Subscribe to Gizbot

ನೋಕಿಯಾದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ ನಿರ್ಮಿಸಿತು ದಾಖಲೆ!! ಏನು ಗೊತ್ತಾ?

Written By:

ಬಿಡುಗಡೆಯಾದ 24 ಗಂಟೆಗಳಲ್ಲಿಯೇ ನೋಕಿಯಾದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ ಚಿಕ್ಕದೊಂದು ದಾಖಲೆ ನಿರ್ಮಿಸಿದೆ! ಹೌದು, ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ "ನೋಕಿಯಾ 6" ಖರೀದಿಸಲು 24 ಗಂಟೆಗಳಲ್ಲಿ 2,50,000 ಜನ ಸ್ಮಾರ್ಟ್‌ಫೋನ್‌ಗಾಗಿ ನೊಂದಣಿ ಮಾಡಿಸಿ ದಾಖಲೆಯಾಗಿದೆ.!

ಇದೇ ಜನವರಿ 19 ನೇ ತಾರೀಖಿನಂದು ಚೀನಾದಲ್ಲಿ ಬಿಡುಗಡೆಗೊಂಡಿದ್ದ "ನೋಕಿಯಾ 6" ಸ್ಮಾರ್ಟ್‌ಫೋನ್ ಚೀನಾದ JD.COM ವೆಬ್‌ಸೈಟ್‌ನಲ್ಲಿ ನಲ್ಲಿ ಮಾತ್ರ ಮಾರಾಟಕ್ಕಿಡಲಾಗಿತ್ತು, ಇನ್ನು ನೋಕಿಯಾ 6 ಸ್ಮಾರ್ಟ್‌ಫೋನ್ ಖರೀದಿಸಲು JD.COM ನೊಂದಣಿ ಮಾಡಲು ಅವಕಾಶ ನೀಡಿತ್ತು, ಹಾಗಾಗಿ, ಕೇವಲ 24 ಗಂಟೆಗಳಲ್ಲಿ 2,50,000 ಜನ ನೊಂದಣಿ ಮಾಡಿಸಿದ್ದಾರೆ.

ನೋಕಿಯಾದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ ನಿರ್ಮಿಸಿತು ದಾಖಲೆ!! ಏನು ಗೊತ್ತಾ?

ಪಾನ್‌ಕಾರ್ಡ್ ಕಳೆದು, ಕಾರ್ಡ್ ಸಂಖ್ಯೆ ಮರೆತರೆ!?..ಆನ್‌ಲೈನ್‌ನಲ್ಲಿ ಹೀಗೆ ತಿಳಿಯಿರಿ!?

4GB RAM ಮತ್ತು 64GB ಆಂತರಿಕ ಮೆಮೊರಿ 5.5 ಇಂಚ್‌ ಡಿಸ್‌ಪ್ಲೇ ಜೊತೆಗೆ ಅತ್ಯಾಧುನಿಕ ಫೀಚರ್‌ ಹೊಂದಿರುವ ನೋಕಿಯಾ 6 ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದ್ದು, ಜೊತೆಗೆ ಬ್ರಾಂಡ್‌ನಲ್ಲಿ ಮನಸೆಳೆದಿರುವುದರಿಂದ ಇಷ್ಟು ಜನರು ನೊಂದಣಿ ಮಾಡಿಸಿದ್ದಾರೆ.

ನೋಕಿಯಾದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ ನಿರ್ಮಿಸಿತು ದಾಖಲೆ!! ಏನು ಗೊತ್ತಾ?

24 ಗಂಟೆಗಳಲ್ಲಿ 2,50,000 ಜನ ಸ್ಮಾರ್ಟ್‌ಫೋನ್‌ಗಾಗಿ ನೊಂದಣಿ ಮಾಡಿಸಿರುವುದರಿಂದ ಗುಣಮಟ್ಟದ ಸ್ಮಾರ್ಟ್‌ಪೊನ್‌ಗಳು ಎಂದರೆ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಎನ್ನುವ ಭಾವನೆ ಜನರ ಮನಸ್ಸಿನಲ್ಲಿ ಅಚ್ಚಾಗಿ ಉಳಿದಿರುವುದಕ್ಕೆ ಇದು ಸಾಕ್ಷಿಯಾಗಿದ್ದು, ನೋಕಿಯಾ ತನ್ನ ಇನ್ನೆರಡು ಸ್ಮಾರ್ಟ್‌ಫೊನ್‌ಗಳನ್ನು ಫೆಬ್ರವರಿಗೆ ಬಿಡುಗಡೆ ಮಾಡುತ್ತಿದೆ.

English summary
Nokia 6 pre-registrations on JD.com in China exceed 2,50,000 in less than 24 hours after availability. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot