Subscribe to Gizbot

ಚಾರ್ಜ್‌ಗೆ ಹಾಕಿ ಫೋನಿನಲ್ಲಿ ಮಾತನಾಡುವ ಮುನ್ನ ಎಚ್ಚರ: ನೋಕಿಯಾ ಫೋನ್ ಬ್ಲಾಸ್ಟ್, ಯುವತಿ ಸಾವು..!

Written By:

ಮೊಬೈಲ್ ಫೋನ್ ಚಾರ್ಜ್‌ಗೆ ಹಾಕಿದ್ದ ಸಂದರ್ಭದಲ್ಲಿ ಕರೆ ಸ್ವೀಕರಿಸಿ ಮಾತನಾಡುತ್ತಿದ್ದ 18 ವರ್ಷದ ಯುವತಿಯೊಬ್ಬಳು ಮೊಬೈಲ್ ಬ್ಲಾಸ್ಟ್ ಆಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಒಡಿಶಾ ರಾಜ್ಯದಲ್ಲಿ ಸಂಭವಿಸಿದೆ. ಘಟನೆಯಲ್ಲಿ ನೋಕಿಯಾ ಈ ಹಿಂದೆ ಬಿಡುಗಡೆ ಮಾಡಿದ್ದ ಹಳೇಯ ಮಾಡಲ್ ನೊಕಿಯಾ 5233 ಫೋನ್ ಸ್ಫೋಟಗೊಂಡಿದೆ ಎನ್ನಲಾಗಿದೆ.

 ನೋಕಿಯಾ ಫೋನ್ ಬ್ಲಾಸ್ಟ್, ಯುವತಿ ಸಾವು..!

ಈ ಘಟನೆ ಕುರಿತು ಆಂಗ್ಲ ಮಾಧ್ಯಮಗಳು ವರದಿ ಮಾಡಿದ್ದು, ಫೋನನ್ನು ಚಾರ್ಜ್​ ಹಾಕಿರುವ ಸಂದರ್ಭದಲ್ಲಿಯೇ ಕರೆ ಸ್ವೀಕರಿಸಿ ಮಾತನಾಡುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಸ್ಫೋಟದ ತೀವ್ರತೆಗೆ ಆಕೆಯ ಕೈ, ಕಾಲು ಮತ್ತು ಎದೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಮುನ್ನೇ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಫೋನು ಸ್ಫೋಟಗೊಳ್ಳುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಬಾರಿ ನೋಕಿಯಾ ಫೋನ್ ಬ್ಲಾಸ್ಟ್ ಆಗಿದ್ದು, ಯುವತಿಯೊಬ್ಬಳ ಬಲಿ ಪಡೆದುಕೊಂಡಿದೆ. ಈ ಹಿಂದೆ ಫೋನ್ ಸ್ಪೋಟಗೊಂಡು ಗಂಭೀರವಾಗಿ ಗಾಯಗೊಳ್ಳುವ ಪ್ರಕರಣಗಳು ವರದಿಯಾಗುತಿತ್ತು, ಆದರೆ ಇದೆ ಮೊದಲ ಬಾರಿಗೆ ಮೊಬೈಲ್‌ ಬ್ಲಾಸ್ಟ್ ಆಗಿ ಯುವತಿಯೊಬ್ಬಳು ಪ್ರಾಣ ಬಿಟ್ಟಿದ್ದಾಳೆ.

ಓದಿರಿ: ಐಫೋನ್ X ಅಲ್ಲ, ಟ್ರೆಂಡ್ ಬದಲಾಯಿಸುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್: 19:9 ಡಿಸ್‌ಪ್ಲೇ, ಇನ್‌-ಡಿಸ್‌ಪ್ಲೇ ಸ್ಕ್ಯಾನರ್.!

ಈ ಘಟನೆ ಕುರಿತು ಪ್ರತಿಕ್ರಿಯೆಯನ್ನು ನೀಡಿರುವ ಹೊಸದಾಗಿ ಲಾಂಚ್ ಆದ ನೊಕಿಯಾ ಫೋನುಗಳನ್ನು ನಿರ್ಮಾಣ ಮಾಡುತ್ತಿರುವ HMD ಗ್ಲೋಬಲ್ ಸಂಸ್ಥೆ, ಸ್ಫೋಟಗೊಂಡಿರುವ ನೊಕಿಯಾ 5233 ಫೋನ್ ಅನ್ನು ತಾವು ನಿರ್ಮಿಸಿರುವುದಲ್ಲ ಎಂದು ಸ್ಪಷ್ಟಪಡಿಸಿದೆ.

HMD ಗ್ಲೋಬಲ್ ಸಂಸ್ಥೆ 2017ರಲ್ಲಿ ನೊಕಿಯಾ ಫೋನ್‌ಗಳನ್ನು ರೀಲಾಂಚ್ ಮಾಡಿದ್ದು, ಈಗಿನ ಹೊಸ ಫೋನುಗಳನ್ನು ಮಾತ್ರವೇ ಮಾರಾಟ ಮಾಡುತ್ತಿದೆ. ದುರಂತಕ್ಕೀಡಾದ ನೊಕಿಯಾ 5233 ಫೋನು ಹಳೆಯದಾಗಿದ್ದು, ಸದ್ಯ ಇದು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಎನ್ನಲಾಗಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ಈ ಟಚ್ ಸ್ಕ್ರಿನ್ ಫೋನ್ ಸಾಕಷ್ಟು ಸದ್ದು ಮಾಡಿತ್ತು.

English summary
Nokia 5233 Reportedly Explodes on Call. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot