Subscribe to Gizbot

ಆಗಸ್ಟ್ 21ಕ್ಕೆ ರೆಡ್‌ಮಿ ನೋಟ್ 5A ಬಿಡುಗಡೆ: ವಿಶೇಷತೆ ಕೇಳಬೇಡಿ, ಕೇಳಿದ್ರೆ ಖರೀದಿಸುವುದು ಗ್ಯಾರೆಂಟಿ.!

Written By:

ಭಾರತೀಯ ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿರುವ ಶಿಯೋಮಿ ಕಂಪನಿ ಈ ಬಾರಿ ಮತ್ತೊಂದು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಆಗಸ್ಟ್ 21ಕ್ಕೆ ರೆಡ್‌ಮಿ ನೋಟ್ 5A ಬಿಡುಗಡೆ: ವಿಶೇಷತೆ ಕೇಳಬೇಡಿ,

ಓದಿರಿ: SMS ಮೂಲಕ ಜಿಯೋ ಫೋನ್ ಬುಕ್ ಮಾಡುವುದು ಹೇಗೆ..?

ಮಾರುಕಟ್ಟೆಯಲ್ಲಿ ರೆಡ್‌ಮಿ 4A ಸ್ಮಾರ್ಟ್‌ಫೋನ್ ಹೆಚ್ಚಿನ ಸದ್ದು ಮಾಡಿತ್ತು. ಇದೇ ಮಾದರಿಯಲ್ಲಿ ಈ ಬಾರಿ ಶಿಯೋಮಿ ರೆಡ್‌ಮಿ ನೋಟ್ 5A ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಅದುವೇ ಆಗಸ್ಟ್ 21 ರಂದು ಚೀನಾದಲ್ಲಿ ಬಿಡುಗಡೆ ಮಾಡಲಿದ್ದು, ಭಾರತದಲ್ಲಿಯೂ ಶೀಘ್ರವೇ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.5 ಇಂಚಿನ ಡಿಸ್‌ಪ್ಲೇ:

5.5 ಇಂಚಿನ ಡಿಸ್‌ಪ್ಲೇ:

ರೆಡ್‌ಮಿ ನೋಟ್ 5A ಸ್ಮಾರ್ಟ್‌ಫೋನಿನಲ್ಲಿ 5.5 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು HD ಗುಣಮಟ್ಟವನ್ನು ಹೊಂದಿದೆ. ಇದು ವಿಡಿಯೋ ನೋಡಲು ಮತ್ತು ಗೇಮ್ ಆಡಲು ಹೇಳಿ ಮಾಡಿಸಿದಂತೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ರೆಡ್‌ಮಿ ನೋಟ್ 5A ಸ್ಮಾರ್ಟ್‌ಫೋನಿನಲ್ಲಿ 1.4 GHz ವೇಗದ ಕ್ವಾಡ್ ಕೋರ್ ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಅಲ್ಲದೇ 2GB RAM ಅನ್ನು ನೀಡಲಾಗಿದೆ. 16GB ಇಂಟರ್ನಲ್ ಮೆಮೊರಿಯನ್ನು ನಿಡಿದ್ದು, ಜೊತೆಗೆ 32 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

13 MP/ 5 MP ಕ್ಯಾಮೆರಾ:

13 MP/ 5 MP ಕ್ಯಾಮೆರಾ:

ಇದಲ್ಲದೇ ಈ ಫೋನಿನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ನೀಡಲಾಗಿದ್ದು, ಜೊತೆಗೆ LED ಫ್ಲಾಷ್ ಅನ್ನು ನೀಡಲಾಗಿದೆ. ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಕಾಣಬಹುದು.

ಆಂಡ್ರಾಯ್ಡ್ ನ್ಯಾಗಾ:

ಆಂಡ್ರಾಯ್ಡ್ ನ್ಯಾಗಾ:

ರೆಡ್‌ಮಿ ನೋಟ್ 5A ಸ್ಮಾರ್ಟ್‌ಫೋನಿನಲ್ಲಿ ಆಂಡ್ರಾಯ್ಡ್ ನ್ಯಾಗಾ 7.1.1 ಅನ್ನು ಕಾಣಬಹುದಾಗಿದೆ. ಇದಲ್ಲದೇ 3000mAh ಬ್ಯಾಟರಿಯನ್ನು ಕಾಣಬಹುದಾಗಿದೆ. 4G LoVTE ಸಫೋರ್ಟ್ ಮಾಡಲಿದೆ.

ಬೆಲೆ:

ಬೆಲೆ:

ಈಗಾಗಲೇ 4A ಸ್ಮಾರ್ಟ್‌ಫೋನ್ 5,999ಕ್ಕೆ ಮಾರಾಟವಾಗಿತ್ತು. ಈ ಹೊಸ ಸ್ಮಾರ್ಟ್‌ಫೋನ್ ಸಹ ಇದೇ ಬೆಲೆಗೆ ದೊರೆಯಲಿದೆ ಎನ್ನುವ ಮಾತುಗಳು ಕೇಳಿಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ನೋಟಿಸ್ ನೀಡಿದೆ ಕೇಂದ್ರ ಸರಕಾರ: ಕಾರಣ ಕೇಳಿದ್ರೆ ಶಾಕ್ ಆಗ್ತಿರಾ..!!

English summary
the upcoming Redmi Note 5A is expected to sport a 5.5-inch display and with HD display and 720 x 1280 pixel resolution. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot