ವಾಟ್ಸ್‌ಆಪ್‌ಗೆ ಲೀಗಲ್ ನೋಟಿಸ್ ನೀಡಲು ಕಾರಣ ಈ ಎಮೋಜಿ..!
ದೇಶದಲ್ಲಿ ಅತೀ ಹೆಚ್ಚು ಮಂದಿ ಬಳಕೆ ಮಾಡುತ್ತಿರುವ ಸೋಶಿಯಲ್ ಮೇಸೆಂಜಿಗ್ ತಾಣ, ಫೇಸ್‌ಬುಕ್ ಒಡೆತನಕ್ಕೆ ಸೇರಿರುವ ವಾಟ್ಸ್‌ಆಪ್‌ಗೆ ದೆಹಲಿಯ ವಕೀಲರೊಬ್ಬರು ಲೀಗಲ್ ನೋಟಿಸ್ ನೀಡಿದ್ದಾರೆ. ವಾಟ್ಸ್‌ಆಪ್ ಬಳಕೆದಾರರಿಗೆ ಅಶ್ಲೀಲ ಎಮೋಜಿಗಳನ್ನು ಬಳಕೆಗೆ ನೀಡುತ್ತಿದೆ ಎನ್ನುವುದು ಅವರ ದೂರಾಗಿದೆ.

ಓದಿರಿ: ಜಿಯೋ 4Gಗೆ ಮಾತ್ರವೇ ನೀಡಿದ್ದ ಆಫರ್: ಏರ್‌ಟೆಲ್‌ನಿಂದ ಕಡಿಮೆ ಬೆಲೆಗೆ 2G/3G/4G ಗ್ರಾಹಕರಿಗೆ..!
ವಾಟ್ಸ್‌ಆಪ್ ಚಾಟಿಂಗ್‌ನಲ್ಲಿ ಬಳಕೆ ಮಾಡಿಕೊಳ್ಳಲು ಎಮೋಜಿಗಳನ್ನು ನೀಡುತ್ತಿದ್ದು, ಇದರಲ್ಲಿ ಮಧ್ಯದ ಬೆರಳಿನ ಅಶ್ಲೀಲ ಎಮೋಜಿಯೊಂದು ಸೇರಿಕೊಂಡಿದ್ದು, ಅದನ್ನು 15 ದಿನಗಳ ಒಳಗೆ ತೆಗೆಯುವಂತೆ ಗುರುಮೀತ್ ಸಿಂಗ್ ಎನ್ನುವ ಯುವ ವಕೀಲರೊಬ್ಬರು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.

ಅಶ್ಲೀಲ ಎಮೋಜಿ:
ವಾಟ್ಸ್ಆಪ್ ತನ್ನ ಬಳಕೆದಾರರಿಗೆ ಮಧ್ಯದ ಬೆರಳಿನ ಎಮೋಜಿಯನ್ನು ನೀಡುವ ಮೂಲಕ ನೇರವಾಗಿ ಅಶ್ಲೀಲ ಸಂಜ್ಞೆಯ ಬಳಕೆಗೆ ಉತ್ತೇಜನ ನೀಡಿದಂತಾಗುತ್ತದೆ. ಅದರಿಂದ ಇದನ್ನು ತೆಗೆದು ಹಾಕುವಂವೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.


ಭಾರತದಲ್ಲಿ ಅಪರಾಧ:
IPC ಸೆಕ್ಷನ್ 354 ಮತ್ತು 509ರ ಪ್ರಕಾರ, ಅಶ್ಲೀಲ, ಕೆಟ್ಟದಾದ ಹಾಗೂ ರೇಗಿಸುವಂತಹ ಸಂಜ್ಞೆಗಳನ್ನ ಮಹಿಳೆಯರಿಗೆ ತೋರಿಸುವುದು ಅಪರಾಧ. ಆದ್ದರಿಂದ ಅಶ್ಲೀಲ ಸಂಜ್ಞೆಯನ್ನು ಯಾರೇ ಬಳಸಿದರೂ ಅದು ಕಾನೂನುಬಾಹಿರ ಇದು ಭಾರತದಲ್ಲಿ ಅಪರಾಧ ಎಂದು ವಕೀಲರು ತಿಳಿಸಿದ್ದಾರೆ.

ಎಮೋಜಿಗಳು:
ಈಗಾಗಲೇ ವಾಟ್ಸ್‌ಆಪ್-ಫೇಸ್‌ಬುಕ್‌ಗಳಲ್ಲಿ ಎಮೋಜಿಗಳ ಹಾವಳಿ ಹೆಚ್ಚಾಗಿದ್ದು, ಇದೇ ಕೆಲವು ದಿನಗಳ ಹಿಂದೆ ಬರ್ಗರ್-ಬಿಯರ್ ಎಮೋಜಿಗಾಗಿ ಆಪಲ್-ಗೂಗಲ್ ಕಿತ್ತಾಡಿದ ನೆನಪು ಮಾಸುವ ಮುನ್ನವೇ ಮತ್ತೊಂದು ಎಮೋಜಿ ವಿವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.


Click it and Unblock the Notifications








