಲಿ ಗ್ರಾಹಕರಿಗೆ ಲಭ್ಯವಿರಲಿದೆ ಎನ್ನಲಾಗಿದೆ. ಈಗಾಗಲೇ ನೋಕಿಯಾ 5 ಉತ್ಪಾದನೆ ಆರಂಭವಾಗಿದ್ದು, ಶೀಘ್ರವೇ ಗ್ರಾಹಕರ ಕೈ ಸೇರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The statement also reveals that Nokia 5 that went on pre-booking in India on July 7 will be available only by mid-August. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot