Subscribe to Gizbot

ಮತ್ತೊಂದು ಹೊಸ ಅವತಾರದಲ್ಲಿ ನೋಕಿಯಾ ಸ್ಮಾರ್ಟ್‌ಫೋನ್..!

Written By:

ಈಗಾಗಲೇ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಹಾಗೂ ಫೀಚರ್ ಫೋನ್‌ ಮೂಲಕ ಸದ್ದು ಮಾಡುತ್ತಿರುವ ನೋಕಿಯಾ, ಮತ್ತೊಂದು ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಲು ಮುಂದಾಗಿದೆ. ನೋಕಿಯಾ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಸಿಕೊಂಡಿರುವ ಕಾರಣ ಮತ್ತೇ ಒಟ್ಟು ನಾಲ್ಕು ಫೋನ್‌ಗಳು ಬಿಡುಗಡೆಯಾಗಲಿದೆ.

ಮತ್ತೊಂದು ಹೊಸ ಅವತಾರದಲ್ಲಿ ನೋಕಿಯಾ ಸ್ಮಾರ್ಟ್‌ಫೋನ್..!

ಓದಿರಿ: ವಾಟ್ಸ್‌ಆಪ್‌ಗೆ ಲೀಗಲ್ ನೋಟಿಸ್‌ ನೀಡಲು ಕಾರಣ ಈ ಎಮೋಜಿ..!

ಮೂಲಗಳ ಪ್ರಕಾರ, ನೋಕಿಯಾ 7 ಸ್ಮಾರ್ಟ್‌ಫೋನ್‌ ಅನ್ನು ಇದೇ ಜನವರಿ 19 ರಂದು ಲಾಂಚ್ ಮಾಡಲಿದೆ ಎನ್ನಲಾಗಿದೆ. ಈಗಾಗಲೇ ಈ ಫೋನ್ ಕುರಿತಂತೆ ಸಾಕಷ್ಟು ರೂಮರ್‌ಗಳು ಹರಿದಾಡುತ್ತಿದೆ. ಇದರೊಂದಿಗೆನೋಕಿಯಾ 9 ಮತ್ತು ಹೊಸ ರೂಪವನ್ನು ಪಡೆದುಕೊಂಡಿರುವ ನೋಕಿಯಾ 6 (2018) ಮತ್ತು ನೋಕಿಯಾ 3 (2018) ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 7:

ನೋಕಿಯಾ 7:

ನೋಕಿಯಾ ಈಗಾಗಲೇ ಬಿಡುಗಡೆ ಮಾಡಲು ಸಿದ್ಧಗೊಂಡಿರುವ ನೋಕಿಯಾ 7 ಸ್ಮಾರ್ಟ್‌ಫೋನ್, ಜನವರಿಯಲ್ಲಿ ಚೀನಾ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಇದಾದ ನಂತರದಲ್ಲಿ ವಿಶ್ವ ಮಾರುಕಟ್ಟೆಗೆ ಕಾಲಿಡಲಿದೆ. ನೋಕಿಯಾ 7 ಕುರಿತಂತೆ ಈಗಾಗಲೇ ಹಲವು ರೂಮರ್‌ಗಳು ಶುರುವಾಗಿದೆ.

ಎರಡು ಆವೃತ್ತಿಯಲ್ಲಿ ಲಭ್ಯ:

ಎರಡು ಆವೃತ್ತಿಯಲ್ಲಿ ಲಭ್ಯ:

ನೋಕಿಯಾ 7 ಸ್ಮಾರ್ಟ್‌ಫೋನ್ ಒಟ್ಟು ಎರಡು ಆವೃತ್ತಿಯಲ್ಲಿ ದೊರೆಯಲಿದೆ. ಒಂದು 4GB RAM ಆವೃತ್ತಿ ಮತ್ತೊಂದು 6GB RAM ಆವೃತ್ತಿಯದಾಗಿದೆ. ಕ್ರಮವಾಗಿ ಈ ಎರಡು ಫೋaನ್‌ಗಳ ಬೆಲೆ ಸರಿ ಸುಮಾರು ರೂ.24,443 ಮತ್ತು ರೂ.27,000 ಆಗಲಿದೆ.

ನೋಕಿಯಾ 7 ವಿಶೇಷತೆ:

ನೋಕಿಯಾ 7 ವಿಶೇಷತೆ:

5.2 ಇಂಚಿನ HD ಡಿಸ್‌ಪ್ಲೇಯನ್ನು ಈ ಫೋನಿನಲ್ಲಿ ಕಾಣಬಹುದಾಗಿದೆ. ಇದಲ್ಲದೇ ಸ್ನಾಪ್‌ಡ್ರಾಗನ್ 630 ಚಿಪ್‌ಸೆಟ್‌ನೊಂದಿಗೆ 64GB ಇಂಟರ್ನಲ್ ಮೆಮೊರಿಯನ್ನು ಅಳವಡಿಸಲಾಗಿದೆ. ಟೈಪ್ C- USB ಪೋರ್ಟ್ ಹಾಗೂ 3.5 mm ಇಯರ್ ಫೋನ್ ಜಾಕ್ ಸಹ ಇದೆ.

ಕ್ಯಾಮೆರಾ:

ಕ್ಯಾಮೆರಾ:

ನೋಕಿಯಾ 7 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 16MP ಕ್ಯಾಮೆರಾವನ್ನು ಕಾಣಬಹದಾಗಿದ್ದು, ಇದರೊಂದಿಗೆ ಡ್ಯುಯಲ್ ಟೋನ್ LED ಫ್ಲಾಷ್ ಲೈಟ್ ನೀಡಲಾಗಿದೆ. ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಹಾಗೂ 3000mAh ಬ್ಯಾಟರಿಯಲ್ಲಿ ಈ ಫೋನಿನಲ್ಲಿ ಅಳವಡಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Nokia 7 could launch globally on January 19. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot