Subscribe to Gizbot

ಆನ್‌ಲೈನಿನಲ್ಲಿಯೂ ನೋಕಿಯಾ 5 ಲಭ್ಯ: ಎಲ್ಲಿ? ಬೆಲೆ ಎಷ್ಟು?

Written By:

ಆಫ್‌ಲೈನ್ ಮಾರುಕಟ್ಟೆಗೆ ಮಾತ್ರವೇ ಬಿಡುಗಡೆಯಾಗಿದ್ದ ನೋಕಿಯಾ 5 ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಆನ್‌ಲೈನ್ ಮಾರುಕಟ್ಟೆಯಲ್ಲಿಯೂ ಲಭ್ಯವಿದೆ. ನೋಕಿಯಾ 3 ಮತ್ತು ನೋಕಿಯಾ 5 ಸ್ಮಾರ್ಟ್‌ಫೋನ್‌ಗಳು ಆಫ್‌ಲೈನ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆಂದೆ ಬಿಡುಗಡೆ ಮಾಡಲಾಗಿತ್ತು.

ಆನ್‌ಲೈನಿನಲ್ಲಿಯೂ ನೋಕಿಯಾ 5 ಲಭ್ಯ: ಎಲ್ಲಿ? ಬೆಲೆ ಎಷ್ಟು?

ಓದಿರಿ: ಆಗಸ್ಟ್ 21ಕ್ಕೆ ರೆಡ್‌ಮಿ ನೋಟ್ 5A ಬಿಡುಗಡೆ: ವಿಶೇಷತೆ ಕೇಳಬೇಡಿ, ಕೇಳಿದ್ರೆ ಖರೀದಿಸುವುದು ಗ್ಯಾರೆಂಟಿ.!

ಆಗಸ್ಟ್ 15 ರಂದು ಆಫ್‌ಲೈನ್ ಮಾರುಕಟ್ಟೆಯನ್ನು ಪ್ರವೇಶಿಸಿದ ನೋಕಿಯಾ 5 ಸ್ಮಾರ್ಟ್‌ಫೋನಿಗೆ ಜೂನ್ ತಿಂಗಳಿನಿಂದಲೇ ಬುಕಿಂಗ್ ಆರಂಭವಾಗಿತ್ತು. ಆಫ್‌ಲೈನ್‌ ಮಾರುಕಟ್ಟೆಯಲ್ಲಿ ಫೋನ್ ದೊರೆಯಲಿಲ್ಲವಾದರೆ ನೀವು ಸದ್ಯ ಆನ್‌ಲೈನಿನಲ್ಲಿಯೂ ಬುಕ್ ಮಾಡಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟಾಟಾ ಕ್ಲಿಕ್ ಮತ್ತು ಕ್ರೋಮಾ ವೆಬ್ ಸೈಟ್‌:

ಟಾಟಾ ಕ್ಲಿಕ್ ಮತ್ತು ಕ್ರೋಮಾ ವೆಬ್ ಸೈಟ್‌:

ಈ ಹಿಂದೆ ಆಫ್‌ಲೈನ್ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿದ್ದ ನೋಕಿಯಾ 3 ಸ್ಮಾರ್ಟ್‌ಫೋನ್ ಅನ್ನು ಆನ್‌ಲೈನಿನಲ್ಲಿ ಮಾರಾಟ ಮಾಡಿದ್ದ ಕ್ರೋಮಾ ಈ ಬಾರಿ ನೋಕಿಯಾ 5 ಸ್ಮಾರ್ಟ್‌ಫೊನ್ ಅನ್ನು ಆನ್‌ಲೈನಿನಲ್ಲಿ ಮಾರಾಟಕ್ಕೆ ಇಟ್ಟಿದೆ, ಇದರೊಂದಿಗೆ ಟಾಟಾ ಕ್ಲಿಕ್ ಸೈಟಿನಲ್ಲಿಯೂ ಈ ಫೋನ್ ಮಾರಾಟಕ್ಕಿದೆ.

ನೋಕಿಯಾ 5 ಬೆಲೆ ?

ನೋಕಿಯಾ 5 ಬೆಲೆ ?

ನೋಕಿಯಾ 5 ಫೋನಿನ ಬೆಲೆಯೂ ರೂ. 14,199 ಆಗಿದ್ದು, ವೆಬ್‌ಸೈಟಿನಲ್ಲಿ ಆಫರ್ ನಲ್ಲಿ ರೂ. 12,499ಕ್ಕೆ ದೊರೆಯುತ್ತಿದೆ. ಎನ್ನಲಾಗಿದೆ. ಇಲ್ಲಿ ನೀವು ಫೋನ್ ಬುಕ್ ಮಾಡಿದರೆ ಮೂರು ನಾಲ್ಕು ದಿನದಲ್ಲಿ ನಿಮ್ಮ ಮನೆ ಬಾಗಿಲಿಗೆ ಫೋನ್ ಬರಲಿದೆ.

ನೋಕಿಯಾ 5 ವಿಶೇಷತೆ:

ನೋಕಿಯಾ 5 ವಿಶೇಷತೆ:

ನೋಕಿಯಾ 5 ಸ್ಮಾರ್ಟ್‌ಪೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್‌ನೊಂದಿಗೆ 5.2 ಇಂಚಿನ HD ಡಿಸ್‌ಪ್ಲೇ ಅವಳಡಿಸಲಾಗಿದ್ದು, ನೂತನ ಆಂಡ್ರಾಯ್ಡ್ ನ್ಯಾಗಾದಲ್ಲಿ ಈ ಫೋನ್ ಕಾರ್ಯನಿರ್ವಹಿಸಿಸಲಿದೆ. ಸ್ನಾಪ್ ಡ್ರಾಗನ್ 430 ಪ್ರೋಸೆಸರ್, 2 GB RAM ಹಾಗೂ 16 GB ಆಂತರಿಕ ಮೆಮೊರಿ ಕಾಣಬಹುದಾಗಿದೆ.

ನೋಕಿಯಾ 5 ನಲ್ಲಿದೆ ಉತ್ತಮ ಕ್ಯಾಮರಾ:

ನೋಕಿಯಾ 5 ನಲ್ಲಿದೆ ಉತ್ತಮ ಕ್ಯಾಮರಾ:

ಈ ಪೋನಿನಲ್ಲಿ ಮೈಕ್ರೋ SD ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ ನೀಡಲಾಗಿದ್ದು, ಹಿಂಭಾಗದಲ್ಲಿ 13 MP ಕ್ಯಾಮೆರಾ, ಮುಂಭಾಗದಲ್ಲಿ 5 MP ಕ್ಯಾಮೆರಾ ಇದೆ. 3000 mAh ಬ್ಯಾಟರಿ ಇದ್ದು, 4G ಸಪೋರ್ಟ್ ಮಾಡಲಿದೆ.

ಆಗಸ್ಟ್ 23ಕ್ಕೆ ನೋಕಿಯಾ 6 ಬಿಡುಗಡೆ:

ಆಗಸ್ಟ್ 23ಕ್ಕೆ ನೋಕಿಯಾ 6 ಬಿಡುಗಡೆ:

ಇದೇ ತಿಂಗಳ 23 ರಂದು ನೋಕಿಯಾ 6 ಲಾಂಚ್ ಆಗಲಿದೆ ಎನ್ನಲಾಗಿದೆ. ಆಮೆಜಾನ್ ನಲ್ಲಿ ಈ ಪೋನ್ ದೊರೆಯಲಿದ್ದು, ಇದು ಸದ್ಯದ ನೋಕಿಯಾದ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Nokia 5, HMD’s take at an offline centric smartphone, is now available online as well. The Nokia 5 was initially launched alongside the entry-level Nokia 3 back in June, and both were the company’s offline exclusive models. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot