ಲಾಂಚ್ ಆಯ್ತು ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್!! ಊಹಾಪೋಹಕ್ಕೆ ತೆರೆಎಳೆದ "ನೋಕಿಯಾ 6"!!!
"ನೋಕಿಯಾ 6" ಸ್ಮಾರ್ಟ್‌ಫೋನ್ ಪ್ರಖ್ಯಾತ ಸ್ಮಾರ್ಟ್‌ಫೋನ್ ಮಾಹಿತಿದಾರ ಸಂಸ್ಥೆಗಳು ಬಿಡುಗಡೆ ಮಾಡಿದ್ದ ಮಾಹಿತಿಗಿಂತಹೆಚ್ಚು ಫೀಚರ್ಸ್ ಹೊಂದಿದೆ.! ಆಂಡ್ರಾಯ್ಡ್ 7.0 ನ್ಯೂಗಾ, 5.5 ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿರುವ ನೋಕಿಯಾ??
ಸ್ಮಾರ್ಟ್‌ಫೋನ್ ಪ್ರಿಯರ ಬಹುದಿನದ ಕನಸಾಗಿರುವ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.!! ಹೌದು, ನೋಕಿಯಾದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ "ನೋಕಿಯಾ 6" ಭಾನುವಾರ ಬಿಡುಗಡೆಯಾಗಿದೆ!! ಈ ಮೂಲಕ ಬಹುದಿನಗಳಿಂದಲೂ ನೋಕಿಯಾ ಆಂಡ್ರಾಯ್ಡ್ ಬಗ್ಗೆ ಹರಿದಾಡುತ್ತಿದ್ದ ರೂಮರ್ಸ್‌ಗೆ ಬ್ರೇಕ್ ಬಿದ್ದಿದೆ.!
ಹೆಚ್‌ಎಂಡಿ ಗ್ಲೋಬಲ್ ನೋಕಿಯಾ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ತನ್ನ ಅಫಿಶಿಯಲ್ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡುವುದಾಗಿ ತಿಳಿಸಿದೆ. ಇನ್ನು ಮಾರ್ಚ್ 21 ನೇ ತಾರೀಖು ಬಿಡುಗಡೆಯಾಗುವುದಾಗಿ ರೂಮರ್ ಹುಟ್ಟಿಸಿದ್ದ ನೋಕಿಯಾ ಸ್ಮಾರ್ಟ್‌ಫೋನ್, ಇದೀಗ ಎಲ್ಲರಿಗೂ ಅಚ್ಚರಿ ನೀಡುವಂತೆ ಅತ್ಯದ್ಬುತ ಫೀಚರ್ ಒಳಗೊಂಡು ಮಾರುಕಟ್ಟೆಗೆ ಬಿಡುಗಡೆಯಾಗಿದೆ!

ಓದಿರಿ:2017 ರಲ್ಲಿ ಫೇಸ್‌ಬುಕ್ ಸಂಸ್ಥಾಪಕನ ಗುರಿಯೇನು? ಏನಾದರೂ ಸಾಧಿಸಬೇಕೆ ಈ ಲೇಖನ ಓದಿ!!
"ನೋಕಿಯಾ 6" ಸ್ಮಾರ್ಟ್‌ಫೋನ್ ಪ್ರಖ್ಯಾತ ಸ್ಮಾರ್ಟ್‌ಫೋನ್ ಮಾಹಿತಿದಾರ ಸಂಸ್ಥೆಗಳು ಬಿಡುಗಡೆ ಮಾಡಿದ್ದ ಮಾಹಿತಿಗಿಂತಹೆಚ್ಚು ಫೀಚರ್ಸ್ ಹೊಂದಿದೆ.! ಆಂಡ್ರಾಯ್ಡ್ 7.0 ನ್ಯೂಗಾ, 5.5 ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿರುವ ನೋಕಿಯಾ ಸ್ಮಾರ್ಟ್‌ಫೋನ್ 4GB RAM ಹೊಂದಿರುವುದು ನೋಕಿಯಾದ ಫೀಚರ್‌ಹೇಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ನೂತನವಾಗಿ ಲಾಂಚ್ ಆಗಿರುವ ನೋಕಿಯಾದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಪ್ರಸ್ತುತ ಇರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗಿಗೆ ಪೈಪೋಟಿ ನೀಡುವಂತಿದ್ದು, ಹಾಗಾದರೆ "ನೋಕಿಯಾ 6" ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಹೊಂದಿರುವ ಎಲ್ಲಾ ಫೀಚರ್‌ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ!
ಬಿಡುಗಡೆಯಾಗಿರುವ "ನೋಕಿಯಾ 6" ಆಂಡ್ರಾಯ್ಡ್ ಸ್ಮಾರ್ಟ್‌ಫೋನ್, ಇಂದಿನ ಸ್ಮಾರ್ಟ್‌ಫೋನ್ ಪ್ರಿಯರ ಇಚ್ಚೆಯಂತೆ 5.5 ಇಂಚ್ ಹೆಚ್‌ಡಿ (ಗೋರಿಲ್ಲಾ2.5) ಡಿಸ್‌ಪ್ಲೇಯನ್ನು ಹೊಂದಿದೆ.

ಆಂಡ್ರಾಯ್ಡ್ ನ್ಯೂಗಾ 7.0!!
ಮಾರುಕಟ್ಟೆಗೆ ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ ನೂತನ ಆಂಡ್ರಾಯ್ಡ್ ವರ್ಷನ್ "ಆಂಡ್ರಾಯ್ಡ್ ನ್ಯೂಗಾ 7.0" ಸಿಸ್ಟಮ್ ಮೂಲಕ "ನೋಕಿಯಾ 6" ಸ್ಮಾರ್ಟ್‌ಫೋನ್ ರನ್ ಆಗಲಿದೆ. ಪ್ರಮುಖ ಕಂಪೆನಿಗಳ ಕೆಲವೇ ಕೆಲವು ಸ್ಮಾರ್ಟ್‌ಫೊನ್‌ಗಳು ಮಾತ್ರ ಈ ರೀತಿಯ ಅಪ್‌ಡೇಟ್ ಹೊಂದಿದೆ.

4GB RAm ಮತ್ತು 64GB ROM!!
ಸ್ಮಾರ್ಟ್‌ಫೋನ್ ಪ್ರಪಂಚವೇ ಊಹಿಸಲು ಸಾಧ್ಯವಾಗದ ರಿತಿಯಲ್ಲಿ "ನೋಕಿಯಾ 6" ಸ್ಮಾರ್ಟ್‌ಫೋನ್ 4GB RAm ಮತ್ತು 64GB ಆಂತರಿ ಮೆಮೊರಿಯನ್ನು ಹೊಂದಿದೆ. ಇನ್ನಾವ ಕಂಪೆನಿ ಸ್ಮಾರ್ಟ್‌ಪೊನ್‌ಗಳು ಸಹ ಇಷ್ಟು ಫೀಚರ್ ಹೊಂದಿಲ್ಲ ಎನ್ನಬಹುದು.

16 ಮೆಗಾಪಿಕ್ಸೆಲ್ ಕ್ಯಾಮೆರಾ!!
"ನೋಕಿಯಾ 6" ಸ್ಮಾರ್ಟ್‌ಫೋನ್ 16 ಮೆಗಾಪಿಕ್ಸೆಲ್ ಇರುವ ಫೆಸ್ ಡಿಟೆಕ್ಷನ್, ಆಟೊ ಫೋಕಸ್ ಮತ್ತು ಡ್ಯುಯಲ್ ಟೋನ್ ಫೀಚರ್ ಹೊಂದಿರುವ ಅತ್ಯದ್ಬುತ ಹಿಂದಿನ ಕ್ಯಾಮೆರಾ ಕ್ಯಾಮೆರಾ ಹೊಂದಿದೆ. ಇನ್ನು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಉತ್ತಮ ಸೆಲ್ಫಿ ಚಿತ್ರಗಳನ್ನು ತೆಗೆಯಬಹುದಾಗಿದೆ.

ಬೆಲೆ ಎಷ್ಟು?
"ನೋಕಿಯಾ 6" ಸ್ಮಾರ್ಟ್‌ಫೋನ್ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಇನ್ನು ಕಲವು ದಿನಗಳು ಕಾಯಬೇಕಿದೆ. ಚೀನಾದಲ್ಲಿ ನೂತನ "ನೋಕಿಯಾ 6" ಸ್ಮಾರ್ಟ್‌ಪೋನ್ 16,750 ರೂಪಾಯಿಗೆ ಬಿಡುಗಡೆಗೊಂಡಿದೆ. ಇನ್ನು . ಭಾರತದಲ್ಲಿ "ನೋಕಿಯಾ 6" ಸ್ಮಾರ್ಟ್‌ಫೋನ್ ಬೆಲೆ ಕಡಿಮೆಯಾಗಲಿದೆ ಎಂದು ರೂಮರ್ ಆಗಲೇ ಹರಿದಾಡಿ ಹುಟ್ಟಿದೆ.!!


Click it and Unblock the Notifications








