Subscribe to Gizbot

ಶೀಘ್ರವೇ ಭಾರತದಲ್ಲಿ ದೊರೆಯಲಿದೆ ನೋಕಿಯಾ 6 ಸ್ಮಾರ್ಟ್‌ಪೋನು..!!

Written By:

ಚೀನಾದಲ್ಲಿ ಈಗಾಗಲೇ ಲಾಂಚ್ ಆಗಿರುವ ನೋಕಿಯಾ 6 ಕುರಿತು ವರ್ಲ್ಡ್ ಮೊಬೈಲ್ ಕಾಂಗ್ರೆಸ್‌ ನಲ್ಲಿ ನೋಕಿಯಾ ಮಾಹಿತಿ ನೀಡಿದ್ದು, ಈ ಪೋನು ಸೇರಿದಂತೆ ಮೂರು ಸ್ಮಾರ್ಟ್‌ಪೋನುಗಳನ್ನು ಜಾಗತಿಕವಾಗಿ ಬಿಡುಗಡೆ ಮಾಡಿದೆ. ನೋಕಿಯಾ 6 ಮಧ್ಯಮ ಬೆಲೆಯ ಪೋನಾಗಿದೆ, ಈ ಪೋನು ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯಲಿದೆ ಎನ್ನಲಾಗಿದೆ.

ಶೀಘ್ರವೇ ಭಾರತದಲ್ಲಿ ದೊರೆಯಲಿದೆ ನೋಕಿಯಾ 6 ಸ್ಮಾರ್ಟ್‌ಪೋನು..!!

ಓದಿರಿ: 2 GB RAM, 8 MP ಸೆಲ್ಫಿ ಕ್ಯಾಮೆರಾ ಇರುವ ನೋಕಿಯಾ 3 ಸ್ಮಾರ್ಟ್‌ಪೋನ್‌ ಬೆಲೆ 9,800 ಮಾತ್ರ..!!

ನೋಕಿಯಾ 6 ಸ್ಮಾರ್ಟ್‌ಪೋನು ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಧೂಳ್ ಎಬ್ಬಿಸಿದ್ದು, ಭಾರತೀಯ ರೂಪಾಯಿಯಲ್ಲಿ 21,000 ರೂಗಳಿಗೆ ಮಾರಾಟವಾಗುತ್ತಿದೆ. ಭಾರತದಲ್ಲಿ ಲಾಂಚ್ ಆದಲ್ಲಿ ಸುಮಾರು 18,000 ರೂಗಳಿಗೆ ಮಾರಾಟವಾಗುವ ಸಾಧ್ಯತೆಗಳಿದೆ. ಈ ಪೋನಿನ ವಿಶೇಷತೆ ಕೆಳಗಿನಂತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.5 ಇಂಚಿನ Full HD ಡಿಸ್‌ಪ್ಲೇ:

5.5 ಇಂಚಿನ Full HD ಡಿಸ್‌ಪ್ಲೇ:

ನೋಕಿಯಾ 6 ಸ್ಮಾರ್ಟ್‌ಪೋನಲ್ಲಿ ದೊಡ್ಡ ಡಿಸ್‌ಪ್ಲೇ ಇದ್ದು, 5.5 ಇಂಚಿನ Full HD ಡಿಸ್‌ಪ್ಲೇ ಹೊಂದಿದ್ದು, 2.5D ಗೋರಿಲ್ಲ ಗ್ಲಾಸ್ ರಕ್ಷಣೆ ಸಹ ಡಿಸ್‌ಪ್ಲೇಗಿದೆ. ಗುಣಮಟ್ಟದ ವಿಡಿಯೋ ವಿಕ್ಷಣೆ ಮತ್ತು ಗ್ರಾಫಿಕ್ಸ್ ಹೆಚ್ಚಿರುವ ಗೇಮ್ ಆಡಲು ಹೇಳಿ ಮಾಡಿಸಿದಂತಿದೆ.

ಎರಡು ಮಾದರಿಯಲ್ಲಿ ಲಭ್ಯ:

ಎರಡು ಮಾದರಿಯಲ್ಲಿ ಲಭ್ಯ:

ಸ್ನಾಪ್‌ಡ್ರಾಗನ್ 430 ಪ್ರೋಸೆಸರ್ ಹೊಂದಿರುವ ನೋಕಿಯಾ 6 ಸ್ಮಾರ್ಟ್‌ಪೋನು ಎರಡು ಮಾದರಿಯಲ್ಲಿ ಲಭ್ಯವಿರಲಿದ್ದು, 3GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಒಂದು ಮಾದರಿ ಮತ್ತು 4GB RAM ಮತ್ತು 64GB ಇಂಟರ್ನಲ್ ಮೆಮೊರಿ ಇರುವ ಮತ್ತೊಂದು ಮಾದರಿಯೂ ಲಭ್ಯವಿದೆ. ಅಲ್ಲದೇ ನೂತನ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಸಲಿದೆ.

16 MP/ 8 MP ಕ್ಯಾಮೆರಾ:

16 MP/ 8 MP ಕ್ಯಾಮೆರಾ:

ನೋಕಿಯಾ 6 ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ ಡುಯಲ್ ಟೋನ್ LED ಫ್ಲಾಶ್ ನೊಂದಿಗೆ 16 MP ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದೆ, ಇದರೊಂದಿಗೆ ಡಾಲ್ಬಿ ಆಡಿಯೋ ಸಹ ಈ ಪೋನಿನಲ್ಲಿದೆ.

 3000mAh ಬ್ಯಾಟರಿ:

3000mAh ಬ್ಯಾಟರಿ:

ನೋಕಿಯಾ 6 ಸ್ಮಾರ್ಟ್‌ಪೋನಿನಲ್ಲಿ 3000mAh ಬ್ಯಾಟರಿ ಅಳವಡಿಸಲಾಗಿದ್ದು, ಜೊತೆಗೆ ವೇಗದ ಚಾರ್ಜಿಂಗ್ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದ್ದು, ಆದರೆ ಬ್ಯಾಟರಿ ತೆಗೆಯಲು ಸಾಧ್ಯವಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
HMD Global announced at the Nokia MWC 2017 event. And if the Nokia 6 price in Europe is any indicator, we can expect the price to remain within affordable limits when it launches in India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot