2017 ರಲ್ಲಿ ಫೇಸ್‌ಬುಕ್ ಸಂಸ್ಥಾಪಕನ ಗುರಿಯೇನು? ಏನಾದರೂ ಸಾಧಿಸಬೇಕೆ ಈ ಲೇಖನ ಓದಿ!!

Written By:

ಪ್ರತಿ ಹೊಸವರ್ಷವೂ ಏನಾದರೂ ಒಂದು ಸಾಧನೆ ಮಾಡುವ ಗುರಿಯನ್ನು ಎಲ್ಲರೂ ಹಾಕಿಕೊಳ್ಳುವುದು ವಾಡಿಕೆಯಾಗಿಬಿಟ್ಟಿದೆ.! ಆದರೆ, ಹೀಗೆ ಗುರಿ ಇಟ್ಟುಕೊಂಡಿರುವ ಕೆಲವರು ಮಾತ್ರ ತಮ್ಮ ಗುರಿ ಸಾಧನೆಗಳನ್ನು ತಲುಪುತ್ತಾರೆ. ಇನ್ನುಳಿದ ಬಹುಸಂಖ್ಯಾತರು ತಮ್ಮ ಗುರಿಗಳನ್ನು ತಲುಪುವಲ್ಲಿ ವಿಫಲಗೊಳ್ಳುತ್ತಾರೆ.

ಯಾಕೆ ಹೀಗಾಗುತ್ತದೆ ಎನ್ನುವುದಕ್ಕೆ ಮತ್ತೆ ಅದೇ ಕಾರಣ ದೃಡ ಮನಸ್ಸು ಮಾಡದಿರುವುದು. ಹೌದು, ನಾವು ಏನಾದರೂ ಸಾಧನೆ ಮಾಡಬೇಕು ಎಂದಿದ್ದರೆ ಮೊದಲು ದೃಡ ಮನಸ್ಸುಮಾಡಿ. ನಂತರ ಅದನ್ನು ನಿಯಮಿತವಾಗಿ ಕಾರ್ಯ ರೂಪಕ್ಕೆ ತರಬೇಕು. ಆಗ ಆಗ ಮಾತ್ರ ನಮ್ಮ ಎಲ್ಲಾ ಗುರಿಗಳನ್ನು ತಲುಪಲು ಸಾಧ್ಯ. ಇದಕ್ಕೆ ಒಂದು ಉದಾಹರಣೆಯೇ ಟೆಕ್ ದಿಗ್ಗಜ ಫೇಸ್‌ಬುಕ್‌ ಸಂಸ್ಥಾಪಕರ ನಿರ್ದಿಷ್ಟ ಗುರಿ.

2017 ರಲ್ಲಿ ಫೇಸ್‌ಬುಕ್ ಸಂಸ್ಥಾಪಕನ ಗುರಿಯೇನು? ಏನಾದರೂ ಸಾಧಿಸಬೇಕೆ ಈ ಲೇಖನ ಓದಿ!!

ಜಿಯೋಯಿಂದ ಮತ್ತೊಂದು ಆಫರ್!..ಜಿಯೋಗೆ ಪೋರ್ಟ್ ಆಗುವ ಅವಕಾಶ!! ಫೋರ್ಟ್ ಆಗುವುದು ಹೇಗೆ?

ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಇಂದು ಒಂದು ಫೇಸ್‌ಬುಕ್ ಎಂಬ ಪ್ರಪಂಚದ ಒಡೆಯ!!. 100 ತಲೆಮಾರು ಕುಳಿತು ತಿಂದರೂ ಕರಗದಷ್ಟು ಆಸ್ತಿ. ಆದರೆ, ತನ್ನ 97% ಆಸ್ತಿಯನ್ನು ಸಮಾಜದ ಉದ್ದಾರಕ್ಕಾಗಿ ಮೀಸಲಿಟ್ಟಿರುವ ಜುಕರ್‌ಬರ್ಗ್ ಪ್ರತಿವರ್ಷವೂ ಒಂದೊಂದು ಗುರಿಯನ್ನು ಇಟ್ಟುಕೊಳ್ಳುತ್ತರೆ. ಹಾಗೆಯೇ ಈ ವರ್ಷದ ತನ್ನ ಗುರಿಯೇನು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

2016 ನೇ ಅದ್ವಿತೀಯ ವರ್ಷದ ನಂತರ ನಾನು 2017 ರಲ್ಲಿ ಪ್ರಪಂಚ ಪರ್ಯಟನೆ ಮಾಡಬೇಕು ಎಂದು ನಿರ್ಧರಿಸಿದ್ದೇನೆ. ಎಲ್ಲಡೆ ತಿರುಗಿ ಜನರು ಹೇಗೆ ಬದುಕುತ್ತಿದ್ದಾರೆ, ಏನು ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ಅವರ ಮುಂದಿನ ಭವಿಷ್ಯದ ಬಗ್ಗೆ ತಿಳಿಯುವ ಹಂಬಲ ನನಗಿದೆ ಎಂದು ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.

2017 ರಲ್ಲಿ ಫೇಸ್‌ಬುಕ್ ಸಂಸ್ಥಾಪಕನ ಗುರಿಯೇನು? ಏನಾದರೂ ಸಾಧಿಸಬೇಕೆ ಈ ಲೇಖನ ಓದಿ!!

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ರಿಲೀಸ್ ಡೇಟ್ ಫಿಕ್ಸ್!..ಆದಷ್ಟು ಬೇಗ!!

ಇನ್ನು ನಾವು ಇತಿಹಾಸದ ರಚನೆಯಲ್ಲಿ ಇದ್ದೇವೆ, ಇದು ನಮಗೆ ಅವಶ್ಯಕವಾಗಿದೆ. ಕೇವಲ ಹತ್ತಿಪತ್ತು ವರ್ಷಗಳಲ್ಲಿ ತಂತ್ರಜ್ಞಾನ ಮತ್ತು ಜಾಗತೀಕರಣ ಎಲ್ಲರ ಜೀವನ ವಿಧಾನವನ್ನು ಬದಲಾಯಿಸಿದೆ. ಆದರೆ, ಹಲವರು ಇನ್ನು ಕಷ್ಟದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಅವರ ಬದುಕನ್ನು ಸರಳೀಕರಿಸುವ ಭಾರ ನನ್ನ ಮೇಲಿದೆ ಎಂದು ಹೇಳಿದ್ದಾರೆ.

2017 ರಲ್ಲಿ ಫೇಸ್‌ಬುಕ್ ಸಂಸ್ಥಾಪಕನ ಗುರಿಯೇನು? ಏನಾದರೂ ಸಾಧಿಸಬೇಕೆ ಈ ಲೇಖನ ಓದಿ!!

ಈ ಗುರಿಯನ್ನು ಈಡೇರಿಸಲು ದೃಡಚಿತ್ತದಿಂದ ಇದ್ದೇನೆ ಎಂದು ಅವರು ಹೇಳುತ್ತಾರೆ. ಸಮಾಜದ ಉದ್ದಾರಕ್ಕಾಗಿಯೇ ದೃಡ ಮನಸ್ಸು ಹೊಂದುವ ಇಂತವರು ಇರುವಾಗ. ಕೆಲವೇ ಕೆಲವು ಸಣ್ಣ ಆಸೆಗಳನ್ನು ಪೂರೈಸಲು ನಮಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ದೃಡ ಮನಸ್ಸು ಮಾಡಿ ಯಶಸ್ಸುಗಳಿಸಿರಿ.

English summary
Hope he has frequent-flier miles! Facebook founder Mark Zuckerberg revealed on the social media platform Tuesday. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot