Home
ಮೊಬೈಲ್

ಐಫೋನ್ X ಅಲ್ಲ, ಟ್ರೆಂಡ್ ಬದಲಾಯಿಸುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್: 19:9 ಡಿಸ್‌ಪ್ಲೇ, ಇನ್‌-ಡಿಸ್‌ಪ್ಲೇ ಸ್ಕ್ಯಾನರ್.!

By Srinidhi

ಸದ್ಯ ಮಾರುಕಟ್ಟೆಯ ಟ್ರೆಂಡ್ ಆಗಿರುವ ಫುಲ್‌ ಸ್ಕ್ರಿನ್ ಡಿಸ್‌ಪ್ಲೇ ವಿನ್ಯಾಸವನ್ನು ಮೀರಿಸುವಂತಹ ಸ್ಮಾರ್ಟ್‌ಫೋನ್ ಅನ್ನು ವಿವೋ ಮಾರುಕಟ್ಟೆಗೆ ಪರಿಚಯ ಮಾಡಲು ಮುಂದಾಗಿದೆ. 18:9 ಅನುಪಾತ ಡಿಸ್‌ಪ್ಲೇ ವಿನ್ಯಾಸವು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಹುಟ್ಟಿಹಾಕುತ್ತಿರುವ ಸಂದರ್ಭದಲ್ಲಿಯೇ ಇದನ್ನು ಮೀರಿಸುವಂತೆ 19:9 ಅನುಪಾತದ ಡಿಸ್‌ಪ್ಲೇ ಇರುವ ಸ್ಮಾರ್ಟ್‌ಫೋನ್ 'ವಿವೋ X21' ಮಾರುಕಟ್ಟೆಗೆ ಕಾಲಿಡಲು ಸಿದ್ದವಾಗಿದೆ. ಮುಂಭಾಗದಲ್ಲಿ ಐಫೋನ್ X ಕಾಪಿ ಮಾಡಿದ ಮಾದರಿಯಲ್ಲಿ ಕಾಣಿಸುವ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಟ್ರೆಂಡ್ ಅನ್ನು ಬದಲಾಯಿಸಲಿದೆ ಎಂಬ ಮಾತು ಕೇಳಿ ಬಂದಿದೆ.

ಐಫೋನ್ X ಅಲ್ಲ, ಟ್ರೆಂಡ್ ಬದಲಾಯಿಸುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌..!

ಈಗಾಗಲೇ ವಿವೋ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಇದೇ ಮಾದರಿಯಲ್ಲಿ ವಿವೋ X21 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. ನೋಡಲು ಐಫೋನ್ X ಮಾದರಿಯಲ್ಲಿ ಕಾಣಿಸುವ ಈ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್, ಬಳಕೆದಾರರ ಅನುಭವನ್ನು ಉತ್ತಮ ಪಡಿಸಲಿದೆ.

ಓದಿರಿ: ಫಿಲಿಪ್ಸ್ LED ಬಲ್ಬ್ ಹಾಕಿಕೊಂಡರೆ ಸಾಕು: ವೈ-ಫೈ ಬೇಡ-ಮೊಬೈಲ್ ಡೇಟಾ ಬೇಡ.!

19:9 ಅನುಪಾತದ ಡಿಸ್‌ಪ್ಲೇ:

19:9 ಅನುಪಾತದ ಡಿಸ್‌ಪ್ಲೇ:

ವಿವೋ ಸದ್ಯ X ಸರಣಿಯ ಟಾಪ್ ಎಂಡ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡುತ್ತಿದ್ದು, ಈ ಸರಣಿಯ ಮೊದಲ ಸ್ಮಾರ್ಟ್‌ಫೋನ್ ಆಗಿ ವಿವೋ X21 ಕಾಣಿಸಿಕೊಳ್ಳುತ್ತಿದೆ. ಈ ಸ್ಮಾರ್ಟ್‌ಫೋನ್ 6.28 ಇಂಚಿನ FHD+ ಗುಣಮಟ್ಟದ ಸೂಪರ್ ಅಮೋಲೈಡ್ ಡಿಸ್‌ಪ್ಲೇ ಹೊಂದಿದ್ದು, ಮುಂಭಾಗದಲ್ಲಿ ಐಫೋನ್ X ಮಾದರಿಯಲ್ಲಿ ನೋಚ್ ವಿನ್ಯಾಸವನ್ನು ಕಾಣಬಹುದಾಗಿದೆ.

ಇನ್ ಡಿಸ್‌ಪ್ಲೇ ಫಿಂಗರ್ ಪ್ರಿಂಟ್:

ಇನ್ ಡಿಸ್‌ಪ್ಲೇ ಫಿಂಗರ್ ಪ್ರಿಂಟ್:

ಇದಲ್ಲದೇ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಇನ್ ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಿದ ಸ್ಮಾರ್ಟ್‌ಫೋನ್ ವಿವೋ X21 ಆಗಲಿದ್ದು, ಡಿಸ್‌ಪ್ಲೇ ಕೆಳಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಲಾಗಿದೆ. ಇದು ಡಿಸ್‌ಪ್ಲೇ ಮೇಲೆ ಕಾಣಿಸುವುದಿಲ್ಲ ಎನ್ನಲಾಗಿದೆ.

ಐಫೋನ್ ಮಾದರಿಯ ಡ್ಯುಯಲ್ ಲೈನ್ಸ್ ಕ್ಯಾಮೆರಾ:

ಐಫೋನ್ ಮಾದರಿಯ ಡ್ಯುಯಲ್ ಲೈನ್ಸ್ ಕ್ಯಾಮೆರಾ:

ಇದಲ್ಲದೇ ವಿವೋ X21 ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಐಫೋನ್ X ರೀತಿ ಒಂದರ ಕೆಳಗೆ ಮತ್ತೊಂದು ಕ್ಯಾಮೆರಾ ಮಾದರಿಯಲ್ಲಿ 12 MP + 5 MPಯ ಡ್ಯುಯಲ್ ಲೈನ್ಸ್ ಗಳನ್ನು ಒಳಗೊಂಡಿದೆ. ಇದರೊಂದಿಗೆ ಮುಂಭಾಗದಲ್ಲಿ 12 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಎರಡು ಕ್ಯಾಮೆರಾಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಸಲುವಾಗಿ ಕೃತಕ ಬುದ್ದಿ ಮತ್ತೆಯನ್ನು ಅಳವಡಿಸಲಾಗಿದೆ.

ವೇಗದ ಫೋನ್:

ವೇಗದ ಫೋನ್:

ವಿವೋ X21 ಸ್ಮಾರ್ಟ್‌ಫೋನಿನಲ್ಲಿ 6GB RAM ನೀಡಲಾಗಿದ್ದು, ಇದು ಫೋನಿನ ವೇಗವನ್ನು ಹೆಚ್ಚು ಮಾಡಲಿದೆ. ಇದರೊಂದಿಗೆ ಸ್ನಾಪ್‌ಡ್ರಾಗನ್ 660ವನ್ನು ಕಾಣಬಹುದಾಗಿದ್ದು, ಸ್ಮಾರ್ಟ್‌ಪೋನ್ ಉತ್ತಮವಾಗಿ ಕಾರ್ಯನಿರ್ವಹಿಸಲು ಈ ಪ್ರೋಸೆಸರ್ ಸಹಾಯವನ್ನು ಮಾಡಲಿದೆ. ಇದರೊಂದಿಗೆ ಕೃತಕ ಬುದ್ದಿಮತ್ತೆಯನ್ನು ಸಹ ಅಳವಡಿಸಲಾಗಿದೆ.

ಆಂಡ್ರಾಯ್ಡ್ ಒರಿಯೋ:

ಆಂಡ್ರಾಯ್ಡ್ ಒರಿಯೋ:

ವಿವೋ X21 ಸ್ಮಾರ್ಟ್‌ಫೋನ್ ನೂತನ ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ ವಿವೋ ಅಭಿವೃದ್ಧಿ ಪಡಿಸಿರುವ ಫನ್‌ಟಚ್ OS 4.0ವನ್ನು ನೀಡಲಾಗಿದೆ. ಇದು ಆಂಡ್ರಾಯ್ಡ್ ಬಳಕೆಯನ್ನು ಇನ್ನಷ್ಟು ಉತ್ತಮಪಡಿಸಲಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಬೆಲೆಗಳು:

ಬೆಲೆಗಳು:

ವಿವೋ X21 ಸ್ಮಾರ್ಟ್‌ಫೋನ್ ಒಟ್ಟು ಎರಡು ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದು, 6GB RAM ಮತ್ತು 63GB ಇಂಟರ್ನಲ್ ಮೆಮೊರಿ ಆವೃತ್ತಿಯ ಅಂದಾಜು ಬೆಲೆ ರೂ.29,000 ಆಗಲಿದ್ದು, ಇದೇ ಮಾದರಿಯಲ್ಲಿ 6GB RAM ಮತ್ತು 128GB ಇಂಟರ್ನಲ್ ಮೆಮೊರಿಯ ಆವೃತ್ತಿಯ ಅಂದಾಜು ಬೆಲೆ ರೂ.37,000 ಆಗಲಿದೆ.

Best Mobiles in India

English summary
Vivo X21 with 6.28-inch FHD+ 19:9 display, dual rear cameras, in-display fingerprint sensor, Android 8.1 announced. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+